HomeInternationalಒಂದೇ ದಿನ ಕೋಟಿ ರೂ. ಮೌಲ್ಯದ 36 ಐಫೋನ್ ಖರೀದಿ ; ಯುವಕರಿಬ್ಬರ ಕಾರ್ಯಕ್ಕೆ ನೆಟ್ಟಿಗರ...

ಒಂದೇ ದಿನ ಕೋಟಿ ರೂ. ಮೌಲ್ಯದ 36 ಐಫೋನ್ ಖರೀದಿ ; ಯುವಕರಿಬ್ಬರ ಕಾರ್ಯಕ್ಕೆ ನೆಟ್ಟಿಗರ ಬೆರಗು !

ಜಾಗತಿಕ ತಂತ್ರಜ್ಞಾನ ದೈತ್ಯ ಆಪಲ್ ಸಂಸ್ಥೆಯ ನೂತನ ಐಫೋನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದಂತೆ ವಿಶ್ವದಾದ್ಯಂತ ಮೊಬೈಲ್ ಪ್ರಿಯರಲ್ಲಿ ಭಾರಿ ಸಂಚಲನ ಮೂಡಿದೆ. ಭಾರತದ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ಮಲೇಷ್ಯಾ ಮತ್ತು ದುಬೈ ನಗರಗಳ ಅಧಿಕೃತ ಮಳಿಗೆಗಳ ಎದುರು ನೂತನ ಆವೃತ್ತಿಯ ಫೋನ್ ಖರೀದಿಸಲು ಗ್ರಾಹಕರು ನಡುರಾತ್ರಿಯಿಂದಲೇ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಈ ನಡುವೆ ದುಬೈನಲ್ಲಿ ಇಬ್ಬರು ಯುವಕರು ಒಂದೇ ದಿನ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ 36 ಫೋನ್‌ಗಳನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ದುಬೈ ನಿವಾಸಿಗಳಾದ ರೈಹಾನ್ ಮತ್ತು ಮುಹಮ್ಮದ್ ಶಬೀಬ್ ಎಂಬಿಬ್ಬರು ಹೊಸ ಫೋನ್ ಪಡೆಯಲು ದುಬೈ ಮಾಲ್‌ನ ವಾಹನ ನಿಲುಗಡೆ ಆವರಣದಲ್ಲೇ ಇಡೀ ರಾತ್ರಿ ಕಳೆದು ಮುಂಜಾನೆ ಆಪಲ್ ಮಳಿಗೆಯ ಬಾಗಿಲು ತಟ್ಟಿದ್ದಾರೆ. ಇವರು ಮಳಿಗೆಯ ಸಮೀಪದಲ್ಲೇ ವಾಸವಿದ್ದರೂ, ಮನೆಯಲ್ಲಿ ಮಲಗಿದರೆ ಬೆಳಿಗ್ಗೆ ತಡವಾಗಿ ಎದ್ದು ನಿಗದಿತ ಸಮಯ ತಪ್ಪಿಹೋಗಬಹುದು ಎಂಬ ಆತಂಕದಿಂದ ರಾತ್ರಿಯೇ ಮಾಲ್ ಆವರಣಕ್ಕೆ ಬಂದು ತಂಗಿದ್ದರು. ಬೆಳಿಗ್ಗೆ 6 ಗಂಟೆಗೆ ಮಳಿಗೆ ತೆರೆಯುತ್ತಿದ್ದಂತೆ ಇವರು ಮೊದಲ ಸಾಲಿನಲ್ಲಿ ನಿಂತು ಫೋನ್‌ಗಳನ್ನು ಪಡೆದುಕೊಂಡಿದ್ದಾರೆ.

ಕಳೆದ 14 ವರ್ಷಗಳಿಂದಲೂ ಹೊಸ ಆವೃತ್ತಿಯ ಫೋನ್‌ಗಳನ್ನು ಬಿಡುಗಡೆಯಾದ ದಿನವೇ ಖರೀದಿಸುವ ಹವ್ಯಾಸ ಹೊಂದಿರುವ ಈ ಜೋಡಿ, ಈ ಬಾರಿ ಭಾರಿ ಪ್ರಮಾಣದ ಖರೀದಿಗೆ ಮುಂದಾಗಿದೆ. ಭಾರತದಲ್ಲಿರುವ ತಮ್ಮ ಆಪ್ತ ಸ್ನೇಹಿತರು ಹಾಗೂ ಗ್ರಾಹಕರಿಗಾಗಿ ತಾವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಫೋನ್‌ಗಳನ್ನು ಖರೀದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮೊದಲ ದಿನವೇ ಸುಮಾರು 400,000 ದಿರ್ಹಮ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿ 36 ಮೊಬೈಲ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 14 ಫೋನ್‌ಗಳನ್ನು ದುಬೈ ಮಾಲ್‌ನಲ್ಲಿ ಹಾಗೂ ಉಳಿದವುಗಳನ್ನು ಮಾಲ್ ಆಫ್ ದಿ ಎಮಿರೇಟ್ಸ್ ಮಳಿಗೆಯಿಂದ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಮರುದಿನಕ್ಕಾಗಿ ಮತ್ತೆ 40 ಹೊಸ ಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶ್ವಾದ್ಯಂತ ನೂತನ ಫೋನ್ ಬಿಡುಗಡೆಯಾದಾಗಲೆಲ್ಲಾ ಇಂತಹ ಭಾರಿ ಜನಸ್ತೋಮ ಕಂಡುಬರುವುದು ಸಾಮಾನ್ಯವಾದರೂ, ನಿದ್ದೆಗೆಟ್ಟು, ಲಕ್ಷಾಂತರ ರೂಪಾಯಿ ಸುರಿದು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಜನರ ಈ ಕ್ರೇಜ್ ಕುರಿತು ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಕೇವಲ ಒಂದು ಮೊಬೈಲ್ ಸಾಧನಕ್ಕಾಗಿ ಇಷ್ಟೊಂದು ಸಾಹಸ ಅಗತ್ಯವೇ ಎಂದು ಹಲವರು ಪ್ರಶ್ನಿಸಿದರೆ, ತಂತ್ರಜ್ಞಾನ ಪ್ರಿಯರು ಇದನ್ನು ಹೊಸತನದ ಮೇಲಿನ ಉತ್ಸಾಹ ಎಂದು ಬಣ್ಣಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular