HomeKarnatakaಆಷಾಡ ಮುಗಿದರೂ ಮನೆಗೆ ಬಾರದ ಪತ್ನಿ: ಮನನೊಂದ ಪತಿ ಆತ್ಮಹತ್ಯೆ

ಆಷಾಡ ಮುಗಿದರೂ ಮನೆಗೆ ಬಾರದ ಪತ್ನಿ: ಮನನೊಂದ ಪತಿ ಆತ್ಮಹತ್ಯೆ

ತುಮಕೂರು: ಆಷಾಡಕ್ಕೆಂದು ತವರಿಗೆ ಹೋಗಿದ್ದ ಪತ್ನಿ ಆಷಾಡ ಮುಗಿದರೂ ಮನೆಗೆ ಬಾರದಿರುವುದನ್ನು ಕಂಡು ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ಪತ್ನಿ ಮನೆಗೆ ವಾಪಸ್ ಬಂದಿಲ್ಲ ಎಂದು ಮನನೊಂದು ಪತಿ ನೇಣಿಗೆ ಶರಣಾಗಿದ್ದಾನೆ. ತುಮಕೂರಿನ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ಈ ಘಟನೆ ನಡೆದಿದೆ. ಅವಿನಾಶ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ 6 ತಿಂಗಳ ಹಿಂದಷ್ಟೇ ಹಾಸನದ ಅರಸೀಕೆರೆ ಮೂಲದ ಯುವತಿಯನ್ನು ಅವಿನಾಶ್‌ ಪ್ರೀತಿಸಿ ಮದುವೆಯಾಗಿದ್ದ. ಆಷಾಡಕ್ಕೆ ಪತ್ನಿ ತವರಿಗೆ ಹೋಗಿದ್ದಳು. ಆಷಾಡ ಮುಗಿಯುತ್ತಿದ್ದಂತೆ ಪತ್ನಿಗೆ ಕರೆ ಮಾಡಿದ್ದ ಅವಿನಾಶ್ ಮನೆಗೆ ಬರುವಂತೆ ತಿಳಿಸಿದ್ದ. ಆದರೆ ನಾನು ಬರಲ್ಲ ಎಂದು ಪತ್ನಿ ಕಡ್ಡಿಮುರಿದಂತೆ ಹೇಳಿದ್ದಾಳೆ.

ಪತ್ನಿ ಮಾತಿನಿಂದ ಮನನೊಂದ ಅವಿನಾಶ್ ದುಡುಕಿನ ನಿರ್ಧಾರ ಮಾಡಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌ ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular