ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 11 ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಕೆಸೆಟ್ ಪರೀಕ್ಷೆಯನ್ನು ಒಟ್ಟು 37 ವಿಷಯಗಳಿಗೆ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 5ರೊಳಗೆ ಅರ್ಜಿ ಸಲ್ಲಿಸಬೇಕು. ಸೆ.6ರೊಳಗೆ ಶುಲ್ಕ ಪಾವತಿಸಬೇಕು.
ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು, ಯಾವುದಾದರು ಒಂದು ವಿಷಯದಲ್ಲಿ ಮಾತ್ರ ಕೆಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಒಮ್ಮೆ ವಿಷಯ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.
ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಈ ಕೆಳಗೆ ನೀಡಿದ್ದು ಅದರ ಮೇಲೆ ಕ್ಲಿಕ್ ಮಾಡಿ.
ಅಧಿಸೂಚನೆ ಲಿಂಕ್ ಈ ಕೆಳಗಿದೆ.
KSET_NOTI_KAN_10082026kannada.pdf https://share.google/LJwkLSyXY5w8Gl1Il
ಆನ್ ಲೈನ್ ಅರ್ಜಿ ಲಿಂಕ್ ಈ ಕೆಳಗಿದೆ.
Login – KEA KSET 2026 https://share.google/5yms7zqAngcVyPXWq

