HomeKarnatakaರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಅಹಿಂಸಾ: ಜನವರಿಯಲ್ಲಿ ಹೊಸ ಪ್ರಾದೇಶಿಕ ಪಕ್ಷ ಲೋಕಾರ್ಪಣೆ ಎಂದು...

ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಅಹಿಂಸಾ: ಜನವರಿಯಲ್ಲಿ ಹೊಸ ಪ್ರಾದೇಶಿಕ ಪಕ್ಷ ಲೋಕಾರ್ಪಣೆ ಎಂದು ಘೋಷಣೆ

ಮಂಗಳೂರು: ನಟ ಚೇತನ್ ಅಹಿಂಸಾ ರಾಜಕೀಯ ರಂಗ ಪ್ರವೇಶಕ್ಕೆ ಮುಂದಾಗಿದ್ದಾರೆ. ಜನವರಿಯಲ್ಲಿ ಹೊಸ ರಾಜಕೀಯ ಪಕ್ಷ ಲೋಕಾರ್ಪಣೆ ಮಾಡುವುದಾಗಿ ಘೋಷಿಸಿದ್ದಾರೆ.

ನಟ ಚೇತನ್ ಅಹಿಂಸಾ ಮಂಗಳೂರಿನ ಲೇಡಿಹಿಲ್​ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಿದ ಮತ್ತು ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಸಮಾಜದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿವೆ. ಹೀಗಾಗಿ ಬರುವ ಜನವರಿಯಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಆಧಿಕೃತವಾಗಿ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.

ಕರ್ನಾಟಕಕ್ಕೆ ಇಂದು ಹೊಸ ರಾಜಕೀಯ ಪರ್ಯಾಯ, ಪರಿಹಾರ ಹಾಗೂ ಪರಿವರ್ತನೆ ಅಗತ್ಯವಿದೆ. ಸಂವಿಧಾನಾತ್ಮಕ ಮೂಲ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಹೊಂದಿರುವ ನೂತನ ರಾಜಕೀಯ ಪಕ್ಷದ ನೋಂದಣಿ ಪ್ರಕ್ರಿಯೆ ಪ್ರಸ್ತುತ ಅಂತಿಮ ಹಂತದಲ್ಲಿದೆ. ಸಂವಿಧಾನಿಕ ಪದಗಳನ್ನು ಒಳಗೊಂಡ ಹೆಸರಿನೊಂದಿಗೆ ಬರುವ ಜನವರಿ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷವನ್ನು ಅಧಿಕೃತವಾಗಿ ಲಾಂಚ್ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವು ಯಾವುದೇ ಒಬ್ಬ ನಟನ ‘ಸ್ಟಾರ್ ಪವರ್’ ಅಥವಾ ‘ಅಭಿಮಾನಿ ಬಳಗ’ದ ಮೇಲೆ ಪಕ್ಷ ಕಟ್ಟುತ್ತಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್, ಕಾನ್ಶೀರಾಮ್ ಅವರ ಸಿದ್ಧಾಂತಗಳ ಅಡಿಯಲ್ಲಿ ವರ್ಷಗಳಿಂದ ಜನಪರ ಹೋರಾಟ ನಡೆಸಿಕೊಂಡು ಬಂದಿರುವ ರೈತರು, ಚಳವಳಿಗಾರರು, ಬುದ್ಧಿಜೀವಿಗಳು ಹಾಗೂ ಯುವಕರನ್ನು ಸಂಘಟಿಸಿ ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾಮಾಣಿಕ ರಾಜಕೀಯ ಪ್ರಾದೇಶಿಕ ಚಳವಳಿಯನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂದರು.

ಇದೇ ವೇಳೆ ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಬರಿ ಪೇಪರ್ ಲೀಕೇಜ್ ಅಷ್ಟೇ ಅಲ್ಲ, ನೀಟ್’ ಎನ್ನುವ ಪರಿಕಲ್ಪನೆಯೇ ದೋಷಪೂರಿತವಾಗಿದೆ. ಇದು ಬಡ, ಗ್ರಾಮೀಣ ಹಾಗೂ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವೆಸಗುತ್ತಿದ್ದು, ಕೇವಲ ದುಬಾರಿ ಕೋಚಿಂಗ್ ಸೆಂಟರ್‌ಗೆ ಹೋಗುವ ಧನಿಕರಿಗಷ್ಟೇ ಲಾಭ ತಂದುಕೊಡುತ್ತಿದೆ. ಹೀಗಾಗಿ ನೀಟ್’ ಪರೀಕ್ಷೆಯನ್ನು ದೇಶಾದ್ಯಂತ ಸಂಪೂರ್ಣವಾಗಿ ರದ್ದು ಮಾಡಬೇಕು. ರಾಜ್ಯಗಳ ಮಟ್ಟದಲ್ಲೇ ಸಿಇಟಿ ಮಾದರಿಯ ಪರೀಕ್ಷೆಗಳ ಮೂಲಕ ಮೆಡಿಕಲ್ ಸೀಟುಗಳನ್ನು ಹಂಚಿಕೆ ಮಾಡಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular