HomeAgricultureರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ

ರೈತರಿಗೆ ಇಲ್ಲಿದೆ ಗುಡ್ ನ್ಯೂಸ್: ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ

ಮಡಿಕೇರಿ: ರೈತರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯೋಜನೆಗಳನ್ನು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಮುಂತಾದ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ರೈತರಿಗೆ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ರೈತರ ದತ್ತಾಂಶವನ್ನು ಸಂಗ್ರಹಿಸಿ, ಪ್ರತಿಯೊಬ್ಬ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆ (ಫಾರ್ಮರ್ ಐಡಿ/ಎಫ್‍ಐಡಿ) ನೀಡಲಾಗುತ್ತಿದೆ.

ಎಫ್‍ಐಡಿ ಎನ್ನುವುದು ರೈತರಿಗೆ ನೀಡಲಾಗುವ ಒಂದು ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದ್ದು, ರೈತರ ಆಧಾರ್ ಕಾರ್ಡ್, ಭೂ ದಾಖಲೆ, ಬ್ಯಾಂಕ್ ಖಾತೆ ಮತ್ತು ಇತರ ಸಾಮಾಜಿಕ ದಾಖಲಾತಿಗಳನ್ನು ಒಂದೇ ಡಿಜಿಟಲ್ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಇದು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಅತ್ಯಂತ ಮುಖ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಪಿಎಂ ಕಿಸಾನ್ ಯೋಜನೆ ಸೇರಿದಂತೆ ಇತರ ಆರ್ಥಿಕ ನೆರವುಗಳನ್ನು ನೇರವಾಗಿ ರೈತರ ಬ್ಯಾಂಕುಗಳಿಗೆ ವರ್ಗಾವಣೆ ಮಾಡಲು ಎಫ್‍ಐಡಿ ಕಡ್ಡಾಯವಾಗಿದೆ. ಕೃಷಿ ಸಾಲ ಸೌಲಭ್ಯ ಪಡೆಯಲು ಮತ್ತು ಬೆಳೆ ವಿಮೆ ಮಾಡಿಸುವಾಗ ರೈತರ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಲು ಎಫ್‍ಐಡಿ ಅವಶ್ಯವಾಗಿದೆ. ಯೂರಿಯಾ ರಸಗೊಬ್ಬರವನ್ನು ರಿಯಾಯಿತಿಯಲ್ಲಿ ಪಡೆಯಲು ಎಫ್‍ಐಡಿ ಕಡ್ಡಾಯವಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ಎಫ್‍ಐಡಿ ಅವಶ್ಯ. ಬರ/ನೆರೆ ಸಂದರ್ಭಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೀಡುವ ಬೆಳೆ ನಷ್ಟ ಪರಿಹಾರ ಧನ ಪಡೆಯಲು ಎಫ್‍ಐಡಿ ಕಡ್ಡಾಯ. ಬೆಂಬಲ ಬೆಲೆ ಯೋಜನೆಯಡಿ ಪ್ರಯೋಜನ ಪಡೆಯಲು ಎಫ್‍ಐಡಿ ಅವಶ್ಯವಿದೆ.

ಆದ್ದರಿಂದ ರೈತ ಬಾಂಧವರು ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ್, ಜಮೀನಿನ ವಿವರಗಳುಳ್ಳ ಪಹಣಿ ಪತ್ರಗಳು (ಆರ್‍ಟಿಸಿ), ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ) ಹಾಗೂ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರೈತರ ಗುರುತಿನ ಸಂಖ್ಯೆಯನ್ನು ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.

ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ

ರಾಯಚೂರು: ಸರ್ಕಾರದ ಆದೇಶದಂತೆ 2026-27ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಮುಂಗಾರು ಹಂಗಾಮಿನ ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಎಕರಿಗೆ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್‌ಗೆ 8,343 ರೂ. ರಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ತಿಳಿಸಿದ್ದಾರೆ.

ದಿನಾಂಕ: 01-10-2026 ರಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆÀ ನಿಗಧಿಪಡಿಸಿದೆ. ರೈತರಿಂದ ಸೂರ್ಯಕಾಂತಿಯನ್ನು ಖರೀದಿಸುವ ಸಂಬAಧ ರಾಯಚೂರು ತಾಲೂಕಿನ ಖರೀದಿ ಕೇಂದ್ರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಹುಣಸಿಹಾಳಹುಡಾ ರಾಯಚೂರು. ಮೊ.ನಂ. 9743695467ಗೆ ಸಂಪರ್ಕ ಮಾಡಬಹುದಾಗಿದೆ.

ದೇವದುರ್ಗ ತಾಲೂಕಿನ ಖರೀದಿ ಕೇಂದ್ರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಜಾಲಹಳ್ಳಿ. ಮೊ.ನಂ. 7899312989ಗೆ ಸಂಪರ್ಕ ಮಾಡಬಹುದಾಗಿದೆ.

ಲಿಂಗಸುಗೂರು ತಾಲೂಕಿನ ಖರೀದಿ ಕೇಂದ್ರಗಳಾದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಮಟ್ಟೂರು ಮೊ.ನಂ. 7022551299 ಹಾಗೂ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಲಿಂಗಸುಗೂರು. ಮೊ.ನಂ 8792668442ಗೆ ಸಂಪರ್ಕ ಮಾಡಬಹುದಾಗಿದೆ.

ಸಿಂಧನೂರು ತಾಲೂಕಿನ ಖರೀದಿ ಕೇಂದ್ರಗಳಾದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಜವಳಗೇರಾ ಮೊ.ನಂ: 9964315868, ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಹುಡಾ ಮೊ.ನಂ: 9964315868 ಹಾಗೂ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಪಗಡದಿನ್ನಿ ಮೊ.ನಂ: 9945738297ಗೆ ಸಂಪರ್ಕ ಮಾಡಬಹುದಾಗಿದೆ.

ಮಾನವಿ ತಾಲೂಕಿನ ಖರೀದಿ ಕೇಂದ್ರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ತೋರಣದಿನ್ನಿ ಮೊ.ನಂ: 9902387316ಗೆ ಸಂಪರ್ಕ ಮಾಡಬಹುದಾಗಿದೆ.

ಸಿರವಾರ ತಾಲೂಕಿನ ಖರೀದಿ ಕೇಂದ್ರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಸಿರವಾರ ಮೊ.ನಂ: 9880891919ಗೆ ಸಂಪರ್ಕ ಮಾಡಬಹುದಾಗಿದೆ.

ಮಸ್ಕಿ ತಾಲೂಕಿನ ಖರೀದಿ ಕೇಂದ್ರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ಜಾಲವಡಿಗಿ ಮೊ.ನಂ: 8073325424ಗೆ ಸಂಪರ್ಕ ಮಾಡಬಹುದಾಗಿದೆ.

ಈ ಖರಿದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ಬಾಂಧವರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿ ಸೂರ್ಯಕಾಂತಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪರಿಡಿಸಕೊಳ್ಳಲು ಜಿಲ್ಲೆಯ ರೈತ ಬಾಂಧವರಲ್ಲಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular