HomeLatest Newsಯಶ್ ನಟನೆ ಬಿಟ್ರೆ ಇನ್ನೇನೂ ಇಲ್ಲ, ಧಾರಾವಾಹಿಗೇಕೆ 2000 ಕೋಟಿ ಬಜೆಟ್?; ರಾಮಾಯಣ ಒಪ್ಪದ ಸಿನಿ...

ಯಶ್ ನಟನೆ ಬಿಟ್ರೆ ಇನ್ನೇನೂ ಇಲ್ಲ, ಧಾರಾವಾಹಿಗೇಕೆ 2000 ಕೋಟಿ ಬಜೆಟ್?; ರಾಮಾಯಣ ಒಪ್ಪದ ಸಿನಿ ಪ್ರಿಯರು!

ನಿತಿನ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ರಾಮಾಯಣ ಮೊದಲ ಭಾಗದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದರೆ, ರಾವಣನಾಗಿ ಯಶ್ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರದ ಟ್ರೈಲರ್ ಹಲವು ಬಾರಿ ಮುಂದೂಡಲ್ಪಟ್ಟ ಬಳಿಕ ಕೊನೆಗೂ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಟ್ರೈಲರ್‌ನಲ್ಲಿನ ಕೆಲ ದೃಶ್ಯಗಳ ವಿಎಫ್‌ಎಕ್ಸ್ ಕೈಕೊಟ್ಟಿರುವುದು ಟ್ರೈಲರ್‌ ಕುರಿತ ಟ್ರೋಲ್‌ಗಳು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಟ್ರೈಲರ್‌ನಲ್ಲಿ ಬರುವ ಯಜ್ಞದ ಬೆಂಕಿಯ ದೃಶ್ಯದಲ್ಲೂ ಸಹ ವಿಎಫ್ಎಕ್ಸ್ ಬಳಸಲಾಗಿದ್ದು, ಅದು ಆನಿಮೇಷನ್ ಚಿತ್ರಗಳ ದೃಶ್ಯದಂತಿದೆ, ಇನ್ನು ಸಾರೋಟನ್ನು ಎಳೆದು ಬರುವ ಪ್ರಾಣಿಯ ದೃಶ್ಯವೂ ಸಹ ಕಾರ್ಟೂನ್ ಚಿತ್ರಗಳನ್ನು ನೆನಪಿಸಿದೆ.

ಹೀಗೆ ಟ್ರೈಲರ್ ಉದ್ದಕ್ಕೂ ಅನೇಕ ದೃಶ್ಯಗಳು ಕಳಪೆ ಎನಿಸುವ ವಿಎಫ್ಎಕ್ಸ್‌ನಿಂದ ಕೂಡಿದ್ದು, ಸಿನಿ ರಸಿಕರು ಎಐ ಯುಗದಲ್ಲೂ ಇಂತಹ ಕೆಟ್ಟ ವಿಎಫ್ಎಕ್ಸ್ ಮಾಡಿದರೆ ಹೇಗೆ ಎಂದು ಕಿಡಿಕಾರಿದ್ದಾರೆ.

ಅನೇಕರು ಯಶ್ ನಟನೆ ಬಿಟ್ಟರೆ ಟ್ರೈಲರ್‌ನ ಇನ್ಯಾವುದೇ ಅಂಶ ಸಹ ವಾವ್ ಎನಿಸುವ ಫೀಲ್ ಕೊಡಲಿಲ್ಲ, ಇಷ್ಟು ಕಳಪೆ ವಿಎಫ್ಎಕ್ಸ್ ಇರುವ ಚಿತ್ರಕ್ಕೇಕೆ 2000 ಕೋಟಿ ಬಜೆಟ್, ಹಿಂದಿಯಿಂದ ದಕ್ಷಿಣದ ಭಾಷೆಗಳಿಗೆ ಡಬ್ ಆದ ಧಾರಾವಾಹಿಯನ್ನು ನೋಡಿದ ಅನುಭವವಾಗುತ್ತಿದೆ ಎಂದು ಕಾಮೆಂಟ್ ಮಾಡಿ ಟೀಕೆ ಮಾಡುತ್ತಿದ್ದಾರೆ.

https://x.com/Movies4u_Officl/status/2082675533503189447?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular