HomeIndiaಗುಪ್ತ ಕ್ಯಾಮೆರಾ ಅಳವಡಿಸಿ ಮಹಿಳೆಯರಿಗೆ ಬ್ಲ್ಯಾಕ್ ಮೇಲ್: ಜಿಮ್ ಮ್ಯಾನೇಜರ್ ಅರೆಸ್ಟ್

ಗುಪ್ತ ಕ್ಯಾಮೆರಾ ಅಳವಡಿಸಿ ಮಹಿಳೆಯರಿಗೆ ಬ್ಲ್ಯಾಕ್ ಮೇಲ್: ಜಿಮ್ ಮ್ಯಾನೇಜರ್ ಅರೆಸ್ಟ್

ಗುಜರಾತ್‌ ನ ಸುರೇಂದ್ರನಗರದಲ್ಲಿರುವ ಜಿಮ್‌ ವೊಂದಕ್ಕೆ ಭೇಟಿ ನೀಡುವ ಯುವತಿಯರಿಗೆ ಬ್ಲ್ಯಾಕ್‌ ಮೇಲ್ ಮಾಡಲಾಗುತ್ತಿದೆ ಮತ್ತು ಅವರನ್ನು ಅನೈತಿಕ ಸಂಬಂಧಗಳಿಗೆ ಒತ್ತಾಯಿಸಲಾಗುತ್ತಿದೆ ಎಂಬ ಮಹಿಳೆಯೊಬ್ಬರ ಆರೋಪದ ಮೇರೆಗೆ ಪೊಲೀಸರು ಜಿಮ್ ಮ್ಯಾನೇಜರ್‌ ನನ್ನು ಬಂಧಿಸಿದ್ದಾರೆ.

ತನಿಖೆಯ ಭಾಗವಾಗಿ ಪೊಲೀಸರು ಜಿಮ್‌ ನಿಂದ ಪೆನ್ ಡ್ರೈವ್, ಖಾಲಿ ಚೆಕ್‌ ಗಳು, ಲೆಕ್ಕಪತ್ರದ ಡೈರಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಕ್ಲಬ್ 71’ ಹೆಸರಿನ ಈ ಜಿಮ್ ಸುರೇಂದ್ರನಗರದ ದುಧ್ರೇಜ್ ರಸ್ತೆ ಮತ್ತು 80 ಅಡಿ ರಸ್ತೆಯಲ್ಲಿರುವ ಎರಡು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಹಲವು ಯುವತಿಯರು ಈ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ಅಮೀನ್ ಮುಲ್ತಾನಿ ಅಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಮ್‌ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿ ಪ್ರೇಮ್‌ ಸುಖ್ ಡೆಲು ಅವರಿಗೆ ಪತ್ರ ಬರೆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯರಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಂಬಂಧಗಳಿಗೆ ಒತ್ತಾಯಿಸಲಾಗುತ್ತಿದೆ ಹಾಗೂ ಚೇಂಜಿಂಗ್ ರೂಮ್‌ ನಲ್ಲಿ ಗುಪ್ತ ಕ್ಯಾಮೆರಾಗಳನ್ನು ಬಳಸಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಜಿಮ್‌ ಗೆ ಸೇರ್ಪಡೆಗೊಳ್ಳಲು ಆಸಕ್ತಿ ಇರುವವರಂತೆ ನಟಿಸಿ, ರಾತ್ರಿಯ ವೇಳೆ ಪೊಲೀಸರ ತಂಡವೊಂದು ಜಿಮ್ ಮೇಲೆ ದಾಳಿ ನಡೆಸಿತು.

ಈ ಕಾರ್ಯಾಚರಣೆಯ ವೇಳೆ ಪೊಲೀಸರು ಪೆನ್ ಡ್ರೈವ್, ಖಾಲಿ ಚೆಕ್‌ಗಳು, ಲೆಕ್ಕಪತ್ರದ ಡೈರಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು. ನಂತರ ಅಮೀನ್ ಮುಲ್ತಾನಿ ಮತ್ತು ಜಿಮ್‌ನಲ್ಲಿದ್ದ ಮತ್ತೊಬ್ಬ ಸಿಬ್ಬಂದಿಯನ್ನು ಬಂಧಿಸಲಾಯಿತು.

ಪೆನ್ ಡ್ರೈವ್‌ನಲ್ಲಿ ಮಹಿಳೆಯರ ಫೋಟೋಗಳು ಮತ್ತು ವೀಡಿಯೊಗಳಿದ್ದವು, ಇದರಲ್ಲಿ ನಗ್ನ ಚಿತ್ರಗಳು ಮತ್ತು ವೀಡಿಯೊಗಳು ಕೂಡ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಚಿತ್ರಗಳು ಮತ್ತು ವೀಡಿಯೊಗಳು ಅಸಲಿಯೇ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಖಾಲಿ ಚೆಕ್‌ಗಳು ಮತ್ತು ಲೆಕ್ಕಪತ್ರದ ಡೈರಿ ಪತ್ತೆಯಾಗಿರುವುದು, ಆರೋಪಿಗಳು ಕಾನೂನುಬಾಹಿರವಾಗಿ ಹಣದ ಸಾಲ ನೀಡುವ(ಬಡ್ಡಿ ವ್ಯವಹಾರ) ದಂಧೆಯಲ್ಲಿ ತೊಡಗಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದಾಗ್ಯೂ, ಶೋಧ ಕಾರ್ಯಾಚರಣೆಯ ವೇಳೆ ಜಿಮ್‌ನ ಒಳಗೆ ಅಥವಾ ಅದರ ಚೇಂಜಿಂಗ್ ರೂಮ್‌ನಲ್ಲಿ ಯಾವುದೇ ಗುಪ್ತ ಕ್ಯಾಮೆರಾ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭಾ ಉಪ ಚುನಾವಣೆ: ಬಿಜೆಪಿಯಿಂದ ಕೋಯಲ್ ಮಲ್ಲಿಕ್, ದಿನೇಶ್ ಆರ್ಯಗೆ ಟಿಕೆಟ್ ಘೋಷಣೆ

ನವದೆಹಲಿ: ಪಶ್ಚಿಮ ಬಂಗಾಳದಿಂದ ಕೋಯಲ್ ಮಲ್ಲಿಕ್ ಮತ್ತು ಉತ್ತರಾಖಂಡದಿಂದ ದಿನೇಶ್ ಆರ್ಯ ಅವರನ್ನು ರಾಜ್ಯಸಭಾ ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೋಷಿಸಿದೆ.

ಭಾರತೀಯ ಜನತಾ ಪಕ್ಷವು(ಬಿಜೆಪಿ) ಭಾನುವಾರ ಉತ್ತರಾಖಂಡದ 2026ರ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ದಿನೇಶ್ ಆರ್ಯ ಅವರನ್ನು ಮತ್ತು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆಗೆ ರುಕ್ಮಿಣಿ ಮಲ್ಲಿಕ್ (ಅಲಿಯಾಸ್ ಕೋಯಲ್ ಮಲ್ಲಿಕ್) ಅವರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಅಭ್ಯರ್ಥಿಗಳ ಹೆಸರುಗಳಿಗೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಅನುಮೋದನೆ ನೀಡಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯು ಅಕ್ಟೋಬರ್ 16 ರಂದು ನಡೆಯಲಿದೆ. ಮತದಾನವು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಅದೇ ದಿನ ಮತಗಳ ಎಣಿಕೆ ನಡೆಯಲಿದೆ.

ಉತ್ತರಾಖಂಡದ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ, ಏಕೆಂದರೆ ಬಿಜೆಪಿಯ ನರೇಶ್ ಬನ್ಸಾಲ್ ಅವರು ಈ ವರ್ಷದ ನವೆಂಬರ್‌ನಲ್ಲಿ ಮೇಲ್ಮನೆಯಿಂದ ನಿವೃತ್ತರಾಗಲಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular