HomeKarnatakaಅಬ್ಬಬ್ಬಾ ಜ್ಞಾನೇಂದ್ರ ಕುಮಾರ್ ಶೋಕಿ..! ₹30 ಲಕ್ಷದ ಚಿನ್ನಾಭರಣ ಹಿಂತಿರುಗಿಸುವಂತೆ ಗೆಳತಿಗೆ ‘CID’ ನೋಟಿಸ್.!

ಅಬ್ಬಬ್ಬಾ ಜ್ಞಾನೇಂದ್ರ ಕುಮಾರ್ ಶೋಕಿ..! ₹30 ಲಕ್ಷದ ಚಿನ್ನಾಭರಣ ಹಿಂತಿರುಗಿಸುವಂತೆ ಗೆಳತಿಗೆ ‘CID’ ನೋಟಿಸ್.!

ಬೆಂಗಳೂರು: ಸಹಕಾರ ಸಂಘದ ಖಾತೆ ಪರಿಶೀಲನೆ ವೇಳೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಗೆಳತಿಗೆ ನೀಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.

ಸಹಕಾರ ಸಂಘದ ಖಾತೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಪ್ರತಿಷ್ಠಿತ ಜ್ಯುವೆಲ್ಲರಿ ಶಾಪ್‌ಗೆ ಸಂಘದ ಖಾತೆಯಿಂದ ₹56 ಲಕ್ಷ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಹಣದ ಪಾವತಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ತನಿಖೆಯಲ್ಲಿ, ಗೆಳತಿಗೆ ಜುಲೈ ತಿಂಗಳಲ್ಲಿ ಸುಮಾರು ₹26 ಲಕ್ಷ ಮೌಲ್ಯದ ಚಿನ್ನ ಕೊಡಿಸಲಾಗಿದ್ದು, ಅದನ್ನು ಸಿಐಡಿ ಸೀಜ್ ಮಾಡಿ ವಶಪಡಿಸಿಕೊಂಡಿದ್ದರು. ನಂತರ ಏಪ್ರಿಲ್ ತಿಂಗಳಿನಲ್ಲಿ ಅದೇ ಗೆಳತಿಗೆ ₹30 ಲಕ್ಷ ಮೌಲ್ಯದ ಚಿನ್ನ ಕೊಡಿಸಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.30 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಿಂತಿರುಗಿಸುವಂತೆ ಸಂಬಂಧಪಟ್ಟ ಗೆಳತಿಗೆ ಸಿಐಡಿ ನೋಟಿಸ್ ನೀಡಿದೆ ಎನ್ನಲಾಗಿದೆ.ಒಟ್ಟಾರೆ ಸುಮಾರು ₹56 ಲಕ್ಷ ಮೌಲ್ಯದ ಚಿನ್ನಾಭರಣಕ್ಕೆ ಸಂಬಂಧಿಸಿದ ವಹಿವಾಟಿನ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಹಕಾರ ಸಂಘದ ಖಾತೆಯಿಂದ ಜ್ಯುವೆಲ್ಲರಿ ಅಂಗಡಿಗೆ ಹಣ ವರ್ಗಾವಣೆಯಾಗಿರುವುದರ ಉದ್ದೇಶ, ಚಿನ್ನಾಭರಣ ಖರೀದಿಯ ಹಿನ್ನೆಲೆ ಹಾಗೂ ಹಣದ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬೀಳಬೇಕಿದೆ.

ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ; ಜ್ಞಾನೇಂದ್ರ ಕುಮಾರ್ ಕಾರುಬಾರು

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಮಾನತುಗೊಂಡಿರುವ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರಿಗೆ ಸಂಬಂಧಿಸಿದ ಹಣದ ವಹಿವಾಟಿನ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಯ ವೇಳೆ ಅವರ ಗೆಳತಿಗೆ ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿರುವುದು ಹಾಗೂ ಅವರ ಸಹೋದರನ ಹೆಸರಿನಲ್ಲಿ ವಿಲ್ಲಾ ಖರೀದಿಸಿರುವ ಬಗ್ಗೆ ಇತ್ತೀಚೆಗೆ ಬಯಲಾಗಿತ್ತು.

ಗೆಳತಿಗೆ ₹26 ಲಕ್ಷದ ಚಿನ್ನ?

ತನಿಖಾ ಮೂಲಗಳ ಪ್ರಕಾರ, ಜ್ಞಾನೇಂದ್ರ ಕುಮಾರ್ ಅವರು ಅಯೋಧ್ಯೆ ಮೂಲದ ತಮ್ಮ ಗೆಳತಿಯನ್ನು ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಗೆ ಕರೆದುಕೊಂಡು ಹೋಗಿ ಸುಮಾರು ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಮತ್ತೊಮ್ಮೆ ₹30 ಲಕ್ಷ ಮೌಲ್ಯದ ಚಿನ್ನ ಕೊಡಿಸಿರುವುದು ಇದೀಗ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸಹಕಾರ ಸಂಘದ ಖಾತೆಯಿಂದ ಹಣ ವರ್ಗಾವಣೆ

ತನಿಖೆಯ ಪ್ರಕಾರ, ಚಿನ್ನಾಭರಣದ ಬಿಲ್ ಪಾವತಿಸಲು ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸೊಸೈಟಿಗೆ ಸಂಬಂಧಿಸಿದ ಬಸವರಾಜು ಅವರ ಬ್ಯಾಂಕ್ ಖಾತೆಯಿಂದ ₹26 ಲಕ್ಷ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಈ ಹಣದ ಮೂಲ ಹಾಗೂ KPSC ನೇಮಕಾತಿ ಅಕ್ರಮದೊಂದಿಗೆ ಅದರ ಸಂಬಂಧವನ್ನು ಸಿಐಡಿ ಪರಿಶೀಲಿಸಿತ್ತು.

ಅಣ್ಣನ ಹೆಸರಲ್ಲಿ ವಿಲ್ಲಾ

ಇದೇ ಪ್ರಕರಣದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಐಷಾರಾಮಿ ವಿಲ್ಲಾವೊಂದನ್ನು ಜ್ಞಾನೇಂದ್ರ ಕುಮಾರ್ ಅವರ ಸಹೋದರ ಕಮಲಾಪತಿ ಅವರ ಹೆಸರಿನಲ್ಲಿ ಖರೀದಿಸಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಆಸ್ತಿಗೆ ಬಳಸಲಾದ ಹಣದ ಮೂಲವನ್ನು ಸಿಐಡಿ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

ಜ್ಞಾನೇಂದ್ರ ಕುಮಾರ್ ಅವರು 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ KPSC ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅವರ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಬ್ಯಾಂಕ್ ಖಾತೆಗಳು, ಆಸ್ತಿ ದಾಖಲೆಗಳು, ಚಿನ್ನಾಭರಣ ಖರೀದಿ ಬಿಲ್‌ಗಳು ಮತ್ತು ಇತರ ಹಣಕಾಸು ವಹಿವಾಟುಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular