HomeUncategorizedರೈತರಿಗೆ ಕೇಂದ್ರದ ಭರ್ಜರಿ ದಸರಾ ಗಿಫ್ಟ್..! ಪ್ರತಿಯೊಬ್ಬರ ಖಾತೆಗೆ ₹2,000; ಯಾವಾಗ ಜಮಾ?

ರೈತರಿಗೆ ಕೇಂದ್ರದ ಭರ್ಜರಿ ದಸರಾ ಗಿಫ್ಟ್..! ಪ್ರತಿಯೊಬ್ಬರ ಖಾತೆಗೆ ₹2,000; ಯಾವಾಗ ಜಮಾ?

ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದ ಕೊಡುಗೆಯಾಗಿ ಪಿಎಂ ಕಿಸಾನ್ ನಿಧಿಯ ಹಣವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ಮುಂಚಿತವಾಗಿಯೇ ರೈತರ ಖಾತೆಗಳಿಗೆ ಜಮಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 20ರಂದು ದಸರಾ ಹಬ್ಬ ನಡೆಯಲಿದ್ದು, ನವೆಂಬರ್‌ನಲ್ಲಿ ದೀಪಾವಳಿ ಹಬ್ಬವೂ ಬರಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಪಿಎಂ ಕಿಸಾನ್ ನಿಧಿಯ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದೇಶದ ಕೋಟ್ಯಂತರ ರೈತರು ಈ ಹಣಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಅಕ್ಟೋಬರ್ 20ರಂದು ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. 23ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಬಿಡುಗಡೆ ಮಾಡಿದ್ದರು. ಇದೀಗ ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬದ ದಿನವೇ ಮುಂದಿನ ಕಂತಿನ ಹಣ ಜಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಕೇಂದ್ರ ಸರ್ಕಾರ ಇದುವರೆಗೆ ಅಧಿಕೃತವಾಗಿ ಹಣ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಹಿಂದಿನ ಕಂತಿನ ಹಣ ಬಿಡುಗಡೆಯಾಗಿ ನಾಲ್ಕು ತಿಂಗಳು ಸಮೀಪಿಸುತ್ತಿರುವುದರಿಂದ 24ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹಣ ಬಿಡುಗಡೆಗೂ ಮುನ್ನ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ರೈತರು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ ಹಾಗೂ ಕೇಂದ್ರ ಸರ್ಕಾರದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪೋರ್ಟಲ್‌ಗಳ ಮೂಲಕ ನಿಖರ ಮಾಹಿತಿಯನ್ನು ಪರಿಶೀಲಿಸಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ರೈತರಿಗೆ ಹಣ ಜಮೆಯಾಗಲು e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಆಧಾರ್ ಆಧಾರಿತ e-KYC, OTP ಹಾಗೂ ಬಯೋಮೆಟ್ರಿಕ್ ವಿಧಾನಗಳ ಮೂಲಕ ರೈತರು ತಮ್ಮ KYC ಪೂರ್ಣಗೊಳಿಸಬಹುದು. e-KYC ಸೇರಿದಂತೆ ಅಗತ್ಯ ಪರಿಶೀಲನೆಗಳು ಪೂರ್ಣಗೊಂಡಿರುವ ಅರ್ಹ ರೈತರ ಖಾತೆಗಳಿಗೆ ಮಾತ್ರ ಯೋಜನೆಯ ಹಣ ವರ್ಗಾವಣೆಯಾಗಲಿದೆ.

ಪಿಎಂ ಕಿಸಾನ್ ಯೋಜನೆಯಡಿ ಎಷ್ಟು ಹಣ?

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿವರ್ಷ ಅರ್ಹ ರೈತರಿಗೆ ₹6,000 ಹಣವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

₹6,000 ಹಣವನ್ನು ಮೂರು ಕಂತುಗಳಲ್ಲಿ, ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

PM-KISAN e-KYC ಮಾಡುವ ವಿಧಾನ

ರೈತರು ಮೊಬೈಲ್‌ನಲ್ಲೇ ಆನ್‌ಲೈನ್ ಮೂಲಕ PM-KISAN e-KYC ಪೂರ್ಣಗೊಳಿಸಬಹುದು.

Step 1: PM-KISAN ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Step 2: ಮುಖಪುಟದಲ್ಲಿ “Farmers Corner” ಆಯ್ಕೆ ಮಾಡಿ.
Step 3: “e-KYC” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Step 4: ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.
Step 5: ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.
Step 6: OTP ಪರಿಶೀಲನೆಯಾದ ಬಳಿಕ e-KYC ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
Step 7: e-KYC ಯಶಸ್ವಿಯಾಗಿ ಪೂರ್ಣಗೊಂಡಿದೆಯೇ ಎಂಬುದನ್ನು ಪೋರ್ಟಲ್‌ನಲ್ಲಿ ಪರಿಶೀಲಿಸಿ.

OTP ಮೂಲಕ e-KYC ಸಾಧ್ಯವಾಗದಿದ್ದರೆ, ಸಮೀಪದ CSC ಕೇಂದ್ರಕ್ಕೆ ತೆರಳಿ ಬಯೋಮೆಟ್ರಿಕ್ ಮೂಲಕ e-KYC ಮಾಡಿಸಬಹುದು.

ಗಮನಿಸಿ: PM-KISAN ಹಣ ಪಡೆಯಲು e-KYC ಜೊತೆಗೆ ಆಧಾರ್ ಲಿಂಕ್, ಬ್ಯಾಂಕ್ ಖಾತೆ ಮತ್ತು ಇತರ ಅಗತ್ಯ ದಾಖಲೆಗಳ ವಿವರಗಳು ಸರಿಯಾಗಿರುವುದು ಮುಖ್ಯ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular