ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ವೇದಿಕೆ ಮೇಲೆ ಡಿಕೆ ಶಿವಕುಮಾರ್ ಮೈಕ್ ಹಿಡಿದು ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದ ದರ್ಶನ್ ಅಭಿಮಾನಿಗಳು ಜೈ ಡಿಬಾಸ್ ಎಂದು ಘೋಷಣೆ ಕೂಗಲು ಆರಂಭಿಸಿದರು.
ನಿಮ್ಮ ಭಾವನೆ ಅರ್ಥ ಆಗಿದೆ. ಎಲ್ಲಾ ಹೇಳಲು ಆಗಲ್ಲ, ಪಬ್ಲಿಕ್ ಆಗಿ ಏನೂ ಹೇಳಲಾಗುವುದಿಲ್ಲ, ಸುಮ್ಮನಿರಿ ಎಂದು ಆರಂಭದಲ್ಲಿ ಅಭಿಮಾನಿಗಳಿಗೆ ತಿಳಿಹೇಳಿದ ಡಿಕೆ ಶಿವಕುಮಾರ್ ಡಿ ಬಾಸ್ ಘೋಷಣೆ ನಿಲ್ಲದ ಕಾರಣ ಅಸಮಾಧಾನಗೊಂಡರು. ಹೀಗೆ ನಿರಂತರವಾಗಿ ಡಿ ಬಾಸ್ ಘೋಷಣೆ ಕೂಗಿದ ಕಾರಣ ಬೇಸತ್ತ ಡಿಕೆ ಶಿವಕುಮಾರ್ ನಿಮ್ಮ ಡಿ ಬಾಸನ್ನೇ ಕಟ್ಟಿಕೊಂಡು ಹೋಗಿ ಎಂದು ಮೈಕ್ ಬಿಸಾಕಿ ಭಾಷಣೆ ಮಾಡದೇ ಸುಮ್ಮನಾದರು.
ಇನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಈ ಸಮಯದಲ್ಲಿ ಮಧ್ಯ ಪ್ರವೇಶಿಸಿ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ‘ನಮಗೆಲ್ಲ ಅಗೌರವ ಇದೆಲ್ಲ. ಇಡೀ ರಾಮನಗರಕ್ಕೆ ಅಗೌರವ ಇದು. ಮುಖ್ಯಮಂತ್ರಿಗಳು ಮಾತನಾಡ್ತಾರೆ. ಮುಖ್ಯಮಂತ್ರಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇದು ನಮ್ಮೂರು ಕಾರ್ಯಕ್ರಮ, ನಿಮ್ಮೆಲ್ಲರ ಕಾರ್ಯಕ್ರಮ, ಪ್ರತಿಯೊಬ್ಬರೂ ಭಕ್ತಿಯಿಂದ ಆಚರಣೆ ಮಾಡುವಂತಹ ಕಾರ್ಯಕ್ರಮ, ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ನಿಶಬ್ದವಾಗಿರಿ’ ಎಂದು ಹೇಳಿಕೆ ನೀಡಿದರು.
https://www.instagram.com/reel/DboLOU4oQQ2

