HomeKarnatakaಬಿಡದಿ ಟೌನ್ ಶಿಪ್, ನೈಸ್ ವಿಚಾರ: ಮಾಜಿ, ಹಾಲಿ ಶಾಸಕರೆಲ್ಲ ಒಟ್ಟಾಗಿ ಚರ್ಚೆಗೆ ಬನ್ನಿ; ಏಕಾಂಗಿಯಾಗಿ...

ಬಿಡದಿ ಟೌನ್ ಶಿಪ್, ನೈಸ್ ವಿಚಾರ: ಮಾಜಿ, ಹಾಲಿ ಶಾಸಕರೆಲ್ಲ ಒಟ್ಟಾಗಿ ಚರ್ಚೆಗೆ ಬನ್ನಿ; ಏಕಾಂಗಿಯಾಗಿ ನಾನು ಎದುರುಸಲು ಸಿದ್ದ: ಕುಮಾರಸ್ವಾಮಿ ಸವಾಲು

ಬೆಂಗಳೂರು: ಬಿಡದಿ ಟೌನ್‌ಶಿಪ್ ಮತ್ತು ನೈಸ್‌ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಚರ್ಚೆಗೆ ಬರಲಿ. ಈ ಯೋಜನೆಗಳ ಪಿತಾಮಹರು ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಿಗೆ ನಾನು ನೇರ ಸವಾಲು ಹಾಕುತ್ತಿದ್ದೇನೆ. ಫ್ರೀಡಂ ಪಾರ್ಕ್‌ನಲ್ಲೇ ಒಂದು ವೇದಿಕೆ ಸಿದ್ಧಪಡಿಸಿ, ಬಹಿರಂಗ ಚರ್ಚೆಗೆ ನಿಮ್ಮ ಹಾಲಿ-ಮಾಜಿ ಶಾಸಕರೆಲ್ಲ ಒಟ್ಟಾಗಿ ಬನ್ನಿ, ನಿಮ್ಮೆಲ್ಲರನ್ನೂ ನಾನು ಏಕಾಂಗಿಯಾಗಿಯೇ ಎದುರಿಸಲು ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಹ್ವಾನಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ನೈಸ್ ಅಕ್ರಮದ ಬಗ್ಗೆ ದಾಖಲೆ‌ ಇಟ್ಟು ಮಾತನಾಡುತ್ತೇನೆ. ಕಾಂಗ್ರೆಸ್​​ನವರು ಚರ್ಚೆಗೆ ಬರಲಿ. ಜಯಚಂದ್ರ ಅವರೇ ನೈಸ್ ಅಕ್ರಮದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಬರೆದಿದ್ದೀರಿ. ಅದನ್ನ ಬಹಿರಂಗಪಡಿಸಿ, ಸರ್ಕಾರ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ.

1995ರ ಫೆಬ್ರವರಿ 2ರಂದು ಅಮೆರಿಕದ ಗವರ್ನರ್ ನೇತೃತ್ವದಲ್ಲಿ ಎಂಒಯು ಆಗಿದ್ದು ನಿಜ. ನಂತರ ಸಮಿತಿ ರಚಿಸಿ, ಸರ್ಕಾರದಿಂದ ಯಾವುದೇ ಹಣ ತೊಡಗಿಸದೆ ಕಂಪನಿಯೇ ಬಂಡವಾಳ ಹೂಡಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ ದೇವೇಗೌಡರು ಪ್ರಧಾನಿಯಾದ ಬಳಿಕ ಬಂದವರು ಈ ಯೋಜನೆಯ ದಾರಿಯನ್ನೇ ತಪ್ಪಿಸಿದರು. ಅಮೆರಿಕದಿಂದ ಬಂದ ಮೂಲ ಕಂಪನಿಯನ್ನೇ ದೂರವಿಟ್ಟು, ಮಧ್ಯವರ್ತಿಗಳು ಕೇಳಿದ್ದನ್ನೆಲ್ಲ ಮಾಡಿಕೊಟ್ಟ ಮಹಾನುಭಾವರು ಯಾರು ಡಿ.ಕೆ.ಶಿವಕುಮಾರ್ ಅವರೇ?’ ಎಂದು ಕೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

20 ಸಾವಿರ ಎಕರೆ ಪ್ರದೇಶದಲ್ಲಿ ಐದು ಟೌನ್‌ಶಿಪ್ ನಿರ್ಮಿಸಲು ಫ್ರೇಮ್‌ವರ್ಕ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಆದರೆ ಕೋರ್ಟ್ ಆದೇಶವನ್ನು ನಿಮಗೆ ಬೇಕಾದಂತೆ ತಿರುಚಿಕೊಂಡಿದ್ದೀರಿ. ರೈತರ ಜಮೀನನ್ನು ಲೂಟಿ ಮಾಡಿ, ಬರೋಬ್ಬರಿ 1.75 ಲಕ್ಷ ಎಕರೆ ಸ್ವಾಧೀನಪಡಿಸಿಕೊಳ್ಳಲು ಹವಣಿಸಿದವರು ಯಾರು? ಇಂದು ಇಡೀ ಬೆಂಗಳೂರು ಮಳೆಗೆ ಜಲಾವೃತವಾಗಲು ಮೂಲ ಕಾರಣಕರ್ತರು ಯಾರು ಎಂದು ಕಾಂಗ್ರೆಸ್ ನಾಯಕರು ತಮ್ಮ ಎದೆ ಮುಟ್ಟಿ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಎಂದಿಗೂ ಪೂರ್ಣ ಪ್ರಮಾಣದ ಸ್ವತಂತ್ರ ಅಧಿಕಾರ ಸಿಗಲಿಲ್ಲ. ರಾಮನಗರವನ್ನು ‘ಬೆಂಗಳೂರು ದಕ್ಷಿಣ’ ಎಂದು ಹೆಸರು ಬದಲಾಯಿಸಿ ಭೂಮಿಯ ಬೆಲೆ ಗಗನಕ್ಕೇರುತ್ತದೆ ಎಂದು ಡಿಕೆ ಶಿವಕುಮಾರ್​ ಭ್ರಮೆ ಹುಟ್ಟಿಸಿದರು. ಕುಮಾರಕೃಪಾದಂತಹ ಪಾರಂಪರಿಕ ಕಟ್ಟಡವನ್ನು ಧ್ವಂಸ ಮಾಡಿದ ಇವರು, ವಿಧಾನಸೌಧದ ಮೆಟ್ಟಿಲು ಹಾಗೂ ಮುಖ್ಯಮಂತ್ರಿ ಕುರ್ಚಿಗೆ ಹಣೆ ಹಚ್ಚಿ ಕೇವಲ ಫೋಟೊಗೆ ಪೋಸ್ ಕೊಡುವುದರಲ್ಲೇ ಕಾಲ ಕಳೆದಿದ್ದಾರೆ. ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದರು.

ವಿಧಾನಸೌಧಕ್ಕೆ ಜನರನ್ನ ನುಗ್ಗಿಸಬೇಕೆಂದರೆ ನುಗ್ಗಿಸಬಲ್ಲೆ, ಆದರೆ ಜೆಡಿಎಸ್ ಎಂದಿಗೂ ಕಾನೂನು ಬಾಹಿರಬಾಗಿ ನಡೆದುಕೊಂಡಿಲ್ಲ. ನಿಮ್ಮ ಹಿಂದೆ-ಮುಂದೆ ಇರುವವರೆ ನನಗೆ ಮಾಹಿತಿ ಕೊಡುವವರು ಇದ್ದಾರೆ ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular