ನವದೆಹಲಿ: ರಾಜ್ಯಕ್ಕೆ ಮತ್ತೆ ಕಾವೇರಿ ನದಿ ನೀರಿ ಸಂಕಷ್ಟ ಎದುರಾಗಿದೆ. ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. CWRC ಆದೇಶಕ್ಕೆ ರಾಜ್ಯದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಕರ್ನಾಟಕ ಮತ್ತೆ ತಮಿಳುನಾಡಿಗೆ ಪ್ರತಿ ದಿನ 12,000 ಕ್ಯೂಸೆಕ್ ನೀರಿನಂತೆ 15 ದಿನಗಳ ಕಾಲ ನೀರು ಬಿಡುವಂತೆ ಸೂಚಿಸಿದೆ. ಈ ಆದೇಶಕ್ಕೆ ರಾಜ್ಯದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. CWRC ಆದೇಶದ ಬೆನ್ನಲ್ಲೇ ರಾಜ್ಯದ ಕಾವೇರಿ ಕೊಳ್ಳ, ಮಂಡ್ಯ ಭಾಗದಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದಲ್ಲಿ ಮಳೆ ಅಭಾವ ಶುರುವಾಗಿದ್ದು, ಕೆ.ಆರ್.ಎಸ್ ನಲ್ಲಿ ಒಳಹರಿವು ಕೂಡ ಕಡಿಮೆಯಾಗಿದೆ. ಕೆ.ಆರ್.ಎಸ್ ಆಗಲಿ, ಹೇಮಾವತಿಯಾಗಲಿ ಜಲಾಶಯಗಳಾಗಲಿ ಇನ್ನೂ ಭರ್ತಿಯೇ ಆಗಿಲ್ಲ. ಹೀಗಿರುವಾಗ ಸಂಕಷ್ಟದ ಸಂದರ್ಭದಲ್ಲಿ ಪ್ರತಿ ದಿನ 12,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ CWRC ಆದೇಶ ನೀಡಿರುವುದು ಕರ್ನಾಟಕಕ್ಕೆ ಮರಣಶಾನದಂತಿದೆ. ಈ ಆದೇಶದ ಬೆನ್ನಲ್ಲೇ ರಾಜ್ಯದ ಕಾವೇರಿ ಕೊಳ್ಳ, ಮಂಡ್ಯ ಭಾಗದಲ್ಲಿ ಮತ್ತೆ ಪ್ರತಿಭಟನೆಗಳು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ಈ ಹಿಂದಿನ CWRC ಹಾಗೂ CWMA ಆದೇಶದ ಪ್ರಕಾರ 15 ದಿನಗಳ ಕಾಲ ಪ್ರತಿ ದಿನ 3,5೦೦ ಕ್ಯೂಸೆಕ್ ನಂತೆ 4 ಟಿಎಂಸಿ ನೀರು ಹರಿಸಲಾಗಿದೆ. ಅಷ್ಟೇ ಅಲ್ಲ ಈಗಾಗಲೇ ತಮಿಳುನಾಡಿಗೆ 4 ಟಿಎಂಸಿ ಗಿಂತ ಹೆಚ್ಚು ನೀರು ಹರಿದು ಹೋಗಿದು ಸುಮಾರು 7 ಟಿಎಂಸಿ ಅಷ್ಟು ನೀರು ಹರಿಸಲಾಗಿದೆ. ಆದಾಗ್ಯೂ CWRC ಈಗ ಮತ್ತೆ ಪ್ರತಿ ದಿನ 12,000 ಕ್ಯೂಸೆಕ್ ನಂತೆ ನೀರು ಹರಿಸುವಂತೆ ಶಿಫಾರಸು ಮಾಡಿದ್ದು, ಇದು ಅವೈಜ್ಞಾನಿಕ ವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

