HomeLatest Newsತ್ರೇತಾಯುಗದ ಕಥೆಗೆ ಮಾಡರ್ನ್ ಲುಕ್: ಭಾರಿ ನಿರೀಕ್ಷೆಯ ನಡುವೆಯೇ ಕಾಸ್ಟ್ಯೂಮ್ ಡಿಸೈನ್ ನೋಡಿ ನೆಟ್ಟಿಗರ ಟ್ರೋಲ್ಸ್!

ತ್ರೇತಾಯುಗದ ಕಥೆಗೆ ಮಾಡರ್ನ್ ಲುಕ್: ಭಾರಿ ನಿರೀಕ್ಷೆಯ ನಡುವೆಯೇ ಕಾಸ್ಟ್ಯೂಮ್ ಡಿಸೈನ್ ನೋಡಿ ನೆಟ್ಟಿಗರ ಟ್ರೋಲ್ಸ್!

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಧಾರ್ಮಿಕವಾಗಿ ಪವಿತ್ರವೆಂದು ಪರಿಗಣಿಸಲಾಗುವ ಬ್ರಾಹ್ಮಿ ಮುಹೂರ್ತದಲ್ಲೇ ಚಿತ್ರತಂಡ ಟ್ರೇಲರ್ ಹಂಚಿಕೊಂಡಿದ್ದು, ಅತ್ಯಂತ ದೈವಿಕ ಹಾಗೂ ದೃಶ್ಯ ವೈಭವದಿಂದ ಕೂಡಿದೆ ಎಂದು ಅನೇಕ ಚಿತ್ರಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಈ ಮೆಚ್ಚುಗೆಯ ಬೆನ್ನಲ್ಲೇ ಸಿನಿಮಾದ ಕಾಸ್ಟ್ಯೂಮ್ ಡಿಸೈನ್ (ಉಡುಪು ವಿನ್ಯಾಸ) ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ. ತ್ರೇತಾಯುಗದ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪಾತ್ರಧಾರಿಗಳಿಗೆ ಮಾಡರ್ನ್ ಶೈಲಿಯ ಉಡುಪುಗಳನ್ನು ತೊಡಿಸಲಾಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷವಾಗಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಾರಾ ದತ್ತಾ ಅವರ ಲುಕ್ ಮತ್ತು ಸೀತಾ ದೇವಿಯ ಪಾತ್ರ ಮಾಡಿರುವ ಸಾಯಿ ಪಲ್ಲವಿ ಅವರ ಸೀರೆ ಹಾಗೂ ಬ್ಲೌಸ್ ವಿನ್ಯಾಸ ಆಧುನಿಕ ಶೈಲಿಯಲ್ಲಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಲಾರಾ ದತ್ತಾ ಅವರ ಸ್ಟ್ರೇಟ್ ಹೇರ್ ಹಾಗೂ ಉಡುಪುಗಳು ಪ್ರಸ್ತುತ ಕಾಲಘಟ್ಟಕ್ಕೆ ಹೊಂದುವಂತಿದ್ದು, ಪ್ರಾಚೀನ ವೈಭವವನ್ನು ಪ್ರತಿಬಿಂಬಿಸುತ್ತಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಏಕ್ತಾ ಕಪೂರ್ ಅವರ ಧಾರಾವಾಹಿಗಳ ಕಾಸ್ಟ್ಯೂಮ್ ಶೈಲಿಗೆ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಮೀಮ್ಸ್‌ಗಳು ವೈರಲ್ ಆಗುತ್ತಿದ್ದು, ಟ್ರೇಲರ್ ಈಗ ಭಾರಿ ಸದ್ದು ಮಾಡುತ್ತಿದೆ.

True 2026 costumes in #Ramayana time
What’s the logic? pic.twitter.com/YM20PSPbtY

— Filmy Cover Drive (@FilmyCoverDrive) July 30, 2026

Not a single good moment in the trailer apart from Jatayu scene

1 Costumes are terrible

2 Ranbir as Rama is the worst choice, the worst

3 No Janeu and Sita ma got jewelries from Ma Anasuya but she is hardly wearing anything #ramayana pic.twitter.com/GgbVTM7ZK4

— Adhya (@The_Blue_Thrott) July 30, 2026

Why Do the Costumes inthe
Ramayana Appear So Strikingly
and Anachronistically Modern?#Ramayana pic.twitter.com/EpLr7uKA3w

— ⋆ (@lostinchaossss) July 30, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular