HomeIndiaಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ; ಧರ್ಮಗುರುವಿಗೆ 4 ಮರಣದಂಡನೆ ವಿಧಿಸಿದ ಕೋರ್ಟ್

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ; ಧರ್ಮಗುರುವಿಗೆ 4 ಮರಣದಂಡನೆ ವಿಧಿಸಿದ ಕೋರ್ಟ್

ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 47 ವರ್ಷದ ಧರ್ಮಗುರು ಎಸ್. ಅಬ್ರಹಾಂಗೆ ವಿಶೇಷ POCSO ನ್ಯಾಯಾಲಯ ನಾಲ್ಕು ಮರಣದಂಡನೆ ವಿಧಿಸಿದೆ.

ಗಂಗೈಕೊಂಡನ್ ದೇವರ್ಕುಲಂ ಸಮೀಪದ ಮೇಲ ಇಳಂತೈಕುಳಂನಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ ನಡೆಸುತ್ತಿದ್ದ ಅಬ್ರಹಾಂ, ಶಾಲಾ ರಜೆ ವೇಳೆ ನೈತಿಕ ವಿಜ್ಞಾನ ಮತ್ತು ಬೈಬಲ್ ತರಗತಿಗಳನ್ನು ನಡೆಸುವುದಾಗಿ ಹೇಳಿ 8, 12 ಮತ್ತು 13 ವರ್ಷದ ನಾಲ್ವರು ಬಾಲಕಿಯರನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ. ಬಳಿಕ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಸಂತ್ರಸ್ತ ಬಾಲಕಿಯರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ತಿರುನೆಲ್ವೇಲಿ ಗ್ರಾಮಾಂತರ ಮಹಿಳಾ ಪೊಲೀಸ್ ಠಾಣೆ ಪೊಲೀಸರು 2022ರ ಜುಲೈ 5ರಂದು ಅಬ್ರಹಾಂನನ್ನು ಬಂಧಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಸುರೇಶ್ ಕುಮಾರ್, ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿ, ಪ್ರಕರಣವನ್ನು ‘ಅತ್ಯಂತ ಅಪರೂಪದಲ್ಲೇ ಅಪರೂಪದ’ (rarest of rare) ಪ್ರಕರಣ ಎಂದು ಪರಿಗಣಿಸಿ ಮರಣದಂಡನೆ ವಿಧಿಸಿದರು.

ನಾಲ್ವರು ಬಾಲಕಿಯರಿಗೆ ಸಂಬಂಧಿಸಿದಂತೆ ತಲಾ ಒಂದು ಮರಣದಂಡನೆಯಂತೆ ಒಟ್ಟು ನಾಲ್ಕು ಮರಣದಂಡನೆಗಳನ್ನು ವಿಧಿಸಲಾಗಿದ್ದು, ₹52,000 ದಂಡವನ್ನೂ ವಿಧಿಸಲಾಗಿದೆ. ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಿದ್ದ ಅಬ್ರಹಾಂ ಅವರನ್ನೇ ದುರ್ಬಳಕೆ ಮಾಡಿಕೊಂಡಿದ್ದು, ಯಾವುದೇ ನೈಜ ಪಶ್ಚಾತ್ತಾಪ ತೋರಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ ನಾಲ್ವರು ಸಂತ್ರಸ್ತರಿಗೆ ತಲಾ ₹10 ಲಕ್ಷ ಪರಿಹಾರ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular