HomeIndiaಪತಿ - ಮಕ್ಕಳನ್ನು ತೊರೆದು Instagram ಗೆಳತಿಯೊಂದಿಗೆ ತೆರಳಿದ ಮಹಿಳೆ; ಕಾನ್ಪುರದಲ್ಲಿ ಅಚ್ಚರಿ ಘಟನೆ !

ಪತಿ – ಮಕ್ಕಳನ್ನು ತೊರೆದು Instagram ಗೆಳತಿಯೊಂದಿಗೆ ತೆರಳಿದ ಮಹಿಳೆ; ಕಾನ್ಪುರದಲ್ಲಿ ಅಚ್ಚರಿ ಘಟನೆ !

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮೂವರು ಮಕ್ಕಳು ಮತ್ತು ಪತಿಯನ್ನು ತೊರೆದು ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ವಾಸಿಸಲು ದೆಹಲಿಗೆ ತೆರಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಮಕ್ಕಳು ಕಣ್ಣೀರಿಟ್ಟು ಮನೆಗೆ ಮರಳುವಂತೆ ಬೇಡಿಕೊಂಡರೂ, ಮಹಿಳೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಮಹಿಳಾ ಸಂಗಾತಿಯೊಂದಿಗೇ ತೆರಳಲು ಹಠ ಹಿಡಿದ ಘಟನೆ ನಡೆದಿದೆ.

ಕಾನ್ಪುರದ ಮಹಾರಾಜ್‌ಪುರ ಪ್ರದೇಶದ ನಿವಾಸಿಯಾಗಿರುವ ಈ ಮಹಿಳೆ, ಸೆಪ್ಟೆಂಬರ್ 6 ರಂದು ಯಾರಿಗೂ ತಿಳಿಸದೆ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು. ಪತ್ನಿ ಕಾಣೆಯಾದ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಕರೆಗಳ ವಿವರಗಳನ್ನು (ಸಿಡಿಆರ್) ಪರಿಶೀಲಿಸಿದಾಗ, ಆಕೆ ದೆಹಲಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ 25 ವರ್ಷದ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬಯಲಾಯಿತು. ಸುಮಾರು ಒಂದು ವರ್ಷದ ಹಿಂದೆ ಅವರಿಬ್ಬರಿಗೂ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಸಲುಗೆ ಬೆಳೆದಿತ್ತು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ದೆಹಲಿಯ ಯುವತಿಯನ್ನು ಸಂಪರ್ಕಿಸಿ ನಾಪತ್ತೆಯಾಗಿದ್ದ ಮಹಿಳೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಹಚ್ಚಿದರು. ಬಳಿಕ ಇಬ್ಬರನ್ನೂ ವಿಚಾರಣೆಗಾಗಿ ಮಹಾರಾಜ್‌ಪುರ ಪೊಲೀಸ್ ಠಾಣೆಗೆ ಕರೆತರಲಾಯಿತು. ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಸಿಂಗ್ ಅವರ ಸಮ್ಮುಖದಲ್ಲಿ ಮಹಿಳೆಗೆ ಕೌನ್ಸೆಲಿಂಗ್ ನಡೆಸಲಾಯಿತು. ಠಾಣೆಗೆ ಪತಿ ಹಾಗೂ ಮೂವರು ಪುಟ್ಟ ಮಕ್ಕಳನ್ನು ಕರೆಯಿಸಿ, ತಾಯಿಯ ಮನವೊಲಿಸಲು ಪ್ರಯತ್ನಿಸಲಾಯಿತು. ಮಕ್ಕಳು ಮನೆಗೆ ಬರುವಂತೆ ಎಷ್ಟೇ ಅಂಗಲಾಚಿದರೂ, ಮಹಿಳೆ ತನ್ನ ಗೆಳತಿಯೊಂದಿಗೆ ದೆಹಲಿಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆ ವಯಸ್ಕಳಾಗಿದ್ದು ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿರುವುದರಿಂದ ಆಕೆಯನ್ನು ಬಲವಂತವಾಗಿ ಪತಿಯ ಮನೆಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೌನ್ಸೆಲಿಂಗ್ ವಿಫಲವಾದ ಹಿನ್ನೆಲೆಯಲ್ಲಿ, ಆಕೆಯನ್ನು ತನ್ನ ಮಹಿಳಾ ಸಂಗಾತಿಯೊಂದಿಗೆ ತೆರಳಲು ಪೊಲೀಸರು ಅನುಮತಿ ನೀಡಿದ್ದಾರೆ.

ಈ ಕುರಿತು ಕಾನೂನು ತಜ್ಞರು ಪ್ರತಿಕ್ರಿಯಿಸಿದ್ದು, ಭಾರತೀಯ ಸಂವಿಧಾನ ಹಾಗೂ ಕಾನೂನಿನ ಪ್ರಕಾರ ಯಾವುದೇ ವಯಸ್ಕ ವ್ಯಕ್ತಿಗೆ ಯಾರೊಂದಿಗೆ ವಾಸಿಸಬೇಕು ಎಂದು ತೀರ್ಮಾನಿಸುವ ಸಂಪೂರ್ಣ ಹಕ್ಕಿದೆ. ಮತ್ತೊಬ್ಬ ಮಹಿಳೆಯೊಂದಿಗೆ ಒಟ್ಟಿಗೆ ವಾಸಿಸುವುದು ಯಾವುದೇ ಅಪರಾಧವಲ್ಲ. ಆದರೆ, ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ ಮಾತ್ರಕ್ಕೆ ಮಕ್ಕಳ ಮೇಲಿನ ಕಾನೂನುಬದ್ಧ ಜವಾಬ್ದಾರಿಗಳು ಅಂತ್ಯವಾಗುವುದಿಲ್ಲ. ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 20 ರ ಅಡಿಯಲ್ಲಿ, ಮಕ್ಕಳು ತಮ್ಮ ಪೋಷಕರಿಂದ ಜೀವನಾಂಶವನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ ಎಂದು ವಿವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular