ಬೆಂಗಳೂರು-ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೆ ಉಲ್ಬಣಿಸುತ್ತಿರುವ ಸಂಚಾರ ದಟ್ಟಣೆಯಿಂದ ಕಚೇರಿ ಉದ್ಯೋಗಿಗಳಷ್ಟೇ ಅಲ್ಲದೆ, ಶಾಲೆಗೆ ತೆರಳುವ ಪುಟ್ಟ ಮಕ್ಕಳು ಹಾಗೂ ಶಿಕ್ಷಕರು ಪಡುತ್ತಿರುವ ಪರದಾಟ ತಪ್ಪಿಸಲು ರಾಜ್ಯ ಸರ್ಕಾರ ಶಾಲಾ ಸಮಯದ ಪರಿಷ್ಕರಣೆಗೆ ಗಂಭೀರ ಚಿಂತನೆ ನಡೆಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಂಬಂಧಪಟ್ಟ ಇಲಾಖೆಗಳು ಹಾಗೂ ಪಾಲುದಾರರ ಜತೆ ಸಮಾಲೋಚನೆ ನಡೆಸಿ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರಿನ ಸರ್ಕಾರಿ ಶಾಲೆಗಳು ಪ್ರಸ್ತುತ ಬೆಳಿಗ್ಗೆ 10:30 ರಿಂದ ಸಂಜೆ 4:30 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಟ್ರಾಫಿಕ್ ದಟ್ಟಣೆಯಿಂದ ಶಾಲೆಗೆ ತಲುಪಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಸಮಯವನ್ನು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3:30ಕ್ಕೆ ಬದಲಾಯಿಸುವಂತೆ ಅಥವಾ 30 ನಿಮಿಷದಿಂದ 1 ಗಂಟೆಗಳ ಕಾಲಾವಧಿ ಮುಂಚಿತವಾಗಿ/ಹೊಂದಾಣಿಕೆ ಮಾಡಲು ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಖಾಸಗಿ ಶಾಲಾ ಒಕ್ಕೂಟಗಳು ಮನವಿ ಮಾಡಿವೆ.
ಕಚೇರಿ ಉದ್ಯೋಗಿಗಳ ಓಡಾಟದ ಪೀಕ್ ಅವರ್ ಮತ್ತು ಶಾಲಾ ವಾಹನಗಳ ಸಂಚಾರ ಸಮಯ ಒಂದೇ ಆಗಿರುವುದೇ ರಸ್ತೆಗಳಲ್ಲಿ ಭಾರಿ ಜಾಮ್‌ಗೆ ಪ್ರಮುಖ ಕಾರಣವಾಗಿದೆ.
ಈ ಚರ್ಚೆ ಹೊಸದಲ್ಲ
ಈ ಚರ್ಚೆ ಹೊಸದಲ್ಲ
ಬೆಂಗಳೂರು ಸಂಚಾರ ದಟ್ಟಣೆಗೆ ಶಾಲೆಗಳ ಆರಂಭ–ಮುಕ್ತಾಯದ ಸಮಯವೂ ಕಾರಣವಾಗುತ್ತಿದೆ ಎಂಬ ವಿಚಾರ ಇದೇ ಮೊದಲ ಬಾರಿಗೆ ಕೇಳಿಬರುತ್ತಿಲ್ಲ.
2023ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್, ಬೆಂಗಳೂರಿನ ಸಂಚಾರ ಸಮಸ್ಯೆ ಹಿನ್ನೆಲೆಯಲ್ಲಿ ಶಾಲೆಗಳು ಹಾಗೂ ಕೈಗಾರಿಕೆಗಳು, ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳ ಕೆಲಸದ ಸಮಯವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು.
ಈ ಬಾರಿ ಸರ್ಕಾರವು ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಟ್ರಾಫಿಕ್ ಪೊಲೀಸ್, ಪೋಷಕರು, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಆಡಳಿತ ಮಂಡಳಿಗಳು, ಶಿಕ್ಷಕರು, ಶಾಲಾ ವಾಹನ ಚಾಲಕರ ಸಂಘಟನೆಗಳು ಸೇರಿದಂತೆ ಸಂಬಂಧಿತ ಎಲ್ಲರ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ನಡೆಯಲಿದೆ.
ಸಂಚಾರ ಪೊಲೀಸರು, BMTC, ಸರ್ಕಾರಿ–ಖಾಸಗಿ ಶಾಲೆಗಳು, ಶಿಕ್ಷಕರು ಹಾಗೂ ಪೋಷಕರ ಪ್ರತಿನಿಧಿಗಳು ಸಮಯ ಬದಲಾವಣೆಗಿಂತ ಸ್ಥಳೀಯವಾಗಿ ಸಂಚಾರ ನಿರ್ವಹಣೆ ಮಾಡುವುದು ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿದ್ದರು.
ಪೋಷಕರು,ಆತಂಕವೇನು?
ಪೋಷಕರು,ಆತಂಕವೇನು?
2023ರ ಚರ್ಚೆಯಲ್ಲಿಯೇ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಶಾಲಾ ಸಮಯವನ್ನು ಇನ್ನಷ್ಟು ಮುಂಚಿತಗೊಳಿಸುವುದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗಬಹುದು ಎಂದು ಆಕ್ಷೇಪಿಸಿದ್ದವು. ಅನೇಕ ಶಾಲೆಗಳಲ್ಲಿ ಈಗಾಗಲೇ ಬೆಳಗ್ಗೆ 8ರಿಂದ 8.30ರೊಳಗೆ ವಿದ್ಯಾರ್ಥಿಗಳ ವರದಿ ಸಮಯವಿದ್ದು, ತರಗತಿಗಳು ಸುಮಾರು 9 ಗಂಟೆಗೆ ಆರಂಭವಾಗುತ್ತವೆ ಎಂಬ ವಾದವೂ ಕೇಳಿಬಂದಿತ್ತು.
ಈ ಬಾರಿ ಸರ್ಕಾರವು ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಟ್ರಾಫಿಕ್ ಪೊಲೀಸ್, ಪೋಷಕರು, ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಆಡಳಿತ ಮಂಡಳಿಗಳು, ಶಿಕ್ಷಕರು, ಶಾಲಾ ವಾಹನ ಚಾಲಕರ ಸಂಘಟನೆಗಳು ಸೇರಿದಂತೆ ಸಂಬಂಧಿತ ಎಲ್ಲರ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ನಡೆಯಲಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಕರ್ನಾಟಕದ ನಿಯಮಗಳ ಪ್ರಕಾರ ಶಾಲಾ ಕೆಲಸದ ಸಮಯವನ್ನು ನಿಗದಿಪಡಿಸುವಾಗ ವಿದ್ಯಾರ್ಥಿಗಳ ಅನುಕೂಲ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸುವ ಅವಕಾಶ ಶಾಲಾ ಆಡಳಿತಕ್ಕೆ ಇದೆ ಎಂಬುದನ್ನು ಹೈಕೋರ್ಟ್‌ನ ಹಿಂದಿನ ತೀರ್ಪು ಕೂಡ ದಾಖಲಿಸಿದೆ.
ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜುಗಳು ಹಾಗೂ ಐಟಿ/ಬಿಟಿ ಕಂಪನಿಗಳ ಕೆಲಸದ ಸಮಯವನ್ನು ವಿಭಿನ್ನವಾಗಿ (Staggered timings) ನಿಗದಿಪಡಿಸುವಂತೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ಸರ್ಕಾರಕ್ಕೆ ಸಲಹೆ ನೀಡಿತ್ತು.
ಬೆಂಗಳೂರು ಸಂಚಾರ ಪೊಲೀಸ್ (Traffic Police), ಪೋಷಕರ ಸಂಘಟನೆಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಾಲಾ ವಾಹನ (ಕ್ಯಾಬ್/ಬಸ್) ಚಾಲಕರ ಒಕ್ಕೂಟಗಳ ಜತೆ ಸಭೆ ನಡೆಸಿ, ಎಲ್ಲರ ಸಾಧಕ-ಬಾಧಕಗಳ ಚರ್ಚೆಯ ಬಳಿಕ ಅಧಿಕೃತ ಆದೇಶ ಹೊರಬೀಳಲಿದೆ

