ಬೀದರ್: ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿ ಸಂಗ್ರಹದ ಗೋದಾಮಿನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಬೀದರ್ ತಾಲೂಕಿನ ಬೆಳ್ಳೂರು ಗ್ರಾಮದ ಬಳಿ ಇರುವ ಕೀರ್ತಿ ವೈರ್ ಮೆಶ್ ನಲ್ಲಿ ನಡೆದಿದೆ.
ಈ ಘಟನೆಯಿಂದಾಗಿ ಇಡೀ ಗೋದಾಮು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಚ್ಚಾವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ಧಗಧಗನೆ ಹೊತ್ತಿ ಉರಿದ ಪರಿಣಾಮ, ದಟ್ಟ ಹೊಗೆ ಮುಗಿಲೆತ್ತರಕ್ಕೆ ವ್ಯಾಅಪಿಸಿದ್ದು, ಸ್ಥಳದಲ್ಲಿ ಆತಂಕದ ವತಾವರಣ ನಿರ್ಮಾಣವಾಗಿತ್ತು.
ಅಗ್ನಿ ಅನಾಹುತದಿಂದಾಗಿ ದಟ್ಟ ಹೊಗೆ ಆವರಿಸಿದ್ದರಿಂದ, ಬೆಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಬೆಂಕಿಯ ಜ್ವಾಲೆಗಳು ಮತ್ತು ಹೊಗೆಯ ಪ್ರಮಾಣ ಹೆಚ್ಚಾಗಿದ್ದರಿಂದ ಜನರಲ್ಲಿ ಭಯದ ವಾತಾವರಣವಿತ್ತು.
ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ದಾವಿಸಿ, ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಸತತ ಐದು ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಖ್ಯಾತ ಮೇಕಪ್ ಆರ್ಟಿಸ್ಟ್ ಮದ್ ಸಂಧು ಗುಂಡಿಕ್ಕಿ ಹತ್ಯೆ
ಚಂಡೀಗಢ: LGBTQ ಸಮುದಾಯದ ಸಾಮಾಜಿಕ ಜಾಲತಾಣದ ಪ್ರಭಾವಿ ಮೇಕಪ್ ಆರ್ಟಿಸ್ಟ್ ಮದ್ ಸಂಧು ಅವರನ್ನು ದುಷ್ಕರ್ಮಿಗಳು ಅಮೃತಸರದಲ್ಲಿ ಗುಂಡಿಕ್ಕಿ ಹತ್ಯೆಮಾಡಿರುವ ಘಟನೆ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಮದ್ ಸಂಧು ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ ಸಂಧು ಅವರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಂಧು ತಮ್ಮ LGBTQ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಂದನೆಯನ್ನು ಎದುರಿಸುತ್ತಿದ್ದರು. ಟ್ರೋಲ್ ಹೊರತಾಗಿಯೂ, ಅವರು ಆನ್ಲೈನ್ನಲ್ಲಿ ಸಕ್ರಿಯರಾಗಿದ್ದರು. ಇನ್ಸ್ಟಾದಲ್ಲಿ 2.26 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಅವರು ಹೊಂದಿದ್ದರು. ಅವರು ಪಂಜಾಬಿ ಚಲನಚಿತ್ರ ಓಯೆ ಭೋಲೆ ಓಯೆಯಲ್ಲಿಯೂ ನಟಿಸಿದ್ದರು.
ಪಾಡ್ಕ್ಯಾಸ್ಟ್ಗಳು ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಮೇಕಪ್ ಆರ್ಟ್, ಸ್ವಯಂ ಅಭಿವ್ಯಕ್ತಿ ಮತ್ತು ಲಿಂಗ-ಸಂಬಂಧಿತ ವಿಷಯಗಳ ಬಗ್ಗೆ ಸಂಧು ಆಗಾಗ ಚರ್ಚಿಸುತ್ತಿದ್ದರು. ಅವರ ಫ್ಯಾಷನ್ ಆಯ್ಕೆಗಳು ಮತ್ತು ಚರ್ಚಿಸುವ ವಿಚಾರಗಳು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟೀಕೆಗೆ ಗುರಿಯಾಗುತ್ತಿತ್ತು.
ಗೋಲ್ಡಿ ಧಿಲ್ಲನ್ ಮತ್ತು ಜಗ್ಗಾ ಟ್ಯಾರಂಟರ್ನ್ ಈ ದಾಳಿಯ ಹೊಣೆ ಹೊತ್ತಿದ್ದಾರೆ ಎಂದು ಹೇಳಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಬಗ್ಗೆ ಇನ್ನೂ ಪರಿಶೀಲಿಸಲಾಗಿಲ್ಲ. ಗುಂಡಿನ ದಾಳಿಗೆ ಕಾರಣವಾದ ಸಂದರ್ಭ, ದಾಳಿಕೋರರ ಗುರುತು ಮತ್ತು ಉದ್ದೇಶ ಸ್ಪಷ್ಟವಾಗಿಲ್ಲ.
ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ವೈರಲ್ ಪೋಸ್ಟ್ನಲ್ಲಿ ಹತ್ಯೆ ಹೊಣೆ ಹೊತ್ತಿದ್ದಾರೆ ಎನ್ನಲಾದ ಗೋಲ್ಡಿ ಧಿಲ್ಲೋನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಗೋಲ್ಡಿ ಬ್ರಾರ್ನ ಆಪ್ತ ಸಹಾಯಕನಾದ ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಜರ್ಮನಿಯಲ್ಲಿ ಕೆಲವು ತಿಂಗಳು ಕಳೆದ ನಂತರ ಯುಕೆ ನಲ್ಲಿ ಅಡಗಿರಬಹುದು ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.
ವಿದೇಶದಿಂದಲೇ ‘ಹಿಟ್ ಸ್ಕ್ವಾಡ್’ಗಳ (ಹಂತಕರ ತಂಡಗಳ) ಮೂಲಕ ಚಂಡೀಗಢದ ಸೆಕ್ಟರ್ 11 ರಲ್ಲಿ ಕೆಮಿಸ್ಟ್ ಅಂಗಡಿಯ ಕ್ಯಾಷಿಯರ್ ಜಾನಕಿ ದಾಸ್ ಅವರ ಹತ್ಯೆಯ ಹಿಂದೆ (ಜೂನ್ 2026) ಈತನ ಕೈವಾಡ ಇದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇನ್ನೂ, ಚಂಡೀಗಢದ ಸೆಕ್ಟರ್ 5 ರಲ್ಲಿ ನಡೆದ 2024ರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ (NIA) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಗೋಲ್ಡಿ ಬ್ರಾರ್ ಹೆಸರು ಸಹ ಇದೆ.
ಗೋಲ್ಡಿ ಧಿಲ್ಲನ್ ಮತ್ತು ಜಗ್ಗಾ ಟ್ಯಾರಂಟರ್ನ್ ಈ ದಾಳಿಯ ಹೊಣೆ ಹೊತ್ತಿದ್ದಾರೆ ಎಂದು ಹೇಳಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಬಗ್ಗೆ ಇನ್ನೂ ಪರಿಶೀಲಿಸಲಾಗಿಲ್ಲ. ಗುಂಡಿನ ದಾಳಿಗೆ ಕಾರಣವಾದ ಸಂದರ್ಭ, ದಾಳಿಕೋರರ ಗುರುತು ಮತ್ತು ಉದ್ದೇಶ ಸ್ಪಷ್ಟವಾಗಿಲ್ಲ. ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

