HomeEntertainmentನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ಭಾರತೀಯ ಸೀರೆ ಮೆರುಗು: ಕಪ್ಪು ಉಡುಪಿನಲ್ಲಿ ರಾಣಿ ಮುಖರ್ಜಿ ಗ್ಲಾಮರಸ್ ಲುಕ್!

ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ಭಾರತೀಯ ಸೀರೆ ಮೆರುಗು: ಕಪ್ಪು ಉಡುಪಿನಲ್ಲಿ ರಾಣಿ ಮುಖರ್ಜಿ ಗ್ಲಾಮರಸ್ ಲುಕ್!

ಅಂತರರಾಷ್ಟ್ರೀಯ ಫ್ಯಾಷನ್ ವೇದಿಕೆಯಲ್ಲಿ ಭಾರತೀಯ ಉಡುಪಿನ ಸೌಂದರ್ಯವನ್ನು ಬಾಲಿವುಡ್ ನಟಿ ರಾಣಿ ಮುಖರ್ಜಿ ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ಪ್ರಸಿದ್ಧ ಡಿಸೈನರ್ ಸಬ್ಯಾಸಾಚಿ ಮುಖರ್ಜಿ ಅವರ ರನ್‌ವೇ ಶೋ ಸೆಪ್ಟೆಂಬರ್ 15 ರಂದು ಮ್ಯಾನ್‌ಹ್ಯಾಟನ್‌ನಲ್ಲಿ ನೆರವೇರಿತು. ಈ ಕಾರ್ಯಕ್ರಮದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ನಟಿ ರಾಣಿ ಮುಖರ್ಜಿ, ತಮ್ಮ ವಿಶಿಷ್ಟ ಕಪ್ಪು ಬಣ್ಣದ ಸೀರೆಯಲ್ಲಿ ಎಲ್ಲರ ಗಮನ ಸೆಳೆದರು.

ಸಬ್ಯಾಸಾಚಿ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ಸಿಲ್ಕ್ ಸೀರೆಯನ್ನು ತೊಟ್ಟಿದ್ದ ರಾಣಿ ಮುಖರ್ಜಿ, ಅತ್ಯಂತ ಸಿಂಪಲ್ ಹಾಗೂ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡರು. ವಿ-ನೆಕ್ ಮಾದರಿಯ ತೋಳಿಲ್ಲದ ಬ್ಲೌಸ್ ಜೊತೆಗೆ ಈ ಸೀರೆಯನ್ನು ಧರಿಸಿದ್ದ ಅವರು, ಅದಕ್ಕೆ ತಕ್ಕಂತೆ ಕಪ್ಪು ಬಣ್ಣದ ಸನ್‌ಗ್ಲಾಸ್, ಸಣ್ಣ ಬಂಗಾರದ ಓಲೆ ಹಾಗೂ ಉಂಗುರಗಳನ್ನು ತೊಟ್ಟು ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದರು.

ಈ ಫ್ಯಾಷನ್ ಶೋ ಮೂಲಕ ಡಿಸೈನರ್ ಸಬ್ಯಾಸಾಚಿ ಅವರು ದೀರ್ಘಾವಧಿಯ ನಂತರ ನ್ಯೂಯಾರ್ಕ್ ಫ್ಯಾಷನ್ ವೀಕ್‌ಗೆ ಮರಳಿದ್ದಾರೆ. 2009ರಲ್ಲಿ ಮೊದಲ ಬಾರಿಗೆ ಈ ವೇದಿಕೆಯಲ್ಲಿ ಭಾಗವಹಿಸಿದ್ದ ಅವರು, ಈ ಬಾರಿ ಬೆಂಗಾಲ್ ಬೈಜಾಂಟೈನ್ ಬ್ರಾಡ್‌ವೇ ಎಂಬ ಹೊಸ ಕಲೆಕ್ಷನ್ ಪ್ರದರ್ಶಿಸಿದರು. ಇದರಲ್ಲಿ ಬಂಗಾಳದ ಸಾಂಪ್ರದಾಯಿಕ ಕಲೆ ಹಾಗೂ ಪಾಶ್ಚಿಮಾತ್ಯ ಉಡುಪುಗಳ ಸಂಯೋಜನೆ ಹೊಂದಿದ್ದ ಒಟ್ಟು 72 ವಿಭಿನ್ನ ಉಡುಪುಗಳನ್ನು ಪ್ರದರ್ಶಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿ ಅವರ ಜೊತೆಗೆ ಸೌಂದರ್ಯ ತಜ್ಞೆ ಅನೈತಾ ಶ್ರಾಫ್ ಅದಾಜಾನಿಯಾ, ನಟ ಸೆಂಧಿಲ್ ರಾಮಮೂರ್ತಿ ಹಾಗೂ ಡಿಸೈನರ್ ಪ್ರಬಲ್ ಗುರುಂಗ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಭಾಗವಹಿಸಿದ್ದರು. ಸಾಂಪ್ರದಾಯಿಕ ಭಾರತೀಯ ಸೀರೆಗೆ ಜಾಗತಿಕ ವೇದಿಕೆಯಲ್ಲಿ ಹೊಸ ಮೆರುಗು ನೀಡಿದ ರಾಣಿ ಮುಖರ್ಜಿ ಅವರ ಈ ಲುಕ್ ಈಗ ಫ್ಯಾಷನ್ ಜಗತ್ತಿನಲ್ಲಿ ಸಕತ್ ಸದ್ದು ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular