HomeKarnatakaಮೈಸೂರು ದಸರಾ ಮಹೋತ್ಸವ: ಈ ಬಾರಿ ಚಿನ್ನದ ಅಂಬಾರಿ ಹೊರಲಿದೆಯಾ ಧನಂಜಯ?

ಮೈಸೂರು ದಸರಾ ಮಹೋತ್ಸವ: ಈ ಬಾರಿ ಚಿನ್ನದ ಅಂಬಾರಿ ಹೊರಲಿದೆಯಾ ಧನಂಜಯ?

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರಕ್ಕೆ ದಿನಗಣನೆ ಆರಂಭಾವಾಗಿದೆ. ಅಭಿಮನ್ಯು ಆನೆ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೀಕದ ಚಿನ್ನದ ಅಂಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಮೂಡಿದೆ. ಈ ನಡಿವೆ ಚಿನ್ನದ ಅಂಬಾರಿ ಹೊರುವ ಆನೆ ಈ ಬಾರಿ ದನಂಜಯ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿಮನ್ಯು ಆನೆ ನಿವೃತ್ತಿಯ ನಂತರ, ಅರಣ್ಯ ಇಲಾಖೆಯ ಚಿತ್ತ ಈಗ ಧನಂಜಯ ಆನೆಯತ್ತ ಹರಿದಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಆನೆಯ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹೇಂದ್ರ, ಪ್ರಶಾಂತ ಮತ್ತು ಏಕಲವ್ಯ ಆನೆಗಳು ರೇಸ್‌ನಲ್ಲಿದ್ದರೂ ಸಹ, ಧನಂಜಯ ಆನೆಯು ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದೆ. ನಡೆಸಲಾದ ತಾಲೀಮು ಮತ್ತು ಪರಿಶೀಲನೆಗಳಲ್ಲೂ ಧನಂಜಯನ ಹೆಸರು ಮುನ್ನೆಲೆಗೆ ಬಂದಿದೆ. ಅಂಬಾರಿ ಹೊರುವ ಆನೆಯ ಸಾಮರ್ಥ್ಯ, ಗಾಂಭೀರ್ಯ, ತಾಲೀಮು ಮತ್ತು ಬೆನ್ನು ಸಮತಟ್ಟಾಗಿರುವಿಕೆಯು ಪ್ರಮುಖ ಮಾನದಂಡಗಳಾಗಿವೆ. ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರಣ್ಯ ಇಲಾಖೆ ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ.

ಇದಲ್ಲದೆ, ಅಂಬಾರಿ ಹೊರಲು ಆನೆ ಆಯ್ಕೆ ಕುರಿತು ಸರ್ಕಾರಿ ಮಟ್ಟದಲ್ಲೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸಾಂಪ್ರದಾಯಿಕ ಮತ್ತು ಭದ್ರತಾ ದೃಷ್ಟಿಯಿಂದ ಸೂಕ್ತ ಆನೆಯನ್ನು ಆಯ್ಕೆ ಮಾಡುವುದು ನಿರ್ಣಾಯಕ. ಮೈಸೂರು ದಸರಾ 2026ಕ್ಕೆ ಯಾವ ಆನೆ ಅಂಬಾರಿ ಹೊತ್ತು ಸಾಗಲಿದೆ ಎಂಬುದಕ್ಕೆ ಅಧಿಕೃತ ಪ್ರಕಟಣೆಯ ನಿರೀಕ್ಷೆಯಿದೆ.

ಒಟ್ಟಾರೆ ಈ ಬಾರಿ ವಿಶ್ವವಿಖ್ಯಾತ ದಸರಾ ಚಿನ್ನದಂಬಾರಿ ಹೊರುವ ಆನೆ ಬಹುತೇಕ ಧನಂಜಯ ಆನೆ ಎಂದು ಹೇಳಲಾಗುತ್ತಿದೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲಲಿತಮ್ಮ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಲಲಿತಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಅಮ್ಮನ ಮಡಿಲು ಟ್ರಸ್ಟ್ ನಲ್ಲಿ ಆಶ್ರಯ ಪಡೆದಿದ್ದ ನಟಿ ಲಲಿತಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಹಲವು ವರ್ಷಗಳ ಕಾಲ ಕಲಾ ಸೇವೆ ಮಾಡಿದ ಹಿರಿಯ ಕಲಾವಿದೆ ಲಲಿತಮ್ಮ ಅವರನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿದ್ದು, ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದರು. ಆದರೆ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ.

ಲಲಿತಮ್ಮ ಅವರು ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಲಾ ಸೇವೆ ಸಲ್ಲಿಸಿದ್ದರು. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಹಾಗೂ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿದ್ದರು. ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಹಾಗೂ ‘ಸುಂಟರಗಾಳಿ’, ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ ಕಿತ್ತೂರು’, ‘ಪುತ್ರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಶೇಷವಾಗಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಅವರು ಮಾಡಿದ್ದ ‘ಸಾರಾಯಿ ಶಾರದೆ’ ಪಾತ್ರ ಪ್ರೇಕ್ಷಕರ ಗಮನ ಸೆಳೆದಿತ್ತು.

ಮದುವೆ, ಮಕ್ಕಳಿಲ್ಲದೆ ಲಲಿತಮ್ಮ ಅವರು ಒಂಟಿಯಾಗಿಯೇ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮತ್ತೊಬ್ಬ ಕಲಾವಿದೆ ಪಂಕಜಾ ಅವರು ಗಮನಿಸಿ, ಬೆಂಗಳೂರಿನ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular