HomeKarnatakaರೈತರಿಗೆ ಸಿಹಿಸುದ್ದಿ: ಮೋಡಬಿತ್ತನೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅಸ್ತು

ರೈತರಿಗೆ ಸಿಹಿಸುದ್ದಿ: ಮೋಡಬಿತ್ತನೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅಸ್ತು

ಬೆಂಗಳೂರು-ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಮತ್ತು ಬರದ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೋಡ ಬಿತ್ತನೆ (Cloud Seeding) ಕಾರ್ಯಕ್ರಮ ಜಾರಿಗೆ ಮುಂದಾಗಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ*ಪ್ರಸಕ್ತ ಜಲ ವರ್ಷದಲ್ಲಿ ಮಳೆ ಕೊರತೆ ಕುರಿತು ಚರ್ಚಿಸಿ, ಮೋಡ ಬಿತ್ತನೆ ಕಾರ್ಯಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ 2026-27ನೇ ಸಾಲಿನಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಬಳಸಿ ಮಳೆ ಕೊರತೆ ನಿವಾರಿಸಲು ಸರ್ಕಾರ ನಿರ್ಧರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

28.52 ಕೋಟಿ ಯೋಜನೆಗೆ ಅನುಮೋದನೆ

ಯೋಜನೆಯ ವೆಚ್ಚ ಮತ್ತು ಅನುಮೋದನೆ

ಈ ಸಂಬಂಧ *M/s. Kyathi Climate Modification Consultants LLP (KCMC)* ಸಂಸ್ಥೆಯಿಂದ ದಿನಾಂಕ 13.08.2026 ರಂದು ಸಲ್ಲಿಸಲಾದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.

ಪ್ರಸ್ತಾವನೆಯಂತೆ *60 ದಿನಗಳ ಅವಧಿಗೆ 200 ಗಂಟೆಗಳ ವೈಮಾನಿಕ ಹಾರಾಟ (01 aircraft)* ನಡೆಸಲು:

– *ಸ್ಥಿರ ವೆಚ್ಚ:* ರೂ. 27.52 ಕೋಟಿ

– *ವೇರಿಯಬಲ್ ವೆಚ್ಚ:* ರೂ. 1.00 ಕೋಟಿ

– *ಒಟ್ಟು ವೆಚ್ಚ:* *ರೂ. 28.52 ಕೋಟಿ (GST ಹೊರತುಪಡಿಸಿ)*

ಸರ್ಕಾರದ ಆದೇಶ ಸಂಖ್ಯೆ *ಜಸಂಇ 144 ಎಂಟಿಪಿ 2026, ದಿನಾಂಕ 19.08.2026* ರಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

*ವೈಜ್ಞಾನಿಕ ಉಸ್ತುವಾರಿ KSNDMCಗೆ*

ತಾಂತ್ರಿಕ ಮತ್ತು ಆರ್ಥಿಕ ಉಸ್ತುವಾರಿ

ಮೋಡ ಬಿತ್ತನೆ ಕಾರ್ಯಾಚರಣೆಯು specialised scientific activity ಆಗಿರುವುದರಿಂದ, ಪ್ರಸ್ತಾವನೆಯ ತಾಂತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಸ್ವತಂತ್ರವಾಗಿ ಪ್ರಮಾಣೀಕರಿಸಲು ಕರ್ನಾಟಕ ನೀರಾವರಿ ನಿಗಮದಲ್ಲಿ institutional expertise ಇಲ್ಲವೆಂದು ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ:

ತಾಂತ್ರಿಕ ಉಸ್ತುವಾರಿ:* Estimate Preparation, Technical Parameters, Meteorological Assessment, Monitoring, Operational Assessment ಮತ್ತು Completion Certification ಜವಾಬ್ದಾರಿಯನ್ನು *ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)* ವಹಿಸಿಕೊಳ್ಳಲಿದೆ.

ಆರ್ಥಿಕ ಉಸ್ತುವಾರಿ:*

ಆಡಳಿತಾತ್ಮಕ ಮತ್ತು ಬಿಲ್ ಪಾವತಿ ಸೇರಿದಂತೆ financial matters ಅನ್ನು *ಕರ್ನಾಟಕ ನೀರಾವರಿ ನಿಗಮ* ನಿಯಮಾನುಸಾರ ನಿರ್ವಹಿಸಲಿದೆ.

ಈ ಆದೇಶವು ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು 1977ರ 17ನೇ ನಿಯಮದ 2ನೇ ಉಪನಿಯಮದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು *ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-1) ಶುಭಾ ಕೆ.* ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಯೋಜನೆಯ ಅನುಷ್ಠಾನ ಮತ್ತು ನಿರೀಕ್ಷಿತ ಪ್ರಯೋಜನ

*ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ* ಅವರ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮುಂಗಾರು ಕೊರತೆಯ ನಡುವೆ ರೈತರಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಇದು ಸಹಕಾರಿಯಾಗಲಿದೆ ಎಂದು ಇಲಾಖೆ ತಿಳಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular