HomeIndiaದೇಶಾದ್ಯಂತ ಸೆ.26ರಿಂದ ಸತತ 5 ದಿನ ಬ್ಯಾಂಕ್ ಬಂದ್? ಗ್ರಾಹಕರಿಗೆ ಮಹತ್ವದ ಸಲಹೆ

ದೇಶಾದ್ಯಂತ ಸೆ.26ರಿಂದ ಸತತ 5 ದಿನ ಬ್ಯಾಂಕ್ ಬಂದ್? ಗ್ರಾಹಕರಿಗೆ ಮಹತ್ವದ ಸಲಹೆ

ದೇಶಾದ್ಯಂತ ಬ್ಯಾಂಕ್‌ಗಳು ಸತತ ಐದು ದಿನಗಳ ಕಾಲ ಬಂದ್ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಬ್ಯಾಂಕ್‌ಗಳು ಸೂಚಿಸಿವೆ. ಈ ಕುರಿತು ಎಸ್‌ಬಿಐ ತನ್ನ ಗ್ರಾಹಕರಿಗೆ ಅಲರ್ಟ್ ನೀಡಿದ್ದು, ಇತರೆ ಬ್ಯಾಂಕ್‌ಗಳೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುತ್ತಿವೆ.

ಬ್ಯಾಂಕ್‌ ನೌಕರರು ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಮತ್ತೊಮ್ಮೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ತಿಂಗಳಲ್ಲಿ ಇದು ಎರಡನೇ ಮುಷ್ಕರವಾಗಲಿದೆ.

ಸೆಪ್ಟೆಂಬರ್ 26ರಿಂದ 5 ದಿನ ಬ್ಯಾಂಕ್ ಬಂದ್?

ಸೆಪ್ಟೆಂಬರ್ 28, 29 ಮತ್ತು 30ರಂದು ದೇಶಾದ್ಯಂತ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಘೋಷಿಸಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 26ರಂದು ನಾಲ್ಕನೇ ಶನಿವಾರ ಮತ್ತು ಸೆಪ್ಟೆಂಬರ್ 27ರಂದು ಭಾನುವಾರ ಇರುವುದರಿಂದ, ಮುಷ್ಕರ ಮುಂದುವರಿದರೆ ಒಟ್ಟು ಸತತ ಐದು ದಿನ ಬ್ಯಾಂಕ್‌ಗಳ ಶಾಖೆಗಳು ಕಾರ್ಯನಿರ್ವಹಿಸದಿರುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಬ್ಯಾಂಕ್‌ ಶಾಖೆಗಳಲ್ಲಿ ಕೆಲಸ ಇರುವ ಗ್ರಾಹಕರು ಮುಂಚಿತವಾಗಿಯೇ ತಮ್ಮ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ. ಸರ್ಕಾರಿ ಬ್ಯಾಂಕ್‌ಗಳ ಜೊತೆಗೆ ಖಾಸಗಿ ಬ್ಯಾಂಕ್‌ಗಳ ಸೇವೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಎಸ್‌ಬಿಐನಿಂದ ಗ್ರಾಹಕರಿಗೆ ಅಲರ್ಟ್

ಬ್ಯಾಂಕ್‌ ನೌಕರರ ಮುಷ್ಕರದಿಂದ ಬ್ಯಾಂಕ್‌ ಶಾಖೆಗಳು ಸತತವಾಗಿ ಬಂದ್ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಗ್ರಾಹಕರು ಪರ್ಯಾಯ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಎಸ್‌ಬಿಐ ಸೂಚಿಸಿದೆ.

ಮುಷ್ಕರ ಆರಂಭವಾಗುವ ಮುನ್ನವೇ ಅಗತ್ಯ ಬ್ಯಾಂಕಿಂಗ್‌ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಎಸ್‌ಬಿಐ ತನ್ನ X ಖಾತೆ ಮೂಲಕ ಗ್ರಾಹಕರಿಗೆ ತಿಳಿಸಿದೆ. ತುರ್ತು ಹಣದ ಅಗತ್ಯವಿದ್ದರೆ ಎಟಿಎಂ ಮತ್ತು ಎಡಬ್ಲ್ಯೂಎಂ ಸೇವೆಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದೆ.

UPI, ಮೊಬೈಲ್ ಬ್ಯಾಂಕಿಂಗ್ ಬಳಸಿ

ಗ್ರಾಹಕರು ಕಸ್ಟಮರ್ ಸರ್ವಿಸ್ ಪಾಯಿಂಟ್‌ಗಳು, UPI, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ಎಸ್‌ಬಿಐ ತಿಳಿಸಿದೆ.

ಬ್ಯಾಂಕ್‌ ಶಾಖೆಗಳ ಕಾರ್ಯಾಚರಣೆಗೆ ತಾತ್ಕಾಲಿಕ ಅಡಚಣೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಎಸ್‌ಬಿಐ, ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದೆ. ಈ ಹಿಂದೆ ಸೆಪ್ಟೆಂಬರ್ 11ರಂದು ಬ್ಯಾಂಕ್‌ ನೌಕರರು ಮುಷ್ಕರ ನಡೆಸಿದ್ದರು. ಇದೀಗ ಮತ್ತೆ ಸೆಪ್ಟೆಂಬರ್ 28ರಿಂದ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿರುವುದೇಕೆ?

ಬ್ಯಾಂಕ್ ನೌಕರರು ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ .  ಇದರ ಜೊತೆಗೆ ಪರಿಷ್ಕೃತ PLI (Performance Linked Incentive) ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಯೂ ಇದೆ.

ಬ್ಯಾಂಕ್ ನೌಕರರ ಪ್ರಕಾರ, ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ 2024ರ ಮಾರ್ಚ್ 8ರಂದು 12ನೇ ದ್ವಿಪಕ್ಷೀಯ ಒಪ್ಪಂದ ಮತ್ತು 9ನೇ ಜಂಟಿ ಒಪ್ಪಂದ ನಡೆದಿದ್ದರೂ, ಇದುವರೆಗೆ ಈ ವ್ಯವಸ್ಥೆ ಜಾರಿಗೆ ಬಂದಿಲ್ಲ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ UFBU ಎಚ್ಚರಿಕೆ ನೀಡಿದೆ.

ಗ್ರಾಹಕರು ಏನು ಮಾಡಬೇಕು?

  • ಸೆಪ್ಟೆಂಬರ್ 28ಕ್ಕೂ ಮುನ್ನ ಅಗತ್ಯ ಬ್ಯಾಂಕ್ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳಿ.

  • ಹಣದ ಅಗತ್ಯವಿದ್ದರೆ ಮುಂಚಿತವಾಗಿ ಎಟಿಎಂ ಮೂಲಕ ಹಣ ಪಡೆಯಿರಿ.

  • UPI, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ.

  • YONO ಮತ್ತು ಇತರ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳಿ.

  • ಅಗತ್ಯವಿದ್ದಲ್ಲಿ CSP ಹಾಗೂ ADWM ಸೇವೆಗಳನ್ನು ಬಳಸಿಕೊಳ್ಳಿ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular