HomeLatest Newsನಿಮಗಿದು ಗೊತ್ತೇ? ಇಂಗ್ಲಿಷ್​ನಲ್ಲಿ ಸಮಯ ಹೇಳುವಾಗ 2 O' Clock, 3 O'Clock ಎನ್ನುತ್ತೇವಲ್ಲ, ಈ...

ನಿಮಗಿದು ಗೊತ್ತೇ? ಇಂಗ್ಲಿಷ್​ನಲ್ಲಿ ಸಮಯ ಹೇಳುವಾಗ 2 O’ Clock, 3 O’Clock ಎನ್ನುತ್ತೇವಲ್ಲ, ಈ ‘ಓ’ ಅಂದ್ರೇನು, ಅದು ಎಲ್ಲಿಂದ ಬಂತು?

ಬೆಂಗಳೂರು: ಇಂಗ್ಲಿಷ್‌ನಲ್ಲಿ ಸಮಯ ಹೇಳುವಾಗ ಬಳಸುವ ‘O’ clock ಎಂದರೇನು? ಅದು ಎಕ್ಲಿಂದ ಬಂತು? ಈ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇಂಗ್ಲಿಷ್​ನಲ್ಲಿ ಮಾತನಾಡುವಾಗ ನಾವು 2 ಗಂಟೆ, 3 ಗಂಟೆಗೆ 2 ಓ ಕ್ಲಾಕ್​, 3 ಓ ಕ್ಲಾಕ್​ (2 O’clock, 3 O’clock) ಅಂತ ಹೇಳ್ತೇವೆ. ಆದರೆ ಒಮ್ಮೆಯಾದರೂ ಈ ‘O’ ಎಲ್ಲಿಂದ, ಯಾಕೆ ಬಂತು ಎಂದು ಯೋಚನೆ ಮಾಡಿದ್ದೀವಾ?. 3 ಕ್ಲಾಕ್​, 4 ಕ್ಲಾಕ್​ ಅನ್ನಬಹುದಿತ್ತು. ಆದರೆ ‘ಓ’ ಅಂತ ಮಧ್ಯೆ ಸೇರಿಸೋದು ಯಾಕೆ ಅನ್ನೋದು ಬಹುತೇಕ ಜನರಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ. ಹಲವು ಬಾರಿ ಈ ಬಗ್ಗೆ ಯೋಚಿಸಿದ್ದರೂ ಹಲವರುಗೆ ಉತ್ತರ ಸಿಕ್ಕಿರುವುದಿಲ್ಲ. ಆದರೆ ಇಲ್ಲಿ ಈ ’O’ ಹಿಂದಿನ ರೋಚಕ ಕಥೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘O’ clock ಎಂಬ ಪದವು 14-15ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಸೂರ್ಯನ ಸಮಯ ಮತ್ತು ಯಾಂತ್ರಿಕ ಗಡಿಯಾರದ ಸಮಯವನ್ನು ಪ್ರತ್ಯೇಕಿಸಲು ‘Of the clock’ ಎಂಬುದನ್ನು ಬಳಸಲಾಗುತ್ತಿತ್ತು. ಕಾಲಕ್ರಮೇಣ ಇದು ‘O’ ಆಗಿ ಬದಲಾಯಿತು ಮತ್ತು ನಿಮಿಷದ ಮುಳ್ಳು ಇಲ್ಲದ ಕಾರಣ ಗಂಟೆಗಳಿಗೆ ಮಾತ್ರ ಸೀಮಿತವಾಯಿತು.

14 ರಿಂದ 15ನೇ ಶತಮಾನದಲ್ಲಿ ಅರ್ಥಾತ್​ Middle English ಕಾಲದಲ್ಲಿ, ಯಾಂತ್ರಿಕ ಗಡಿಯಾರಗಳು ಹೊಸದಾಗಿ ಚಾಲ್ತಿಗೆ ಬಂದಿತ್ತು. ಅಲ್ಲಿಯವರೆಗೂ ಜನರು ಸೂರ್ಯನ ಬೆಳಕು, ನೆರಳಿನ ಆಧಾರದ ಮೇಲೆ ಟೈಮ್​ ನೋಡ್ತಿರೋದು ಗೊತ್ತೇ ಇದೆ. ಆ ಸಮಯದಲ್ಲಿ ಗಡಿಯಾರಗಳು ಚಾಲ್ತಿಗೆ ಬಂದಾಗ, ಸೂರ್ಯನ ಸಮಯಕ್ಕೂ, ಗಡಿಯಾರ ತೋರಿಸುವ ಸಮಯದಲ್ಲಿ ಸುಮಾರು ವ್ಯತ್ಯಾಸ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ, ಯಾವ ಟೈಮ್​ ಹೇಳ್ತಿರೋದು ಎಂದು ಸರಿಯಾಗಿ ಸೂಚಿಸಲು ಒಂದು ಶಬ್ದ ಬೇಕಿತ್ತು. ಆಗಲೇ ಹುಟ್ಟಿರೋದು ಈ ‘ಓ’.

ಇದರ ಅರ್ಥ 2 ಗಂಟೆಯಾಗಿದೆ ಅಂದುಕೊಳ್ಳಿ. ಆಗ ಜನರು 2 ಕ್ಲಾಕ್​ ಎಂದರೆ ಅದು ಸೂರ್ಯನ ಟೈಮ್​ ಆಗಿತ್ತು. ಆದರೆ ಅದನ್ನು ಹೊರತುಪಡಿಸಿ ಬೇರೆಯ ಸಮಯ ಎಂದು ಹೇಳಲು Off the Clock ಅಂದರೆ ಇದನ್ನು ಬಿಟ್ಟು ಮತ್ತೊಂದು ಟೈಮ್​ (ಯಾಂತ್ರಿಕ ಗಡಿಯಾರದ ಟೈಂ) ಎಂದು ಹೇಳಲು 2 ಆಪ್​ ದಿ ಟೈಮ್​, 3 ಆಫ್​ ದಿ ಟೈಂ ಎಂದು ಹೇಳಲು ಶುರು ಮಾಡಿದ್ರು.

ಕ್ರಮೇಣ ಇದು ಆಫ್​ ಬದಲು ಶಾರ್ಟ್​ ಫಾಮ್​ಆಗಿ ಓ ಅಷ್ಟೇ ಉಳಿದುಕೊಂಡಿತು. 2 ಓ ಕ್ಲಾಕ್​, 3 ಓ ಕ್ಲಾಕ್​ಗೆ ಬಂದು ನಿಂತಿತು. ಸೂರ್ಯನ ಬೆಳಕಿನಿಂದ ಸಮಯ ಹೇಳೋದು ಬಿಟ್ಟು ಶತಮಾನ ಕಳೆದರೂ ಆ ಓ ಕ್ಲಾಕ್​ ಮಾತ್ರ ಹಾಗೆಯೇ ಉಳಿದುಕೊಂಡಿದೆ!

ಕಾಲು, ಅರ್ಧ ಗಂಟೆಗೆ ‘ಓ’ ಬಳಸಲಿಲ್ಲ ಏಕೆ?

ಇಲ್ಲೊಂದು ಪ್ರಶ್ನೆಕೆಲವರನ್ನು ಕಾಡಬಹುದು. 3 ಓ ಕ್ಲಾಕ್​ ಅಂತಾರೆಯೇ ವಿನಾ 3.15 ಓ ಕ್ಲಾಕ್​ ಅನ್ನಲ್ಲ ಏಕೆ? ಆಗ ಏನು ಹೇಳ್ತಾ ಇದ್ದರು ಎನ್ನುವ ಡೌಟ್​ ಕೂಡ ಬರಬಹುದು. ಇದಕ್ಕೂ ಉತ್ತರವಿದೆ. ಮೊದಲಿಗೆ ಗಡಿಯಾರ ಆವಿಷ್ಕಾರ ಮಾಡಿದ್ದಾಗ ಅಲ್ಲಿ ನಿಮಿಷದ ಮುಳ್ಳು ಇರಲಿಲ್ಲ. ಆದ್ದರಿಂದ 2, 3, 4, 5 ಅಷ್ಟೇ ಹೇಳುತ್ತಿದ್ದಂತೆ. ಹಾಗೆ ಹೇಳುವಾಗ ಓ ಕ್ಲಾಕ್​ ಬಳಸುತ್ತಿದ್ದರು. ಕಾಲಕ್ರಮೇಣ ನಿಮಿಷಗಳ ಮುಳ್ಳನ್ನು ಸಂಶೋಧಿಸಲಾಯಿತು. ಆ ಸಮದಯಲ್ಲಿಯೇ ಜನರು ಈ ಯಾಂತ್ರಿಕ ಗಡಿಯಾರಕ್ಕೆ ಒಗ್ಗಿಕೊಂಡಿದ್ದರು. ಆದ್ದರಿಂದ ಮೂರು ಕಾಲು ಆದ್ರೆ, ತ್ರೀ ಫಿಫ್ಟೀನ್​ ಎಂದೋ, quarter past three ಎಂದೋ ಹೇಳಲು ಆರಂಭಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular