HomeKarnatakaಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್ ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಸ್ಟಿಂಗ್ ಮಾಸ್ಟರ್ ವಿರುದ್ಧವೇ ಸ್ಟಿಂಗ್ ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ನವದೆಹಲಿ-ಸ್ಟಿಂಗ್ ಆಪರೇಶನ್ ಮಾಡುವುದರಲ್ಲಿ ಮಾಸ್ಟರ್ ಆಗಿರುವ ವ್ಯಕ್ತಿಯೇ ತನ್ನ ವಿರುದ್ಧ ಸ್ಟಿಂಗ್ ನಡೆಯುತ್ತಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸ್ಟಿಂಗ್ ಮಾಡುವ ಗುರುವಿಗೇ ತಿರುಮಂತ್ರ ಹೇಳಲು ಸಾಧ್ಯವೇ? ಹಾಗೇನಾದರೂ ಆಗಿದ್ದರೆ ತನಿಖೆ ಮಾಡಿಸಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಸ್ಟಿಂಗ್ ಆಪರೇಶನ್ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ

ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ನನ್ನನ್ನು ಟ್ರ್ಯಾಪ್ ಮಾಡಲಿಕ್ಕೆ ಬಂದಿದ್ದರು, ಆ ವಿಷಯ ಪೊಲಿಸರಿಗೂ ಗೊತ್ತು. ಹಲವಾರು ಫೋಟೋಗಳು ಇವೆ ಎಂದು ಬೇರೆ ಹೇಳಿದ್ದಾರೆ. ಸ್ಟಿಂಗ್ ಮಾಡಿದ ಆ ಪಿತಾಮಹ ಯಾರು ಅಂತಲೂ ಗೊತ್ತು ಎಂದಿದ್ದಾರೆ. ಅವರೆಲ್ಲಾ ಯಾರೂ ಎಂಬುದನ್ನು ಜನಗಳ ಮುಂದೆ ಇಡಿ. ನಿಮ್ಮ ಬಳಿ ₹35 ಲಕ್ಷ ಬಹುಮಾನ ಪಡೆದುಕೊಂಡು ಎಸ್ ಐಟಿ ಇದೆಯಲ್ಲವೇ? ಇಂದು ಟಾಂಗ್ ಕೊಟ್ಟರು.

ಈ ಮುಖ್ಯಮಂತ್ರಿ ನೀಡುತ್ತಿರುವ ಹೇಳಿಕೆಗಳೇ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಜನರ ಗಮನವನ್ನು ಬೇರೆಡೆ ತಿರುಗಿಸಲು ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ನೈಸ್ (NICE) ಕಂಪನಿಗೆ ಸಂಬಂಧಿಸಿದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರವನ್ನು ಮರೆಮಾಚಲು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದಂತೆ ತಡೆಯಲು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಡಿಕೆಶಿ ವಿರುದ್ಧ ಆರೋಪ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿಗಳು ಕ್ಯಾಬಿನೆಟ್ ನಲ್ಲಿ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನನ್ನನ್ನು ಟ್ರ್ಯಾಪ್ ಮಾಡಲಿಕ್ಕೆ ಬಂದಿದ್ದರು. ಆ ವಿಚಾರ ಪೊಲಿಸರಿಗೂ ಗೊತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಇವೆ, ಫೋಟೋಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಆ ಪಿತಾಮಹ ಯಾರು ಅಂತಲೂ ಗೊತ್ತು ಎಂದಿದ್ದಾರೆ. ಹಾಗಾದರೆ ಯಾರು ಆ ಪಿತಾಮಹ? ಅವರ ಬಗ್ಗೆ ಮಾಹಿತಿ ಇದ್ದರೆ ಜನಗಳ ಮುಂದೆ ಇಡಿ. ಅದಕ್ಕೆ ಯಾಕೆ ಹಿಂಜರಿಯುತ್ತೀರಿ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.

ರಾಜ್ಯದ ಸಿಎಂ ಮತ್ತು ಭ್ರಷ್ಟಾಚಾರದ ಆರೋಪಗಳು

ರಾಜ್ಯದ ಸಿಎಂ ಆಗಿ, ಹಿಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದೀರಿ? ಯಾಕೆ ಮುಚ್ಚಿಡುತ್ತಿದ್ದಿರಾ? ರಾಜ್ಯದ ಸಿಎಂ ಆಗಿದ್ದವರನ್ನು, ಹಾಲಿ ಮುಖ್ಯಮಂತ್ರಿಯನ್ನು ಟ್ರ್ಯಾಪ್ ಮಾಡತಕ್ಕದ್ದು ಅಂದರೆ ಏನರ್ಥ? ಎಲ್ಲಾ ಮಾಹಿತಿ ಇದ್ದರೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎಂದು ಕೇಂದ್ರ ಸಚಿವರು ಕೇಳಿದರು.

ಸ್ಟಿಂಗ್ ಮಾಡಲು ಬಂದವರನ್ನು ಹಿಡಿಯದೇ ಕಡಲೆಪುರಿ ತಿನ್ನುತ್ತಿದ್ದೀರಾ? ಎಲ್ಲಾ ವಿಷಯ ಗೊತ್ತಿದ್ದರೂ ಅವರನ್ನು ಯಾಕೆ ಹಿಡಿಯಲಿಲ್ಲ? ಈ ನೈಸ್ ಸಂಸ್ಥೆ ಮಾಲೀಕ ನಿಮ್ಮನ್ನು ಭೇಟಿ ಮಾಡಿ ಹೋದರು. ಅವರೇ ಏನಾದರೂ ನಿಮ್ಮನ್ನು ಟ್ರ್ಯಾಪ್ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೋ ಎಂಬ ಸತ್ಯವನ್ನ ನೀವೇ ಹೇಳಬೇಕು. ನಿಮ್ಮ ಹೇಳಿಕೆಗಳು ಹೇಗಿವೆ ಎಂದರೆ l ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗಿದೆ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಈ ಹಿಂದೆಯೂ ನನ್ನನ್ನು ಒಂದು ಮಾಧ್ಯಮದವರು ಟ್ರ್ಯಾಪ್ ಮಾಡಲಿಕ್ಕೆ ಬಂದು ಸ್ವತಃ ನನಗೇ ಸಿಕ್ಕಿ ಹಾಕಿಕೊಂಡರು ಎಂದು ಹೇಳಿದ್ದೀರಿ. ಮೊನ್ನೆ ನೂರು ದಿನದ ಮಾಧ್ಯಮಗೋಷ್ಟಿಯಲ್ಲಿ ಕೂಡ ಆ ಮಾತನ್ನು ಪುನರುಚ್ಚಾರ ಮಾಡಿದ್ದೀರಿ. ಇವಾಗ ಯಾರು ಬಂದಿದ್ದರು? ಯಾವ ವ್ಯಕ್ತಿ ಬಂದಿದ್ದರು? ಯಾವ ಪಿತಾಮಹ ಬಂದಿದ್ದರು? ನೀವಿದ್ದ ಜಾಗದಲ್ಲಿ ಸಿಸಿ ಕ್ಯಾಮೆರಾ ಇರಬೇಕಲ್ಲಾ? ಎಲ್ಲವನ್ನೂ ತೆಗೆಸಿ. ನಿಮ್ಮ ಹಳೆಯ ಚಾಳಿ ಬಗ್ಗೆ ಜನರ ಮೇಲೆ ಹೇಳಿ ಸ್ಟಂಟ್ ಮಾಡುತ್ತಿದ್ದೀರಿ. ಇದು ಹೇಗಿದೆ ಎಂದರೆ ಗುರುವಿಗೆ ತಿರುಮಂತ್ರದ ತರಹ ಇದೆ. ಯಾರು ಅವರು ಅಂತ ಜನಗಳ‌ ಮುಂದೆ ಹೇಳಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಟ್ರ್ಯಾಪ್ ಮಾಡುವ ಕೆಲಸ ಮಾಡಿದ್ದು ಯಾರು?ಮಾಜಿ ಮಂತ್ರಿ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲೇ 40-48 ಜನರ ಟ್ರ್ಯಾಪ್ ಬಗ್ಗೆ ಅಸ್ಲೆಂಬಿಯಲ್ಲಿ ಮಾತನಾಡಿದ್ದರು. ನಮ್ಮ ಮಂತ್ರಿಮಂಡಲದ ಮಂತ್ರಿಯೇ ಮೂಲಪುರುಷನೇ ಇದ್ದಾನೆ ಎಂದು ರಾಜಣ್ಣ ಹೇಳಿದ್ದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲಾ ನಿಮ್ಮದೇ ಕೈವಾಡ ಅಲ್ಲವೇ? ಎಂದು ಡಿಕೆಶಿಯನ್ನು ನೇರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳು ಮತ್ತು ಪ್ರಶ್ನೆಗಳು

ಸ್ಟಿಂಗ್ ಯಾರು ಮಾಡಲು ಬಂದರು ಎಂಬುದನ್ನು ಮುಖ್ಯಮಂತ್ರಿ ಹೇಳಲೇಬೇಕಾಗುತ್ತದೆ. ಅವರು ಹೇಳಿಕೆ ಕೊಟ್ಟು ಸುಮ್ಮನೆ ಇರೋಕೆ ಆಗೋದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ಟ್ರ್ಯಾಪ್ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಇದೆಲ್ಲಾ ತನಿಖೆಗೆ ಒಳಪಡಬೇಕು. ರಾಜ್ಯಪಾಲರನ್ನು ಭೇಟಿಗೆ ತೆರಳಿದ್ದವರಲ್ಲಿ ಒಬ್ಬರು ಇದ್ದಾರೆ ಎಂದು ಹೇಳಿದ್ದೀರಾ? ಯಾರು ಅವರು? ಎಂಬುದನ್ನು ಅವರು ಹೇಳಬೇಕಾಗುತ್ತದೆ ಎಂದು ಕೇಂದ್ರ ಒತ್ತಾಯಿಸಿದರು.

ಗೃಹ ಸಚಿವರು ನನ್ನ ಬಗ್ಗೆ ಏನೋ ಹೇಳಿದ್ದಾರೆ, ಅವರ ಬಳಿ ಪೆನ್ ಡ್ರೈ ಅದು ಇದು ಅಂತ ಬೇರೆ ಹೇಳಿದ್ದಾರೆ. ನಾನು ಅವರು ಹೇಳಿದ ರೀತಿಯ ಪೆನ್ ಡ್ರೈವ್ ಇಟ್ಟಿಲ್ಲ. ಇತ್ತೀಚೆಗೆ ಬಿಡುತ್ತಿದ್ದೇನಲ್ಲ, ನೈಸ್ ದಾಖಲೆಗಳು.. ಅಂತಹ

ಪೆನ್ ಡ್ರೈವ್ ಗಳು ನನ್ನ ಬಳಿ ಇರೋದು. ಈ ಸರಕಾರ ರಚನೆಯಾದ ಕೇವಲ 15-20 ದಿವಸಗಳಲ್ಲಿ ಎಂಜಿನಿಯರ್ ಗಳ ವರ್ಗಾವಣೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದ ಪೆನ್ ಡ್ರೈವ್ ಅದು ಎಂದು ಅವರು ಹೇಳಿದರು.

ಈ ರಾಜ್ಯದ ಸಿಎಂಗೆ ಏನಾದರೂ ಆ ಸ್ಥಾನದ ಮಾರ್ಯಾದೆ ಉಳಿಸಬೇಕೆಂದಿದ್ದರೆ ಆ ಟ್ರ್ಯಾಪ್, ಸ್ಟಿಂಗ್ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಬೇಕು. ಸಂಪುಟದಲ್ಲಿ ನಡೆದ ಚರ್ಚೆ ಬಗ್ಗೆ ಯಾರ ಹೊರಗಡೆ ಬಿಟ್ಟಿದ್ದು, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದು ಹೊರ ಬಂದಿಲ್ಲ. ಸ್ಟಿಂಗ್ ಬಗ್ಗೆ ಎಚ್ಚರಿಕೆ ಕೊಟ್ಟಿದ್ದು ಹೊರ ಬಂದಿದೆ. ನಿಮ್ಮನ್ನ ಸ್ಟಿಂಗ್ ಮಾಡಲು ಬಂದವರನ್ನು ಏತಕ್ಕೆ ಕಳಿಸಿದ್ದೀರಿ? ಯಾಕೆ ಬಿಟ್ಟು ಕಳಿಸಿದಿರಿ? ನಿಮ್ಮ ಭೇಟಿಗೆ ಬಂದರೆ ಪೋನ್ ಗಳನ್ನು ಹೊರಗೆ ಇಡಿಸಿ ಒಳಗಡೆ ಕರೆಸಿಕೊಳ್ತಿರಾ! ಸ್ಟಿಂಗ್ ಮಾಡಲು ಬಡವರನ್ನು ಅರೆಸ್ಟ್ ಮಾಡದೆ ನಿಮ್ಮ ಅಧಿಕಾರಿಗಳು ಯಾಕೆ ಬಿಟ್ಟಿರಿ? ನೀವು ಕೆಲಸ ಮಾಡಲಿಕ್ಕಾಗದೆ ನಿಮ್ಮ ಆಕ್ರಮಗಳನ್ನು ಬಯಲಿಗೆಳೆದಾಗ ಅದನ್ನು ಮುಚ್ಚಿಡಲಿಕ್ಕೆ ಈ ಕೆಲಸ ಮಾಡುತ್ತಿದ್ದೀರಿ. ಇದು ತನಿಖೆಯಾದರೆ ನಿಮಗೆ ಸುತ್ತಿಕೊಳ್ಳುತ್ತದೆ. ನಿಮ್ಮ ಬೆನ್ನು ನಿಮಗೆ ಕಾಣಲ್ಲ, ಇದರ ಮೂಲ ಪಿತಾಮಹ ಯಾರು ಅಂತಾ ಎಲ್ಲರಿಗೂ ಗೊತ್ತಾಗುತ್ತದೆ. ಈ ರೀತಿಯ ನಾಟಕ ಬಿಟ್ಟು ಸತ್ಯಾಂಶ ಹೊರಗಡೆ ಇಡಿ, ಸರಿಯಾಗಿ ತನಿಖೆ ಮಾಡಿ ಎಂದು ಸಚಿವರು ಸವಾಲು ಹಾಕಿದರು.

ಅಕ್ರಮಗಳ ವಿರುದ್ಧದ ಕಠಿಣ ಕ್ರಮದ ಅಗತ್ಯ

ರಮೇಶ್ ಜಾರಕಿಹೊಳಿ, ರಾಜಣ್ಣ, ಸತೀಶ್ ಜಾರಕಿಹೊಳಿ ಅವರನ್ನ ಸೈಲೆಂಟ್ ಮಾಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಡಿ ಮತ್ತು ಐಟಿ ಅಧಿಕಾರಿಗಳು ಬರುವುದು ಅಕ್ರಮಗಳನ್ನು ಪತ್ತೆ ಹಚ್ಚಲು. ಅವರು ನಿಮ್ಮನ್ನ ಟ್ರ್ಯಾಪ್ ಮಾಡಲು ಬರಲ್ಲ. 136 ಶಾಸಕರಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಶಕ್ತಿ ವಿರೋಧ ಪಕ್ಷಕ್ಕಿಲ್ಲ. ಮುಖ್ಯಮಂತ್ರಿಗಳು ಸರ್ಕಾರ ಉಳಿಸುವಂತ ಶಕ್ತಿ ಇರುವವರು. ಅವರು ಸ್ಥಾನ ಉಳಿಸಿಕೊಳ್ಳಲು ಆಡಳಿತ ಪಕ್ಷದವರೇ ಬಿಜೆಪಿ, ಜೆಡಿಎಸ್‌ನ 15-20 ಜನರ ಬೆಂಬಲ ಕೊಡುವವರು ಇದ್ದಾರೆ ಎಂದು ಹೇಳಿದ್ದಾರೆ. ಹಿಗಿದ್ದ ಮೇಲೆ ಅಸ್ಥಿರ ಮಾಡುವವರು ಯಾರು? ಈ ಸುಳ್ಳು ಎಷ್ಟು ದಿನ ಹೇಳುತ್ತಿರಾ? ನಿಮ್ಮ ಕೆಟ್ಟ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ಹಾಳಾಗುತ್ತಿದೆ. ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸತ್ಯಾಂಶ ಹೊರ ಬರಬೇಕು? ಎಂದು ಸಚಿವರು ಒತ್ತಾಯಿಸಿದರು.

ಮಾಧ್ಯಮಗಳಿಗೆ ಸುದ್ದಿ ಕೊಡೊದು, ಯಾವ ಸುದ್ದಿ ಹಾಕಿದರೆ ಜಾಹೀರಾತು ಕೊಡುತ್ತೇವೆ, ಹಣಕಾಸು ಆಮಿಷಗಳನ್ನು ಒಡ್ಡಿ ಪತ್ರಕರ್ತರನ್ನು ಹೆದರಿಸುತ್ತಿದ್ದೀರಿ ಎನ್ನುವುದು ಗೊತ್ತಿದೆ. ತಮ್ಮ ಪರ ಸುದ್ದಿ ಹಾಕಿಸಿಕೊಳ್ಳಲು ಮಾಧ್ಯಮಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದೀರಿ. ನಿಮ್ಮನ್ನು ಕಟ್ ಮಾಡ್ತಿವಿ, ನಿಮ್ಮನ್ನು ಬೆಳೆಯೊಕ್ಕೆ ಬಿಡಲ್ಲ ಅಂತಾ ಸಂಪಾದಕರನ್ನೇ ಹೆದರಿಸುತ್ತಿದ್ದಿರಾ ಎನ್ನುವುದು ಗೊತ್ತಿದೆ. ಯಾರನ್ನು ಕಂಟ್ರೋಲ್ ಮಾಡಬೇಕು, ಯಾವ ಸುದ್ದಿ ಬರಬೇಕು ಎಂದು ನಿಮ್ಮ ಅಪ್ಪಣೆ ಕೊಟ್ಟು ಜನರನ್ನ ಇಟ್ಟಿದ್ದೀರಾ ಹೇಗೆ? ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ನೀವು ಅಂದುಕೊಂಡಷ್ಟು ದುರ್ಬಲ ಅಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಪ್ರಿಯಾಂಕ್ ಖರ್ಗೆ ಬಗ್ಗೆ ಸರಕಾರದ ಟೀಕೆಗಳು

*ಪ್ರಿಯಾಂಕ್ ಖರ್ಗೆಗೆ ತರಾಟೆ:*

ಪ್ರಿಯಾಂಕ್ ಖರ್ಗೆ ಅವರು ನೈತಿಕತೆಯ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಅಂತಹ ನೈತಿಕತೆ ಇದ್ದರೆ ಕೆಪಿಎಸ್ಸಿಯಲ್ಲಿ ನಡೆದ 24 ಜನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಳ ನೇಮಕಾತಿಗೆ ರುಜು ಹಾಕಿದ್ದರ ಬಗ್ಗೆ ಇದುವರೆಗೂ ಯಾಕೆ ಉತ್ತರ ನೀಡಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ನಾನು ಕೇಳಿದ ಪ್ರಶ್ನೆಗಳಿಗೆ, ಬಿಡುಗಡೆ ಮಾಡಿದ ದಾಖಲೆಗಳಿಗೆ ಈವರೆಗೂ ಪ್ರಿಯಾಂಕ್ ಖರ್ಗೆ ಉತ್ತರ ಕೊಟ್ಟಿಲ್ಲ. ಅವರ ಯೋಗ್ಯತೆಗೆ ಆರೋಪಗಳ ತುಟಿ ಬಿಚ್ಚಿಲ್ಲ. ನನ್ನ ನೈತಿಕತೆಯ ನಗ್ಗೆ ಮಾತನಾಡುತ್ತಾರೆ. ಸಿದ್ದಾರ್ಥ ಟ್ರಸ್ಟ್ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಾನು ಹೊಡೆದಿಲ್ಲ. ಅವರದು ದೊಡ್ಡ ಕಂತಯೇ ಇದೆ. ಎಲ್ಲಾ ತ್ಯಜಿಸಿ ಸನ್ಯಾಸಿಯಾದ ಸಿದ್ದಾರ್ಥನ ಹೆಸರನ್ನು ಇಟ್ಟುಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ. ಇವೆಲ್ಲಾ ಬಿಟ್ಟು ಗೌರಯುತವಾಗಿ ನಮ್ಮ ಪ್ರಶ್ನೆಗಳನ್ನ ಚೆರ್ಚೆ ಮಾಡಿ ಉತ್ತರ ಕೊಡಿ ಎಂದು ಕೇಂದ್ರ ಸಚಿವರು ಕೇಳಿದರು.

ಮಾಜಿ ಶಾಸಕ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಹಾಜರಿದ್ದರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular