HomeLatest Newsಪಾಕ್ ಕ್ರಿಕೆಟ್‌ನಲ್ಲಿ ಹೊಸ ಬಿರುಗಾಳಿ: ಸೈಬರ್ ಕ್ರೈಮ್ ತನಿಖೆ ನಡುವೆ ರಿಜ್ವಾನ್ ಬಾಯಿ ಮುಚ್ಚಿಸಿದ ಪಿಸಿಬಿ!

ಪಾಕ್ ಕ್ರಿಕೆಟ್‌ನಲ್ಲಿ ಹೊಸ ಬಿರುಗಾಳಿ: ಸೈಬರ್ ಕ್ರೈಮ್ ತನಿಖೆ ನಡುವೆ ರಿಜ್ವಾನ್ ಬಾಯಿ ಮುಚ್ಚಿಸಿದ ಪಿಸಿಬಿ!

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಹಾಗೂ ಹಿರಿಯ ಕ್ರಿಕೆಟಿಗರ ನಡುವಿನ ಆನ್‌ಲೈನ್ ಜೂಜು ಮತ್ತು ಭ್ರಷ್ಟಾಚಾರದ ತನಿಖೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದಂತೆ ಹಿರಿಯ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನೇತೃತ್ವದ ಆಡಳಿತ ಮಂಡಳಿ ನಿರ್ಬಂಧ ಹೇರಿದೆ.

ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಪಾಕಿಸ್ತಾನ್ ತಂಡದ ಏಳು ಆಟಗಾರರನ್ನು ಪಿಸಿಬಿ ತವರೂರಿಗೆ ವಾಪಸ್ ಕಳುಹಿಸಿತ್ತು. ಅವರಲ್ಲಿ ಮೊಹಮ್ಮದ್ ರಿಜ್ವಾನ್ ಹಾಗೂ ಇಮಾಮ್ ಉಲ್ ಹಕ್ ಕೂಡ ಸೇರಿದ್ದಾರೆ. ಪಾಕಿಸ್ತಾನದ ನ್ಯಾಷನಲ್ ಸೈಬರ್ ಕ್ರೈಮ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್‌ಸಿಸಿಐಎ) ಇವರಿಬ್ಬರನ್ನು ತನಿಖೆಗೆ ಒಳಪಡಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಅಲ್ಲದೆ, ಪಿಸಿಬಿ ಭದ್ರತಾ ಪಡೆ ಇವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.

ಪಾಕಿಸ್ತಾನ ಮೂಲದ ಜಿಯೋ ನ್ಯೂಸ್ ವರದಿ ಪ್ರಕಾರ, ತಮ್ಮ ಮೇಲಿರುವ ಆರೋಪಗಳ ಕುರಿತು ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಲು ರಿಜ್ವಾನ್ ಎರಡು ಬಾರಿ ಪಿಸಿಬಿಯಿಂದ ಅನುಮತಿ ಕೋರಿದ್ದರು. ಆದರೆ ಆಡಳಿತ ಮಂಡಳಿ ಅವರ ಮನವಿಯನ್ನು ತಿರಸ್ಕರಿಸಿದೆ. ಕೇಂದ್ರ ಒಪ್ಪಂದದ (Central Contract) ನಿಯಮ 4.1ರ ಪ್ರಕಾರ ಆಟಗಾರರು ಮಂಡಳಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಮೊಬೈಲ್ ಫೋನ್ ಇನ್ನೂ ವಾಪಸ್ ಸಿಕ್ಕಿಲ್ಲ ಎಂದು ರಿಜ್ವಾನ್ ತಿಳಿಸಿದ್ದು, ಪಿಸಿಬಿಯನ್ನು ನಿಂದಿಸುವ ಉದ್ದೇಶ ತಮಗಿಲ್ಲ, ಕೇವಲ ತಮ್ಮ ಕಡೆಯ ಸತ್ಯವನ್ನು ಜನರಿಗೆ ತಿಳಿಸಲು ಬಯಸಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಭ್ರಷ್ಟಾಚಾರ ನಿಗ್ರಹ ದಳಕ್ಕೂ ರಿಜ್ವಾನ್ ಪತ್ರ ಬರೆದಿದ್ದು, ತನಿಖೆಯ ವಿವರಗಳನ್ನು ನೀಡುವಂತೆ ಎನ್‌ಸಿಸಿಐಎ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular