ಶಿವಮೊಗ್ಗ: ರಾಜ್ಯದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬAಧಿಸಿದ ಕಾಯ್ದೆಯ ನಿಬಂಧನೆಗಳನ್ನು ಹೈಕೋರ್ಟ್ ರದ್ದುಪಡಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (ಎಸ್ಎಲ್ಪಿ) ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದರು.
2022ರಿAದ 2025ರವರೆಗೆ ಈ ಕಾಯ್ದೆಯಡಿ ಅನೇಕರು ವೈದ್ಯಕೀಯ, ಎಂಜಿನಿಯರಿAಗ್, ಕಾನೂನು, ನರ್ಸಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದು, ವಿವಿಧ ಇಲಾಖೆಗಳಲ್ಲಿಯೂ ಉದ್ಯೋಗ ಪಡೆದಿದ್ದಾರೆ. ಸುಮಾರು 72 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತರಬೇಕು. ತಮಿಳುನಾಡಿನ ಶೇ.69ರ ಮೀಸಲಾತಿ ಕಾಯ್ದೆಗೆ ನೀಡಿರುವ ಮಾದರಿಯಲ್ಲಿ ಕರ್ನಾಟಕದ ಕಾಯ್ದೆಗೂ ಸಂವಿಧಾನಾತ್ಮಕ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಅಂದಿನ ರಾಜ್ಯ ಸರ್ಕಾರ 2023ರ ಮಾರ್ಚ್ 23ರಂದು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಏಪ್ರಿಲ್ 16ರಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ವಿಧಾನಮಂಡಲದ ಉಭಯ ಸದನಗಳಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಪ್ರಧಾನಮAತ್ರಿಗಳು ನವೆಂಬರ್ 5ರಂದು ಬೆಂಗಳೂರಿಗೆ ಭೇಟಿ ನೀಡುವ ಮುನ್ನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ತೀವ್ರಗೊಳಿಸಿ, ಪ್ರಧಾನಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
‘ನ್ಯಾಯಾಲಯಗಳ ಬಗ್ಗೆ ಗೌರವವಿದೆ. ಸಮಾಜದಲ್ಲಿ ಆಳುವ ವರ್ಗ ಮತ್ತು ಶೋಷಿತ ವರ್ಗಗಳಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇಲ್ಲದಂತಾಗಿದೆ. ಹೈಕೋರ್ಟ್ ಆದೇಶ ಮರಣಶಾಸನದಂತಿದ್ದು, ಸಂವಿಧಾನಬಾಹಿರವಾಗಿದೆ. ಇದು ಬಿಜೆಪಿಯ ಬೇಬಿ ಇದ್ದಂತೆ’ ಎಂದು ಟೀಕಿಸಿದರು.
ನಟ ಸುದೀಪ್ ವಿರುದ್ಧದ ಹೇಳಿಕೆ ವೈಯಕ್ತಿಕ ಟೀಕೆಯಲ್ಲ. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಅವರೂ ಕೈಜೋಡಿಸಬೇಕು ಎಂಬುದು ತಮ್ಮ ಮಾತಿನ ಉದ್ದೇಶವಾಗಿತ್ತು ಎಂದು ಸ್ಪಷ್ಟ ಪಡಿಸಿದರು.
ವಿ.ಎಸ್. ಉಗ್ರಪ್ಪಗೆ ಭೋವಿ ಸಮಾಜದ ಮುಖಂಡರಿಂದ ಮುತ್ತಿಗೆ
ಶಿವಮೊಗ್ಗ: ಒಳಮೀಸಲಾತಿ ಕುರಿತಂತೆ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಸುದ್ದಿಗೋಷ್ಟಿ ನಡೆಸಲು ಇಂದು ಶಿವಮೊಗ್ಗಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಅವರಿಗೆ ಭೋವಿ ಸಮಾಜದ ಮುಖಂಡರಿAದ ಪ್ರತಿಭಟನೆಯ ಬಿಸಿ ತಟ್ಟಿತು.
ಗುರುವಾರ ಬೆಳಗ್ಗೆ ಉಗ್ರಪ್ಪ ಅವರು ನಗರದ ಆರ್.ಟಿ.ಒ ರಸ್ತೆಯಲ್ಲಿನ ಪತ್ರಿಕಾಭವನದ ಎದುರು ಪತ್ರಿಕಾಗೋಷ್ಡಿ ನಡೆಸಿ ಹೊರ ಬಂದ ತಕ್ಷಣವೇ ಭೋವಿ ಸಮಾಜದ ಮುಖಂಡರು ಧಿಡೀರನೆ ಉಗ್ರಪ್ಪ ಅವರ ಕಾರಿಗೆ ಅಡ್ಡಗಟ್ಟಿ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಏಕಾಏಕಿ ನಡೆದ ಈ ಘಟನೆಯಿಂದ ವಿಚಲಿತರಾದ ಉಗ್ರಪ್ಪ ಅವರು ಯಾಕಾಗಿ ತಮಗೆ ಘೇರಾವ್ ಹಾಕಲಾಗಿದೆ ಎನ್ನುವುದೇ ಅರ್ಥವಾಗದೆ ಕಾರಿನಲ್ಲಿಯೇ ಕುಳಿತಿದ್ದರು. ಈ ವೇಳೆ ವಾಲ್ಮೀಕಿ ಸಮಾಜದ ಮುಖಂಡರು ಕಾರಿನಿಂದ ಕೆಳಗಿಳಿದು ಬಂದು, ಭೋವಿ ಸಮಾಜದ ಮುಖಂಡರನ್ನು ಸಮಾಧಾನಿಸಲು ಯತ್ನಿಸಿದರು. ಆದರೂ ಭೋವಿ ಸಮಾಜದ ಮುಖಂಡರಾದ ವೀರಭದ್ರಪ್ಪ ಪೂಜಾರಿ, ಬೂದಿಗೆರೆ ಬಸವರಾಜ್, ಹೊಂಗಿರಣ ಲೋಕೇಶ್, ಚನ್ನಾ ಮುಂಬಾಪುರ ಮಂಜುನಾಥ್ ಅವರು, ಉಗ್ರಪ್ಪ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಕಾರು ಸುತ್ತುವರೆದರು.
ತಕ್ಷಣವೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೂ ಭೋವಿ ಸಮಾಜದ ಮುಖಂಡರು, ಉಗ್ರಪ್ಪ ಅವರಿಗೆ ಭೋವಿ ಸಮಾಜದ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ, ಎಂದು ಕಾರು ಅಡ್ಡಗಟ್ಡಿ ಧಿಕ್ಕಾರ ಕೂಗುತ್ತಾ ಕಾರು ಗುದ್ದಿದರು. ಈ ಹಂತದಲ್ಲಿ ಗೊಂದಲ ಉಂಟಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.
ಪೊಲೀಸರು ಮಧ್ಯಪ್ರವೇಶಿಸಿದ್ದು, ಉಗ್ರಪ್ಪ ಅವರನ್ನು ಅಲ್ಲಿಂದ ಕಳುಹಿಸಲಾಯಿತು. ಆ ನಂತರ ಭೋವಿ ಸಮಾಜದ ಮುಖಂಡ ವೀರಭದ್ರಪ್ಪ ಪೂಜಾರಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವಡ್ಡರು ಭೋವಿಗಳಲ್ಲ, ನಿಜವಾದ ನಾಮಧಾರಿ ಭೋಯಿಗಳು. ಅವರನ್ನು ಈ ವಡ್ಡರು ಅವರನ್ಙು ಮೂಲೆಗುಂಪು ಮಾಡಿ ಮೀಸಲಾತಿ ಪಡೆಯುತ್ತಿದ್ದಾರೆಂದು ಉಗ್ರಪ್ಪ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ನಿಜವಾದ ಭೋವಿಗಳಾದ ನಮ್ಮನ್ನು ಮೀಸಲಾತಿಯಿಂದ ವಂಚಿಸುವ ಹುನ್ನಾರವಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
“:ಮೈಸೂರು ರಾಜರ ಕಾಲದಲ್ಲಿಯೇ ವಡ್ಡರು ಭೋವಿಗಳು, ಅವರು ಮೀಸಲಾತಿಗೆ ಅರ್ಹರು ಎಂದು ಹೇಳಲಾಗಿದೆ. ಜತೆಗೆ ಮೀಸಲಾತಿಗೆ ವಡ್ಡರನ್ನು ಕೂಡ ಸೇರಿಸಲಾಗಿದೆ. ಇಷ್ಟಾಗಿಯೂ ಕೂಡ ಉಗ್ರಪ್ಪ ಅವರು ಗೊಂದಲಾತ್ಮಕ ಹೇಳಿಕೆ ನೀಡಿ ಭೋವಿ ಸಮಾಜಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ದೂರಿದರು.

