ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಗೆ ಕೋರಿ ಸಲ್ಲಿಸಿಇದ್ದ ಅರ್ಜಿ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆಯಿತು.
ಈ ವೇಳೆ ನ್ಯಾ. ಸುಜಾತಾ ಸಾಂಭ್ರಾಣಿ, ಆರೋಪಿ ಪ್ರದೋಷ್ ಗೆ ನೀವು ಸ್ವಯಂಪ್ರೇರಿತವಾಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸೀದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಮಾಫಿ ಸಾಕ್ಷಿ ಅರ್ಜಿ ಓದಿ ಪ್ರತಿಕ್ರಿಯಿಸಿದ ಪ್ರದೋಷ್, ನಾನು ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಿ ಸಹಿ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ನೀವು ಸಂಪೂರ್ಣ ಸತ್ಯ ಹೇಳದಿದ್ದರೆ ನಿಮ್ಮನ್ನು ಆರೋಪಿಯನ್ನಾಗಿ ಮಾಡಲಾಗುವುದು. ಈ ಬಗ್ಗೆ ಮಾಹಿತಿ ಇದೆಯೇ? ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಈ ವೇಳೆ ಪ್ರದೋಷ್ ಹೌದು. ಅರ್ಜಿಯ ಪರಿಣಾಮದ ಬಗ್ಗೆ ವಕೀಲರು ತಿಳಿಸಿದ್ದಾರೆ ಎಂದು ಉತ್ತರಿಸಿದ್ದಾನೆ.
ಈ ವೇಳೆ ಪ್ರತಿವಾದ ಮಂಡಿಸಿದ ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಬಿಡುಗಡೆಯಾಗುವ ಆಸೆಯಿಂದ ಮಾಫಿ ಸಾಕ್ಷಿಯಾಗಿದ್ದಾರೆ. ಕೋರ್ಟ್ ಈ ಬಗ್ಗೆ ಸ್ವತಂತ್ರ ವಿಚಾರಣೆ ನಡೆಸಿ ತೀರ್ಮಾನಿಸಬೇಕು. ಮಾಫಿ ಸಾಕ್ಷಿ ಅರ್ಜಿಯ ಹಿಂದಿನ ದುರುದ್ದೇಶ ಅರಿಯಬೇಕು. ಯಾವುದಾದರೂ ಒತ್ತಡವಿದೆಯೇ ಎಂಬ ಬಗ್ಗೆ ವಿಚರಣೆ ನಡೆಸಬೇಕು. ಯಾರಾದರೂ ಏನಾದರೂ ಭರವಸೆ ನೀಡಿದ್ದಾರಾ? ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ವಾದಿಸಿದ್ದಾರೆ.
ಈ ವೇಳೆ ನ್ಯಾಯಾಧೀಶರು, ಪ್ರದೋಷ್ ಬಳಿ ನಿಮ್ಮ ಮಾಫಿ ಸಾಕ್ಷಿ ಒಪ್ಪದಿದ್ದರೆ ನೀವು ಜೈಲಿನಲ್ಲಿಯೇ ಇರಬೇಕಾಗುತ್ತದೆ ಈ ಬಗ್ಗೆ ನಿಮಗೆ ಮಾಹಿತಿ ದೆರ್ಯಾ? ಎಂದು ಮತ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರದೋಷ್ ಹೌದು ವಕೀಲರು ಹೇಳಿದ್ದಾರೆ ಎಂದು ಉತ್ತರಿಸಿದ್ದಾನೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿ ಕುರಿತ ಆದೇಶವನ್ನು ಆಗಸ್ಟ್ 20ಕ್ಕೆ ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.

