HomeLatest NewsSHOCKING : ಇರಾನ್ ಯುದ್ಧದ ನಡುವೆ ದುಬೈನಲ್ಲಿ 20 ನಿಮಿಷಗಳಲ್ಲಿ 7 ಸ್ಫೋಟ; ಬೆಚ್ಚಿ ಬೀಳಿಸುವ...

SHOCKING : ಇರಾನ್ ಯುದ್ಧದ ನಡುವೆ ದುಬೈನಲ್ಲಿ 20 ನಿಮಿಷಗಳಲ್ಲಿ 7 ಸ್ಫೋಟ; ಬೆಚ್ಚಿ ಬೀಳಿಸುವ ವೀಡಿಯೋ ವೈರಲ್ |WATCH VIDEO

ದುಬೈ: ಇರಾನ್ ಯುದ್ಧದ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ದುಬೈ ನಗರದ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಮುಂಜಾನೆ ಕೇವಲ 20 ನಿಮಿಷಗಳ ಅವಧಿಯಲ್ಲಿ ಏಳು ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿದೆ. ಸ್ಫೋಟಗಳ ನಂತರ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವರದಿಗಳ ಪ್ರಕಾರ, ಸ್ಫೋಟಗಳು ಜೆಬೆಲ್ ಅಲಿ ಬಂದರು ಮತ್ತು ಕೈಗಾರಿಕಾ ವಲಯದ ಸಮೀಪ ಸಂಭವಿಸಿವೆ. ಇದು ಯುಎಇಯ ಪ್ರಮುಖ ಸರಕು ಸಾಗಣೆ ಹಾಗೂ ಇಂಧನ ಸಂಗ್ರಹ ಕೇಂದ್ರವಾಗಿದ್ದು, ಈ ಪ್ರದೇಶದಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿದೆ. ಘಟನೆಯಲ್ಲಿ ಎಷ್ಟು ಹಾನಿಯಾಗಿದೆ ಅಥವಾ ಯಾರಾದರೂ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ವರದಿ ಪ್ರಕಾರ, 20 ನಿಮಿಷಗಳಲ್ಲಿ ಕನಿಷ್ಠ ಏಳು ಸ್ಫೋಟಗಳು ನಡೆದಿವೆ. ಆದರೆ, ಸ್ಫೋಟಗಳಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟದ ದೃಶ್ಯಗಳು ಹರಿದಾಡುತ್ತಿದ್ದಂತೆ, ಘಟನೆ ಚಿತ್ರೀಕರಿಸುತ್ತಿದ್ದ ಇಬ್ಬರನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಹರ್ ಸುದ್ದಿ ಸಂಸ್ಥೆ, ಯೆಮನ್‌ನಿಂದ ಕ್ಷಿಪಣಿ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ ಯುಎಇ ಮಾಧ್ಯಮಗಳು ಸ್ಫೋಟಗಳು ಸಂಭವಿಸಿರುವುದನ್ನು ದೃಢಪಡಿಸಿದರೂ, ಅವುಗಳಿಗೆ ಕಾರಣವೇನು ಎಂಬುದರ ಕುರಿತು ಯಾವುದೇ ಅಧಿಕೃತ ವಿವರಣೆ ನೀಡಿಲ್ಲ.ಇದೇ ವೇಳೆ, ನಾಸಾ ಥರ್ಮಲ್ ಇಮೇಜಿಂಗ್ ಮಾಹಿತಿಯಲ್ಲಿ ಜೆಬೆಲ್ ಅಲಿ ಬಂದರಿನ ಸಮೀಪದ ಗೋದಾಮೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವುದು ದಾಖಲಾಗಿದೆ. ಇದು ಇಂಧನ ಸಂಗ್ರಹ ಮತ್ತು ವರ್ಗಾವಣೆಗೆ ಬಳಸುವ ಪ್ರದೇಶವಾಗಿರುವುದರಿಂದ ಸ್ಫೋಟದ ಬಳಿಕ ಅಗ್ನಿ ಅನಾಹುತ ಸಂಭವಿಸಿರುವ ಸಾಧ್ಯತೆಯನ್ನು ಬಲಪಡಿಸಿದೆ.

ಅದೇ ಸಮಯದಲ್ಲಿ ಯೆಮನ್ ರಾಜಧಾನಿ ಸನಾದಲ್ಲಿಯೂ ಸ್ಫೋಟದ ಸದ್ದು ಕೇಳಿಬಂದಿರುವ ವರದಿಗಳು ಬಂದಿವೆ. ಕೆಲವು ವರದಿಗಳು ಇದನ್ನು ವೈಮಾನಿಕ ದಾಳಿಗೆ ಸಂಬಂಧಿಸಿದವು ಎಂದು ಹೇಳಿದರೆ, ಇನ್ನೂ ಕೆಲವು ಯೆಮನ್‌ನಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ಉಲ್ಲೇಖಿಸಿವೆ.

ಕೆಲವು ಸ್ಥಳೀಯ ಮಾಧ್ಯಮಗಳು ಹೌತಿ ಬಂಡುಕೋರರು ಜೆಬೆಲ್ ಅಲಿ ಕೈಗಾರಿಕಾ ಪ್ರದೇಶವನ್ನು ಗುರಿಯಾಗಿಸಿಕೊಂಡಿರಬಹುದು ಎಂದು ವರದಿ ಮಾಡಿವೆ. ಪ್ರತ್ಯಕ್ಷದರ್ಶಿಗಳು ಭಾರೀ ಬೆಂಕಿ, ದಟ್ಟ ಹೊಗೆ ಹಾಗೂ ನಿರಂತರ ಸ್ಫೋಟಗಳನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ದಾಳಿಯ ಹೊಣೆಯನ್ನು ಯುಎಇ ಸರ್ಕಾರವಾಗಲಿ ಅಥವಾ ಹೌತಿ ಸಂಘಟನೆಯಾಗಲಿ ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಪ್ರದೇಶದಲ್ಲಿ ಇರಾನ್ ಸಂಬಂಧಿತ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸ್ಫೋಟಗಳ ನಿಖರ ಕಾರಣ ಹಾಗೂ ಇದು ದಾಳಿಯೇ ಎಂಬುದರ ಕುರಿತು ಯುಎಇ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular