HomeLatest News‘ಮುಂದಿನ ದಿನಗಳಲ್ಲಿ ವೈಭವ್ ಭಾರತೀಯ ಕ್ರಿಕೆಟ್ ಆಳಲಿದ್ದಾರೆ’: ಶ್ರೇಯಸ್ ಅಯ್ಯರ್ ಭವಿಷ್ಯ ನುಡಿ

‘ಮುಂದಿನ ದಿನಗಳಲ್ಲಿ ವೈಭವ್ ಭಾರತೀಯ ಕ್ರಿಕೆಟ್ ಆಳಲಿದ್ದಾರೆ’: ಶ್ರೇಯಸ್ ಅಯ್ಯರ್ ಭವಿಷ್ಯ ನುಡಿ

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ೨೦ ಸರಣಿಗೂ ಮುನ್ನ ಮಾತನಾಡಿದ ಭಾರತ ಟಿ೨೦ ತಂಡದ ನಾಯಕ ಶ್ರೇಯಸ್ ಅಯ್ಯರ್, ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ಅವರ ಭವಿಷ್ಯದ ಕುರಿತು ಪ್ರಶಂಸೆಯ ಸುರಿಮಳೆ ಗೈದಿದ್ದಾರೆ. ತಂಡವನ್ನು ಮುನ್ನಡೆಸುತ್ತಿರುವ ಅಯ್ಯರ್, ಆಟಗಾರರಲ್ಲಿ ಸ್ವತಂತ್ರ ಹಾಗೂ ನಿರ್ಭೀತ ಮನೋಭಾವ ಇರಬೇಕೆಂದು ಆಶಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೇಯಸ್, ವೈಭವ್ ಅವರೊಂದಿಗೆ ಮೈದಾನದ ಹೊರಗಿನ ಜೀವನದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಎಲ್ಲರೂ ಅವರೊಂದಿಗೆ ಕ್ರಿಕೆಟ್ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಅವರ ಕುಟುಂಬ, ಶೈಲಿ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಸಂಭಾಷಣೆ ನಡೆಸಿದಾಗ ಅವರು ಹೆಚ್ಚು ಮುಕ್ತವಾಗಿ ಬೆರೆಯುತ್ತಾರೆ. ನೋಡಲು ಅತ್ಯಂತ ಶಾಂತ ಮತ್ತು ಸಿಹಿ ಸ್ವಭಾವದವರಂತೆ ಕಾಣುವ ವೈಭವ್, ಮೈದಾನಕ್ಕೆ ಇಳಿದರೆ ಅತ್ಯಂತ ವಿಧ್ವಂಸಕ ಆಟಗಾರನಾಗಿ ಬದಲಾಗುತ್ತಾರೆ ಎಂದು ನಾಯಕ ಬಣ್ಣಿಸಿದ್ದಾರೆ.

ಪ್ರಸ್ತುತ ತಂಡದಲ್ಲಿ ವಿಶ್ವಕಪ್ ವಿಜೇತ ಆರಂಭಿಕ ಆಟಗಾರರು ಇರುವುದರಿಂದ ವೈಭವ್ ಕಾಯಬೇಕಾಗಿದೆ. ಆದರೆ ಅವರಿಗೆ ಸೂಕ್ತ ಸಮಯ ಬಂದಾಗ ಅವರು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಪ್ರಾಬಲ್ಯ ಸಾಧಿಸಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಅಯ್ಯರ್ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ತಮ್ಮ ಬ್ಯಾಟಿಂಗ್ ಶೈಲಿ ಮತ್ತು ಸರಣಿಯ ತಂತ್ರಗಳ ಬಗ್ಗೆ ಹಂಚಿಕೊಂಡ ನಾಯಕ, ಆಟಗಾರರಲ್ಲಿ ಯಾವುದೇ ಗೊಂದಲ ಮೂಡದಂತೆ ಸರಣಿ ಗೆಲ್ಲುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು, ಆ ನಂತರವೇ ಪ್ರಯೋಗಗಳಿಗೆ ಕೈ ಹಾಕಲಾಗುವುದು ಎಂದಿದ್ದಾರೆ. ಆಟಗಾರರಿಗೆ ತಮ್ಮ ಸಹಜ ಆಟವಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular