HomeEntertainmentಸಿನಿಪ್ರಿಯರ ಮನಗೆದ್ದ ಸಸ್ಪೆನ್ಸ್ ಥ್ರಿಲ್ಲರ್: ಬಾಲಿವುಡ್ ಲೆಕ್ಕಾಚಾರ ಉಲ್ಟಾ ಪಲ್ಟಾ ಮಾಡಿ ಇತಿಹಾಸ ಬರೆದ ದೃಶ್ಯಂ...

ಸಿನಿಪ್ರಿಯರ ಮನಗೆದ್ದ ಸಸ್ಪೆನ್ಸ್ ಥ್ರಿಲ್ಲರ್: ಬಾಲಿವುಡ್ ಲೆಕ್ಕಾಚಾರ ಉಲ್ಟಾ ಪಲ್ಟಾ ಮಾಡಿ ಇತಿಹಾಸ ಬರೆದ ದೃಶ್ಯಂ ದಿ ಕನ್ಕ್ಲೂಷನ್!

ಮುಂಬೈ: ಬಾಲಿವುಡ್ ಸಿಂಗಮ್ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ: ದಿ ಕನ್ಕ್ಲೂಷನ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಟ ಆರಂಭಿಸಿದೆ. ಪ್ರದರ್ಶನ ಕಾಣಲು ಪ್ರಾರಂಭಿಸುವ ಮೊದಲೇ ಮುಂಗಡ ಬುಕಿಂಗ್ ಮೂಲಕ ಭರ್ಜರಿ ಗಳಿಕೆ ಮಾಡಿದ್ದ ಈ ಚಿತ್ರ, ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ಪಡೆದುಕೊಂಡಿದೆ.

ಚಿತ್ರಕ್ಕೆ ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆಗಳು ವ್ಯಕ್ತವಾಗಿದ್ದು, ವೀಕ್ಷಕರ ಬಾಯಿಂದ ಬಂದ ಸಾಟಿಯಿಲ್ಲದ ಮೆಚ್ಚುಗೆಯ ಮಾತುಗಳು ಚಿತ್ರಮಂದಿರಗಳತ್ತ ಜನಸ್ತೋಮ ಹರಿದುಬರಲು ಕಾರಣವಾಗಿವೆ. ಇದರ ಪರಿಣಾಮವಾಗಿ ನೇರ ಟಿಕೆಟ್ ಖರೀದಿಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಆರಂಭಿಕ ವರದಿಗಳ ಪ್ರಕಾರ, ‘ದೃಶ್ಯಂ: ದಿ ಕನ್ಕ್ಲೂಷನ್’ ಭಾರತದಾದ್ಯಂತ ಮೊದಲ ದಿನವೇ ಬರೋಬ್ಬರಿ 68 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ.

ಚಿತ್ರರಂಗದ ವಿಶ್ಲೇಷಕರು ಆರಂಭದಲ್ಲಿ ಈ ಚಿತ್ರ ಮೊದಲ ದಿನ 50 ಕೋಟಿ ರೂಪಾಯಿಗಳ ಆಜುಪಾಸಿನಲ್ಲಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಿದ್ದರು. ಆದರೆ ಪ್ರೇಕ್ಷಕರ ಪ್ರಚಂಡ ಪ್ರತಿಕ್ರಿಯೆಯಿಂದಾಗಿ ಅಜಯ್ ದೇವಗನ್ ಅಭಿನಯದ ಈ ಸಿನಿಮಾ ಎಲ್ಲ ಅಂದಾಜುಗಳನ್ನು ಮೀರಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಅಂತಿಮ ಗಳಿಕೆಯ ಸಂಖ್ಯೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗಬಹುದಾದರೂ, ಹಿಂದಿ ಚಲನಚಿತ್ರ ರಂಗದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ಆರಂಭ ಪಡೆದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular