ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟ 2026ರಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿ ಪದಕ ಗೆದ್ದ ಕ್ರೀಡಾಪಟುಗಳಾದ ಶರ್ಮಿಳಾ ಧನ್ಕರ್, ಲವ್ಲೀನಾ ಬೋರ್ಗೊಹೈನ್ ಮತ್ತು ಝಂಡು ಕುಮಾರ್ ಶೀಘ್ರದಲ್ಲೇ ಕಿರುತೆರೆಯ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರೀಡಾಂಗಣದಲ್ಲಿ ಸದ್ದು ಮಾಡಿದ್ದ ಈ ತಾರೆಯರು ಈಗ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗೆ ಹಾಟ್ ಸೀಟ್ ಹಂಚಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದ್ದ ಈ ಸಾಧಕರು, ಒಟ್ಟು 39 ಪದಕಗಳನ್ನು ಗೆದ್ದು ಇತಿಹಾಸ ಬರೆದ ಭಾರತೀಯ ತಂಡದ ಪ್ರಮುಖ ಭಾಗವಾಗಿದ್ದರು. ಗ್ಲಾಸ್ಗೋ ಗೇಮ್ಸ್ನಲ್ಲಿ ಶರ್ಮಿಳಾ ಧನ್ಕರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಬಾಕ್ಸಿಂಗ್ ತಾರೆ ಲವ್ಲೀನಾ ಬೋರ್ಗೊಹೈನ್ ಬೆಳ್ಳಿ ಪದಕ ಹಾಗೂ ಪ್ಯಾರಾ ಪವರ್ಲಿಫ್ಟರ್ ಝಂಡು ಕುಮಾರ್ ಕಾಂಸ್ಯ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಐಎಎನ್ಎಸ್ ವರದಿಯ ಪ್ರಕಾರ, ಈ ಮೂವರು ಅಥ್ಲೀಟ್ಗಳು ‘ಕೆಬಿಸಿ’ಯ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ವಾಹಿನಿಯು ಅಧಿಕೃತವಾಗಿ ಇನ್ನು ಘೋಷಣೆ ಮಾಡಿಲ್ಲವಾದರೂ, ಆಗಸ್ಟ್ 15ರ ನಂತರ ಪ್ರಸಾರವಾಗುವ ಸಾಧ್ಯತೆಯಿದೆ. ಆಗಸ್ಟ್ 10ರಿಂದ ಸೋನಿ ಎಂಟರ್ಟೇನ್ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್ನಲ್ಲಿ ಈ ಬಾರಿಯ ಹೊಸ ಸೀಸನ್ ಪ್ರಸಾರ ಆರಂಭವಾಗಿದೆ.
ಈ ವಿಶೇಷ ಸಂಚಿಕೆಯಲ್ಲಿ ಕ್ರೀಡಾಪಟುಗಳು ತಮ್ಮ ಕಷ್ಟದ ಹಾದಿ ಮತ್ತು ಸಾಧನೆಯ ಪಯಣವನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಶರ್ಮಿಳಾ ಧನ್ಕರ್ ಅವರು ಗೃಹ ಹಿಂಸೆಯಂತಹ ಸಾಲು ಸಾಲು ವೈಯಕ್ತಿಕ ಸವಾಲುಗಳನ್ನು ಮೆಟ್ಟಿ ನಿಂತು ಮಹಿಳೆಯರ ಎಫ್57 ಶಾಟ್ಪುಟ್ ವಿಭಾಗದಲ್ಲಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇನ್ನು ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೋರ್ಗೊಹೈನ್ ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತದ ಅಗ್ರಪಂಥೀಯ ಆಟಗಾರ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹಾಗೆಯೇ, ಪುರುಷರ ಹೆವಿವೇಟ್ ವಿಭಾಗದಲ್ಲಿ ಕಾಂಸ್ಯ ಪದಕ ಗೆದ್ದ ಝಂಡು ಕುಮಾರ್, ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದರು.
Commonwealth Games medallists Sharmila Dhankar, Lovlina Borgohain and Jhandu are set to feature on the popular television quiz show Kaun Banega Crorepati (KBC), sources told IANS. The three athletes will get an opportunity to take the coveted hot seat opposite Bollywood legend… pic.twitter.com/z8Ec2Yuoch
— IANS (@ians_india) August 11, 2026

