ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೂ ಶೂಟೌಟ್ ನಡೆದಿದೆ. ಸುಮಾರು 66 ಬಾರಿ ಗುಂಡಿನ ಚಕಮಕಿ ನಡೆದಿದೆ. ಈ ರೀತಿ ಪದೇ ಪದೇ ಆಗ್ತಾ ಇರುತ್ತೆ. ಅದನ್ನೆಲ್ಲ ರಾಅಜಕೀಯವಾಗಿ ಮಾತನಾಡಬಾರದು. ಅರಣ್ಯ ಅಧಿಕಾರಿಗಳ ತಪ್ಪು ಸಾಬೀತಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ 4 ಶೂಟೌಟ್ ಆಗಿತ್ತು. ಮೂರು ಜನ ಮತೃಪಟ್ಟಿದ್ದರು. 2011 ರಿಂದ 2026ರ ವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ಚಾಮರಾಜನಗರ ವಿಭಾಗದಲ್ಲೇ ಆಗಿವೆ. ಸುಮಾರು 66 ಬಾರಿ ಶೂಟೌಟ್ ಪ್ರಕರಣಗಳು ಆಗಿವೆ. ಈ ರೀತಿ ಪದೇ ಪದೇ ಆಗ್ತಾ ಇರುತ್ತೆ ಎಂದರು.
ಚಾಮರಾಜನಗರದಲ್ಲಿ ಕಳ್ಳಬೇಟೆ ಶಿಬಿರಗಳಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹಾನಿಮಾಡಿದವರು ಯಾರೆಂಬುದನ್ನ ಪೊಲೀಸರು ಗುರುತಿಸಿದ್ದಾರೆ. ಅವರು ಹಿಂದಿನ ಕೇಸ್ ಗಳಲ್ಲಿ ಇದ್ದಂಥವರು. ಆದರೂ ರಿಪೋರ್ಟ್ ನಲ್ಲಿ ಏನು ಬಂದಿದೆ ಅದರಂತೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಅಧಿಕಾರಿಗಳದ್ದು ಏನಾದರೂ ತಪ್ಪಿದ್ದರೆ, ಅವರ ವಿರುದ್ಧ ಶಿಶ್ತು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರವೇ ಮೂವರನ್ನು ಕೊಲೆ ಮಾಡಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ರು ಆವಾಗ ಬನ್ನೇರುಘಟ್ಟದಲ್ಲಿ ಶ್ರೀಗಂಧ ಕದಿಯೋಕೆ ಹೋಗಿದ್ದ ಸಂದರ್ಭದಲ್ಲಿ ಶೂಟೌಟ್ ಆಗಿ, ಒಬ್ಬನಿಗೆ ಗಾಯ ಆಗಿತ್ತು. ಬೊಮ್ಮಾಯಿ ಕಾಲದಲ್ಲೂ ಕೂಡ ಬನ್ನೇರುಘಟ್ಟದಲ್ಲೇ ಶೂಟೌಟ್ ಆಗಿತ್ತು ಆಗ ಒಬ್ಬ ಸತ್ತು ಹೋಗಿದ್ದ. ಪಾಲಾರ್ ನಲ್ಲಿ ಶೂಟೌಟ್ ಆಗಿತ್ತು. ಹೀಗೆ ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲೇ 4 ಶೂಟೌಟ್ ಆಗಿ, ಮೂರು ಜನ ಸತ್ತಿದ್ದರು. 2011 ರಿಂದ 2026ರ ವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ಚಾಮರಾಜನಗರ ವಿಭಾಗದಲ್ಲೇ ಆಗಿವೆ. ಸುಮಾರು 66 ಬಾರಿ ಗುಂಡಿನ ಚಕಮಕಿ ಆಗಿವೆ ಅರಣ್ಯ ಪ್ರದೇಶಗಳಲ್ಲಿ ಈ ರೀತಿ ಆಗ್ತಾ ಇರುತ್ತೆ. ಇದೆಲ್ಲವನ್ನೂ ಆರೋಪ ಪ್ರತ್ಯಾರೋಪ ರಾಜಕಾರಣಕ್ಕೆ ಮಾಡಬಾರದು. ನಮ್ಮ ಅಧಿಕಾರಿಗಳ ತಪ್ಪು ಸಾಬೀತಾದ್ರೆ ಅವರ ವಿರುದ್ಧವೂ ಕ್ರಮ ತಗೊಳ್ತೇವೆ ಎಂದು ತಿಳಿಸಿದರು.
ಅರಣ್ಯ ಉಳಿಯಬೇಕು, ವನ್ಯಜೀವಿ ರಕ್ಷಣೆ ಕೂಡ ಆಗಬೇಕು. ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೂ ತೊಂದರೆ ಆಗಬಾರದು, ಅದೇ ಮುಖ್ಯ. ಆರೋಪ ಪ್ರತ್ಯಾರೋಪದ ಮೂಲಕ ನಮ್ಮ ಇಲಾಖೆಯ ಸಿಬ್ಬಂದಿ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು. ಅದೇ ರೀತಿ ಸಾರ್ವಜನಿಕರಿಗೂ ತೊಂದರೆ ಆಗಬಾರದು ಎಂದರು.

