ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್, ನಟ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಬೃಹತ್ ಪ್ರಾಜೆಕ್ಟ್ ಬಹುಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದರ ಭೋಜ್ಪುರಿ ಟ್ರೇಲರ್ವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವೈರಲ್ ಟ್ರೇಲರ್ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದ್ದಲ್ಲ, ಬದಲಿಗೆ ಅಭಿಮಾನಿಯೊಬ್ಬರು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ಫ್ಯಾನ್ ಮೇಡ್ ವೀಡಿಯೋ. ಭೋಜ್ಪುರಿ ಭಾಷೆಯಲ್ಲಿ ಡಬ್ ಮಾಡಲಾದ ಈ ಟ್ರೇಲರ್ ನೆಟ್ಟಿಗರ ಗಮನ ಸೆಳೆದಿದ್ದು, ಕಾಮೆಂಟ್ ಬಾಕ್ಸ್ನಲ್ಲಿ ಹಾಸ್ಯಸ್ಪದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ‘ರಾವಣನ ಪಾತ್ರಕ್ಕೆ ನಟ ರವಿ ಕಿಶನ್ ಧ್ವನಿ ಇರಬೇಕಿತ್ತು’ ಎಂದು ಕೆಲವರು ತಮಾಷೆ ಮಾಡಿದರೆ, ‘ಈ ಚಿತ್ರ ನಿಜವಾಗಿಯೂ ಭೋಜ್ಪುರಿಯಲ್ಲಿ ರಿಲೀಸ್ ಆದರೆ ಯುಪಿ ಮತ್ತು ಬಿಹಾರದಲ್ಲೇ ನೂರು ಕೋಟಿ ರೂಪಾಯಿ ಗಳಿಸಲಿದೆ’ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಜೆಟ್ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಚಿತ್ರದ ಬಜೆಟ್ ಪ್ರಚಾರ ವೆಚ್ಚವೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ 4000 ಕೋಟಿ ರೂಪಾಯಿ ಎಂದು ನಟ ಯಶ್ ಸ್ಪಷ್ಟಪಡಿಸಿದ್ದಾರೆ. ಪ್ರಸಿದ್ಧ ಬ್ರಹ್ಮ ಎಐ ತಂತ್ರಜ್ಞಾನ ಬಳಸಿ ಎಲ್ಲಾ ಭಾಷೆಗಳ ಡಬ್ಬಿಂಗ್ ಆಡಿಯೋ ಲಿಪ್-ಸಿಂಕ್ ಸರಿದೂಗಿಸಲಾಗಿದ್ದು, ಈ ಚಿತ್ರದ ಮೊದಲ ಭಾಗ ಮುಂಬರುವ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.
“>

