HomeUncategorizedಪ್ರಾಣ ಹೋಗುತ್ತಿದ್ದರೂ ಸ್ಟೇರಿಂಗ್ ಬಿಡದ ರಿಯಲ್ ಹೀರೋ: 40 ಪ್ರಯಾಣಿಕರ ಜೀವ ಉಳಿಸಿ ಅಮರನಾದ ಸಾರಿಗೆ...

ಪ್ರಾಣ ಹೋಗುತ್ತಿದ್ದರೂ ಸ್ಟೇರಿಂಗ್ ಬಿಡದ ರಿಯಲ್ ಹೀರೋ: 40 ಪ್ರಯಾಣಿಕರ ಜೀವ ಉಳಿಸಿ ಅಮರನಾದ ಸಾರಿಗೆ ಬಸ್ ಚಾಲಕ

ತೀವ್ರ ಎದೆನೋವಿನಿಂದ ಪ್ರಾಣ ಹೋಗುತ್ತಿದೆ ಎಂದು ತಿಳಿದಿದ್ದರೂ, ತನ್ನನ್ನು ನಂಬಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರ ಜೀವ ಉಳಿಸಬೇಕೆಂಬ ಉದ್ದೇಶದಿಂದ ಕೊನೆಯ ಕ್ಷಣದವರೆಗೂ ಸ್ಟೀರಿಂಗ್ ಬಿಡದೆ ಕರ್ತವ್ಯ ನಿರ್ವಹಿಸಿದ ನಿಜವಾದ ಹೀರೋ ಒಬ್ಬರು. ತಾನು ಪ್ರಾಣ ಬಿಟ್ಟರೂ ಪರವಾಗಿಲ್ಲ, ಪ್ರಯಾಣಿಕರಿಗೆ ಯಾವುದೇ ಅಪಾಯವಾಗಬಾರದು ಎಂಬ ಕಾಳಜಿಯಿಂದ ಬಸ್ಸನ್ನು ಸುರಕ್ಷಿತವಾಗಿ ಬದಿಗೆ ನಿಲ್ಲಿಸಿ, 40 ಮಂದಿಯ ಜೀವ ಉಳಿಸಿದ ಬಳಿಕ ಚಾಲಕ ಸೀಟಿನಲ್ಲೇ ಕುಸಿದು ಪ್ರಾಣಬಿಟ್ಟಿದ್ದಾರೆ.

ಈ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಗೆ ಸಾಕ್ಷಿಯಾದ ಈ ಘಟನೆ ಎಲ್ಲರ ಮನಕಲಕಿದೆ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಕಿನಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಎಪಿಎಸ್‌ಆರ್‌ಟಿಸಿ (APSRTC) ನಾನ್‌ಸ್ಟಾಪ್ ಎಕ್ಸ್‌ಪ್ರೆಸ್‌ ಬಸ್ಸಿನಲ್ಲಿ 40 ಪ್ರಯಾಣಿಕರು ಇದ್ದರು. ಬಸ್ಸನ್ನು ಚಾಲನೆ ಮಾಡುತ್ತಿದ್ದ ಚಾಲಕ ಜೆಟ್ಟಿ ಶಿವ ಅವರಿಗೆ ತುನಿ ಬಳಿ ಎದೆನೋವು ಕಾಣಿಸಿಕೊಂಡಿತ್ತು. ಆದರೂ ನೋವನ್ನು ಸಹಿಸಿಕೊಂಡು ನಕ್ಕಪಲ್ಲಿ ವರೆಗೆ ಬಸ್ಸು ಚಲಾಯಿಸಿದರು.

ನಕ್ಕಪಲ್ಲಿ ಬಳಿ ಎದೆನೋವು ತೀವ್ರಗೊಂಡಾಗಲೂ ಅವರು ಪ್ರಯಾಣಿಕರ ಸುರಕ್ಷತೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿದರು. ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳದೆ, ಸುರಕ್ಷಿತ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸಿದರು. ಬಳಿಕ ಚಾಲಕನ ಸೀಟಿನಲ್ಲೇ ಕುಸಿದುಬಿದ್ದರು.

ಚಾಲಕನಿಗೆ ಪ್ರಯಾಣಿಕರು ಸಿಪಿಆರ್ (CPR) ನೀಡಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತಮ್ಮ ಪ್ರಾಣವನ್ನು ಕಳೆದುಕೊಂಡರೂ 40 ಪ್ರಯಾಣಿಕರ ಜೀವ ಉಳಿಸಿದ ಚಾಲಕ ಜೆಟ್ಟಿ ಶಿವ ಅವರ ಕರ್ತವ್ಯನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎಪಿಎಸ್‌ಆರ್‌ಟಿಸಿ ಅಧ್ಯಕ್ಷರಿಂದ ತೀವ್ರ ಸಂತಾಪ

ಈ ದುರ್ಘಟನೆಗೆ ಸಂಬಂಧಿಸಿದಂತೆ ಎಪಿಎಸ್‌ಆರ್‌ಟಿಸಿ ಅಧ್ಯಕ್ಷ ಕೊಣಕಳ್ಳ ನಾರಾಯಣರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕಾಕಿನಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಜೆಟ್ಟಿ ಶಿವ ಅವರು ಹೃದಯಾಘಾತಕ್ಕೆ ಒಳಗಾದರೂ, ಕೊನೆಯ ಕ್ಷಣಗಳಲ್ಲಿಯೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದರು. ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸುವ ಮೂಲಕ ಸುಮಾರು 40 ಪ್ರಯಾಣಿಕರನ್ನು ದೊಡ್ಡ ಅಪಾಯದಿಂದ ಪಾರು ಮಾಡಿ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಅವರು ಹೇಳಿದ್ದಾರೆ.

ತೀವ್ರ ಅಸ್ವಸ್ಥತೆಯ ನಡುವೆಯೂ ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳದೆ, ಸಮಯಪ್ರಜ್ಞೆಯಿಂದ ವರ್ತಿಸಿ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಂಡಿರುವುದು ಜೆಟ್ಟಿ ಶಿವ ಅವರ ಜವಾಬ್ದಾರಿಯುತ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಅಧ್ಯಕ್ಷರು ಶ್ಲಾಘಿಸಿದ್ದಾರೆ.

ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಜೆಟ್ಟಿ ಶಿವ ಅವರ ಸೇವಾ ಮನೋಭಾವ ಎಪಿಎಸ್‌ಆರ್‌ಟಿಸಿಯ ಪ್ರತಿಯೊಬ್ಬ ಉದ್ಯೋಗಿಗೂ ಆದರ್ಶಪ್ರಾಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಟುಂಬಕ್ಕೆ ನೆರವು ನೀಡುವ ಭರವಸೆ

ಜೆಟ್ಟಿ ಶಿವ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಎಪಿಎಸ್‌ಆರ್‌ಟಿಸಿ ಅಧ್ಯಕ್ಷ ಕೊಣಕಳ್ಳ ನಾರಾಯಣರಾವ್, ಮೃತರ ಕುಟುಂಬದ ಸದಸ್ಯರಿಗೆ ಪ್ರಗಾಢ ಸಂತಾಪ ತಿಳಿಸಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ಎಪಿಎಸ್‌ಆರ್‌ಟಿಸಿ ಆಡಳಿತ ಮಂಡಳಿಯು ಕುಟುಂಬಕ್ಕೆ ಎಲ್ಲ ರೀತಿಯಲ್ಲೂ ಬೆಂಬಲವಾಗಿ ನಿಲ್ಲಲಿದೆ. ನಿಯಮಗಳ ಪ್ರಕಾರ ಅಗತ್ಯ ನೆರವು ಮತ್ತು ಸಹಕಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜೆಟ್ಟಿ ಶಿವ ಅವರು ಸಲ್ಲಿಸಿದ ಸೇವೆಯನ್ನು ಸಂಸ್ಥೆ ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬಕ್ಕೆ ಎಪಿಎಸ್‌ಆರ್‌ಟಿಸಿ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ.

ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು 40 ಪ್ರಯಾಣಿಕರ ಜೀವ ಉಳಿಸಿದ ಚಾಲಕ ಜೆಟ್ಟಿ ಶಿವ ಅವರ ಕರ್ತವ್ಯನಿಷ್ಠೆ ನಿಜಕ್ಕೂ ಶ್ಲಾಘನೀಯ. ಅವರ ಈ ತ್ಯಾಗ ಮತ್ತು ಸೇವಾ ಮನೋಭಾವ ಸಾರಿಗೆ ಕ್ಷೇತ್ರದ ಸಿಬ್ಬಂದಿಗೆ ಸದಾ ಪ್ರೇರಣೆಯಾಗಿರಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular