HomeLatest Newsಅಗ್ಗದ ಚಿನ್ನ ಖರೀದಿಗೆ ಗೋಲ್ಡ್ ಮಾರುಕಟ್ಟೆಗಳು: ಸಂಪೂರ್ಣ ಮಾಹಿತಿ

ಅಗ್ಗದ ಚಿನ್ನ ಖರೀದಿಗೆ ಗೋಲ್ಡ್ ಮಾರುಕಟ್ಟೆಗಳು: ಸಂಪೂರ್ಣ ಮಾಹಿತಿ

ಬೆಲೆ ಎಷ್ಟೇ ಏರಿಕೆಯಾದರೂ ನಮ್ಮ ದೇಶದಲ್ಲಿ ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯವಾಗಿದೆ. ಪ್ರಸ್ತುತ ಬಹುತೇಕರು ಚಿನ್ನವನ್ನು ಅತ್ಯುತ್ತಮ ಹೂಡಿಕೆಯಾಗಿಯೂ ನೋಡುತ್ತಿರುವ ಕಾರಣ, ಬೆಲೆ ಏರಿಕೆಯ ನಡುವೆಯೂ ಬಂಗಾರಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಆದರೆ, ಭಾರತದ ಕೆಲವು ಪ್ರಮುಖ ನಗರಗಳಲ್ಲಿ ಬೇರೆಡೆಗಿಂತ ಕಡಿಮೆ ಬೆಲೆಗೆ ಚಿನ್ನ ಲಭ್ಯವಿದೆ. ಅಂತಹ ಪ್ರಮುಖ ಮಾರುಕಟ್ಟೆಗಳ ವಿವರ ಇಲ್ಲಿದೆ:

ಮುಂಬೈನ ಜವೇರಿ ಬಜಾರ್

ಮುಂಬೈನ ಜವೇರಿ ಬಜಾರ್ ಭಾರತದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರವಾಗಿದೆ. ದೇಶದ ಬಹುತೇಕ ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಇಲ್ಲಿಂದಲೇ ನಿಯಂತ್ರಣಗೊಳ್ಳುತ್ತದೆ. ಮದುವೆ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಯ ಡಿಸೈನ್‌ಗಳವರೆಗೆ ಎಲ್ಲವೂ ಇಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದಲ್ಲಿ ಪ್ರತಿದಿನದ ಚಿನ್ನದ ಹೋಲ್‌ಸೇಲ್ ಬೆಲೆಯನ್ನು ನಿರ್ಧರಿಸುವಲ್ಲಿ ಜವೇರಿ ಬಜಾರ್‌ನಲ್ಲಿರುವ IBJA (India Bullion and Jewellers Association) ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಬಹುತೇಕ ಜ್ಯುವೆಲ್ಲರಿ ಮಳಿಗೆಗಳು IBJA ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆಯೇ ತಮ್ಮ ದೈನಂದಿನ ಮಾರಾಟ ದರವನ್ನು ನಿರ್ಧರಿಸುತ್ತವೆ.

ದೆಹಲಿ, ಜೈಪುರ ಮತ್ತು ಕೋಲ್ಕತ್ತಾ

ದೆಹಲಿ: ದೆಹಲಿಯ ಚಾಂದಿನಿ ಚೌಕ್‌ನಲ್ಲಿರುವ ಕೂಚಾ ಮಹಾಜನಿ ಮಾರುಕಟ್ಟೆಯು ಉತ್ತರ ಭಾರತದ ಅತಿದೊಡ್ಡ ಚಿನ್ನದ ಕೇಂದ್ರವಾಗಿದೆ. ಇಲ್ಲಿ ಅದ್ಧೂರಿ ಬ್ರೈಡಲ್ ಆಭರಣಗಳು ಮತ್ತು ಕುಂದನ್ ಕೆಲಸದ ಒಡವೆಗಳು ಹೋಲ್‌ಸೇಲ್ ದರದಲ್ಲಿ ಸಿಗುತ್ತವೆ.

ಕೋಲ್ಕತ್ತಾ: ಕೋಲ್ಕತ್ತಾದ ಬೋ ಬಜಾರ್ ಮತ್ತು ಬುರ್ರಾ ಬಜಾರ್ ಪ್ರಸಿದ್ಧ ಬೆಂಗಾಲಿ ಫಿಲಿಗ್ರಿ ಕೆಲಸದ ಸೂಕ್ಷ್ಮ ಆಭರಣಗಳಿಗೆ ಹೆಸರುವಾಸಿಯಾಗಿದೆ.

ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೋಹರಿ ಬಜಾರ್ ಸಾಂಪ್ರದಾಯಿಕ ಕುಂದನ್ ಮತ್ತು ಮೀನಾಕಾರಿ ಆಭರಣಗಳ ಖರೀದಿಗೆ ಸೂಕ್ತ ಸ್ಥಳ.

ಚೆನ್ನೈ, ಹೈದರಾಬಾದ್ ಮತ್ತು ಕೊಯಮತ್ತೂರು

ದಕ್ಷಿಣ ಭಾರತದಲ್ಲಿ ಚಿನ್ನದ ಆಭರಣಗಳಿಗೆ ಯಾವಾಗಲೂ ಅತ್ಯಧಿಕ ಬೇಡಿಕೆ ಇರುತ್ತದೆ:

ಚೆನ್ನೈ: ಚೆನ್ನೈನ ಜಾರ್ಜ್ ಟೌನ್, ಸಾಂಪ್ರದಾಯಿಕ ಟೆಂಪಲ್ ಮತ್ತು ಆ್ಯಂಟಿಕ್ ಆಭರಣಗಳಿಗೆ ಪ್ರಸಿದ್ಧವಾಗಿದೆ.

ಹೈದರಾಬಾದ್: ಹೈದರಾಬಾದ್‌ನ ಪಾಟ್ ಮಾರ್ಕೆಟ್’ ಮತ್ತು ಬೇಗಂ ಬಜಾರ್ ಪ್ರದೇಶಗಳಲ್ಲಿ ಚಿನ್ನದ ಆಭರಣಗಳು ಕಡಿಮೆ ದರದಲ್ಲಿ ಲಭ್ಯ.

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ನಗರವು ಮೆಷಿನ್ ಚೈನ್‌ಗಳು ಮತ್ತು ಹಗುರವಾದ ಆಭರಣಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿದೆ.

ತ್ರಿಶೂರ್ ಮತ್ತು ಅಹಮದಾಬಾದ್

ತ್ರಿಶೂರ್ (ಕೇರಳ): ದಕ್ಷಿಣ ಭಾರತದ ಆಭರಣ ಮಾರುಕಟ್ಟೆಗೆ ಬೃಹತ್ ಪ್ರಮಾಣದಲ್ಲಿ ಚಿನ್ನದ ಆಭರಣಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಿದೆ.

ಅಹಮದಾಬಾದ್ (ಗುಜರಾತ್): ಅಹಮದಾಬಾದ್‌ನ ‘ಮಾನೆಕ್ ಚೌಕ್’ ಭಾರತದ ಮತ್ತೊಂದು ದೊಡ್ಡ ಚಿನ್ನದ ಹೋಲ್‌ಸೇಲ್ ಕೇಂದ್ರ. ವಿಶೇಷವಾಗಿ ಚಿನ್ನದ ಬಿಸ್ಕತ್‌ಗಳು (Gold Bars/Coins) ಮತ್ತು ಹಾಲ್‌ಮಾರ್ಕ್ ಮಾಡಿದ ಶುದ್ಧ ಚಿನ್ನದ ಗಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಇದು ಅತ್ಯಂತ ಸೂಕ್ತ ಸ್ಥಳ.

ಇಲ್ಲಿ ಆಭರಣಗಳ ಬೆಲೆ ಕಡಿಮೆ ಇರುವುದೇಕೆ?

ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಚಿನ್ನದ ಮೂಲ ಬೆಲೆ ದೇಶಾದ್ಯಂತ ಹೆಚ್ಚು-ಕಡಿಮೆ ಒಂದೇ ರೀತಿ ಇರುತ್ತದೆ. ಆದರೆ, ಈ ಮಾರುಕಟ್ಟೆಗಳಲ್ಲಿ ಆಭರಣಗಳ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಸಾಮಾನ್ಯ ರೀಟೇಲ್ ಶೋರೂಮ್‌ಗಳಿಗಿಂತ ಶೇ. 30 ರಿಂದ 50 ರಷ್ಟು ಕಡಿಮೆಯಿರುತ್ತದೆ. ಹೀಗಾಗಿ ಇಲ್ಲಿ ಆಭರಣಗಳು ಅಗ್ಗವಾಗಿ ಸಿಗುತ್ತವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular