HomeIndiaವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಪ್ರಿಯಕರ: ಬಳಿಕ ತಾನೂ ಆತ್ಮಹತ್ಯೆಗೆ ಶರಣು

ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಪ್ರಿಯಕರ: ಬಳಿಕ ತಾನೂ ಆತ್ಮಹತ್ಯೆಗೆ ಶರಣು

ಲಖಿಂಪುರ್: ವಿದ್ಯಾರ್ಥಿಗಳ ಕಣ್ಣೆದುರಲೇ ಮಾಜಿ ಪ್ರಿಯಕರನೊಬ್ಬ ಶಿಕ್ಡ್ಷಕಿಯನ್ನು ಗುಂಡಿಟ್ತು ಹತ್ಯೆಗೈದಿದ್ದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿರುವ ಶಾಲೆಯೊಂದರಲ್ಲಿ ನಡೆದಿದೆ.

26 ವರ್ಷದ ಶಿಕ್ಷಕಿ ನಿಶತ್ ಫಾತಿಮಾ ಕೊಲೆಯಾದವರು. ಮೊಹಮ್ಮದ್ ಸೌದ್ ಶಿಕ್ಷಕಿಯನ್ನು ಗುಂಡಿಟ್ಟು ಕೊಂದ ಹಂತಕ. ಸೋಮವಾರ ಬೆಳಿಗ್ಗೆ ಮೊಹಮ್ಮದ್ ಸೌದ್ ಫಾತಿಮಾಳ ಶಾಲೆಗೆ ಬಂದಿದ್ದಾನೆ. ಹೀಗೆ ಬರುವಾಗ ತನ್ನ ಬ್ಯಾಗ್ ನಲ್ಲಿ ಗನ್ ಬಚ್ಚಿಟ್ಟುಕೊಂಡು ಬಂದಿದ್ದ. ಶಿಕ್ಷಕಿ ಫಾತಿಮಾಳನ್ನು ಮಾತನಾಡಬೇಕು ಎಂದು ಶಾಲೆಯ ಮಹಡಿಯ ಮೇಲೆ ಕರೆದೊಯ್ದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಹಮ್ಮದ್ ಸೌದ್ ತನ್ನ ಬ್ಯಾಗ್ ನಲ್ಲಿ ಪಿಸ್ತೂಲ್ ಅಡಗಿಸಿಟ್ಟುಕೊಂಡಿದ್ದ ವಿಷಯ ಆಕೆಗೆ ತಿಳಿದಿರಲಿಲ್ಲ. ಮಾತನಾಡುತ್ತಲೇ ಏಕಾಏಕಿ ಶಿಕ್ಷಕಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಕ್ತದ ಮಡುವಲ್ಲಿ ಬಿದ್ದ ಫಾತಿಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ.

ತನ್ನೊಂದಿಗಿನ ಸಂಬಂಧವನ್ನು ಗೆಳತಿ ಮುರಿದುಕೊಂಡಿದ್ದಕ್ಕೆ ಕುಪಿತಗೊಂಡ 27 ವರ್ಷದ ಮೊಹಮ್ಮದ್ ಸೌದ್, ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಎದುರೇ ಶಿಕ್ಷಕಿಯನ್ನು ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಸೋಮವಾರ ಬೆಳಿಗ್ಗೆ ಸುಮಾರು 11:30 ರ ಸುಮಾರಿಗೆ ‘ಚಿಲ್ಡ್ರನ್ಸ್ ಅಕಾಡೆಮಿ ಸ್ಕೂಲ್’ನಲ್ಲಿ ನಡೆದಿದೆ. ಮೃತ ಶಿಕ್ಷಕಿ ನಿಶತ್ ಫಾತಿಮಾ ಸುಮಾರು ಒಂದು ವರ್ಷದಿಂದ ಆ ಶಾಲೆಯಲ್ಲಿ ಬೋಧಿಸುತ್ತಿದ್ದರು. ಫಾತಿಮಾ ಮತ್ತು ಮೊಹಮ್ಮದ್ ಸೌದ್ ಪ್ರೇಮ ಸಂಬಂಧದಲ್ಲಿದ್ದರು ಮತ್ತು ಫಾತಿಮಾ ಇತ್ತೀಚೆಗಷ್ಟೇ ಆ ಸಂಬಂಧವನ್ನು ಕೊನೆಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೌದ್ ಚೀಲವೊಂದರಲ್ಲಿ ಪಿಸ್ತೂಲ್ ಅಡಗಿಸಿಟ್ಟುಕೊಂಡು ಶಾಲೆಗೆ ಬಂದಿದ್ದನು ಎಂದು ಪೊಲೀಸರು ಹೇಳಿದ್ದಾಅರೆ. ಆತ ಫಾತಿಮಾವನ್ನು ಕೆಳಗೆ ಕರೆಸಿದನು ಮತ್ತು ನಂತರ ಮೇಲಿನ ಮಹಡಿಯ ಕಾರಿಡಾರ್‌ಗೆ ಕರೆದೊಯ್ದಿದ್ದಾನೆ.

ಅವರು ಮೇಲಕ್ಕೆ ಹೋಗುತ್ತಿದ್ದಾಗ ಶಾಲಾ ಸಿಬ್ಬಂದಿಯೊಬ್ಬರು ಅವರನ್ನು ಹಿಂಬಾಲಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರಿಡಾರ್‌ನಲ್ಲಿ ಮಾತನಾಡುತ್ತಿದ್ದಾಗ, ಸೌದ್ ಪಿಸ್ತೂಲ್ ಹೊರತೆಗೆದು ಫಾತಿಮಾಳ ತಲೆಗೆ ಗುಂಡಿಕ್ಕಿದನು. ನಂತರ ತಾನೂ ಗುಂಡು ಹಾರಿಸಿಕೊಂಡಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯಾರ್ಥಿಗಳ ಎದುರೇ ಮೊಹಮ್ಮದ್ ಸೌದ್ ಫಾತಿಮಾ ಅವರನ್ನು ಕೈಯಿಂದ ಎಳೆದುಕೊಂಡು ಮೇಲಿನ ಮಹಡಿಗೆ ಕರೆದೊಯ್ಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಆತ ಎಳೆದುಕೊಂಡು ಹೋಗುತ್ತಿದ್ದಾಗ ಫಾತಿಮಾ ಪ್ರತಿರೋಧ ಒಡ್ಡುತ್ತಿರುವಂತೆ ತೋರುತ್ತಿತ್ತು.

ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗುಂಡಿನ ಸದ್ದು ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯಲ್ಲಿ ಆತಂಕವನ್ನು ಉಂಟುಮಾಡಿತು. ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಪೊಲೀಸರು ತಕ್ಷಣ ಶಾಲೆಗೆ ಆಗಮಿಸಿ ತನಿಖೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ನಂತರ ಈ ವಿಷಯದ ಬಗ್ಗೆ ನಮಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಶಾಲೆಯ ಭದ್ರತಾ ನಿಯಮಾವಳಿಗಳನ್ನು ಸಹ ಪರಿಶೀಲಿಸಲಾಗುವುದು ಮತ್ತು ಯಾವುದೇ ಲೋಪಗಳು ಕಂಡುಬಂದರೆ ಸರಿಪಡಿಸುವ ಸೂಚನೆಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular