ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಇನ್ಮುಂದೆ ವಾಟ್ಸಾಪ್‌ನಲ್ಲಿ ಮೆಸೇಜ್‌ಗಳನ್ನು ಕಳುಹಿಸಲು ಮುಂಚಿತವಾಗಿಯೇ ಸಮಯ ನಿಗದಿಪಡಿಸುವ (Schedule Message) ಸೌಲಭ್ಯ ಲಭ್ಯವಾಗುವ ನಿರೀಕ್ಷೆಯಿದೆ. ಇದರಿಂದ ಹುಟ್ಟುಹಬ್ಬದ ಶುಭಾಶಯಗಳು, ವಾರ್ಷಿಕೋತ್ಸವದ ಸಂದೇಶಗಳು ಹಾಗೂ ಪ್ರಮುಖ ಜ್ಞಾಪನೆಗಳನ್ನು ನಿಗದಿತ ಸಮಯಕ್ಕೆ ಕಳುಹಿಸಬಹುದು. ಸದ್ಯ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೆ ಈ ಫೀಚರ್ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೌದು. ವಾಟ್ಸ್‌ಆ್ಯಪ್ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಪರಿಚಯಿಸಲಾಗಿದೆ. ಇನ್ಮುಂದೆ ಮೆಸೇಜ್‌ಗಳನ್ನು ಕೂಡ ಮುಂಚಿತವಾಗಿ ಶೆಡ್ಯೂಲ್ ಮಾಡಬಹುದು. ಸದ್ಯ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಫೀಚರ್ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮೆಸೇಜ್ ಶೆಡ್ಯೂಲಿಂಗ್
ಇದುವರೆಗೆ ಕಳುಹಿಸಿದ ಸಂದೇಶಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಎಡಿಟ್ ಮಾಡುವ ಅಥವಾ ಡಿಲೀಟ್ ಮಾಡುವ ಸೌಲಭ್ಯವಿತ್ತು. ಇದೀಗ ನಿಗದಿತ ಸಮಯಕ್ಕೆ ಸಂದೇಶಗಳು ಸ್ವಯಂಚಾಲಿತವಾಗಿ ಕಳುಹಿಸುವಂತೆ ಮುಂಚಿತವಾಗಿಯೇ ಶೆಡ್ಯೂಲ್ ಮಾಡುವ ಆಯ್ಕೆಯೂ ಲಭ್ಯವಾಗುವ ನಿರೀಕ್ಷೆಯಿದೆ.
ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಸೌಲಭ್ಯ
ಸದ್ಯ ಕೆಲವು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಈ ಫೀಚರ್ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬಳಕೆದಾರರಿಗೂ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಅಪ್‌ಡೇಟ್ ಸಂಪೂರ್ಣವಾಗಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಈಗಾಗಲೇ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಮತ್ತು ವಿಡಿಯೋ ಕಾಲ್‌ಗಳನ್ನು ಶೆಡ್ಯೂಲ್ ಮಾಡುವ ಸೌಲಭ್ಯವಿದೆ. ಇದರ ಮೂಲಕ ಬಳಕೆದಾರರು ಮುಂಚಿತವಾಗಿ ಕರೆ ನಿಗದಿಪಡಿಸಿ, ಇತರರೊಂದಿಗೆ ಲಿಂಕ್ ಹಂಚಿಕೊಳ್ಳಬಹುದು. ನಿಗದಿತ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮಾತನಾಡಲು ಇದರಿಂದ ಅನುಕೂಲವಾಗುತ್ತದೆ.
ಇದೇ ಮಾದರಿಯಲ್ಲಿ ಇದೀಗ ಮೆಸೇಜ್‌ಗಳನ್ನು ಶೆಡ್ಯೂಲ್ ಮಾಡುವ ಫೀಚರ್ ಪರಿಚಯಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಸೌಲಭ್ಯದ ಮೂಲಕ ಎರಡು ವಾರಗಳ ಮುಂಚಿತವಾಗಿಯೇ ಸಂದೇಶಗಳನ್ನು ಕಳುಹಿಸಲು ಸಮಯ ನಿಗದಿಪಡಿಸಬಹುದು ಎನ್ನಲಾಗಿದೆ. ಸದ್ಯ ಈ ಫೀಚರ್ ಪರೀಕ್ಷಾ ಹಂತದಲ್ಲಿದೆ ಎಂದು ವರದಿ ತಿಳಿಸಿದೆ.
ಬಳಕೆದಾರರಿಗೆ ಏನೆಲ್ಲ ಪ್ರಯೋಜನ?
ಹೊಸ ಫೀಚರ್ ಬಳಕೆದಾರರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಲಿದೆ.
-
ಹುಟ್ಟುಹಬ್ಬದ ಶುಭಾಶಯ: ಸ್ನೇಹಿತರು ಹಾಗೂ ಕುಟುಂಬದವರ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಶುಭಾಶಯ ಸಂದೇಶವನ್ನು ಶೆಡ್ಯೂಲ್ ಮಾಡಬಹುದು.
-
ವಿವಾಹ ವಾರ್ಷಿಕೋತ್ಸವ: ವಿಶೇಷ ದಿನಗಳಂದು ಶುಭಾಶಯ ತಿಳಿಸುವುದನ್ನು ಮರೆಯುವ ಆತಂಕ ಇರುವುದಿಲ್ಲ.
-
ಪ್ರಮುಖ ಜ್ಞಾಪನೆಗಳು: ಸಭೆಗಳು, ಕಾರ್ಯಕ್ರಮಗಳು ಹಾಗೂ ಇತರ ಮುಖ್ಯ ಕೆಲಸಗಳ ಕುರಿತು ನಿಗದಿತ ಸಮಯಕ್ಕೆ ಸಂದೇಶ ಕಳುಹಿಸಬಹುದು.
-
ಕಚೇರಿ ಕೆಲಸಗಳು: ಕೆಲಸಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಜ್ಞಾಪನೆಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಲು ಅನುಕೂಲವಾಗುತ್ತದೆ.
ಒಟ್ಟಿನಲ್ಲಿ, ವಾಟ್ಸ್‌ಆ್ಯಪ್‌ನ ಈ ಹೊಸ ಫೀಚರ್ ಬಳಕೆದಾರರ ವೈಯಕ್ತಿಕ ಮತ್ತು ವೃತ್ತಿಪರ ಸಂವಹನವನ್ನು ಇನ್ನಷ್ಟು ಸುಲಭಗೊಳಿಸುವ ನಿರೀಕ್ಷೆಯಿದೆ. ಆದರೆ ಈ ಫೀಚರ್ ಎಲ್ಲರಿಗೂ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆಗಾಗಿ ಕಾಯಬೇಕಿದೆ.

