HomeUncategorizedBREAKING: ಧರ್ಮಸ್ಥಳಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ: 3 ಅಸ್ಥಿಪಂಜರಗಳ DNA ಮ್ಯಾಚ್, ಮೃತರ ಗುರುತು ಪತ್ತೆ

BREAKING: ಧರ್ಮಸ್ಥಳಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ: 3 ಅಸ್ಥಿಪಂಜರಗಳ DNA ಮ್ಯಾಚ್, ಮೃತರ ಗುರುತು ಪತ್ತೆ

ಮಂಗಳೂರು: ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಅಸ್ಥಿಪಂಜರದ ಬಗ್ಗೆ ಧೃಢವಾಗಿದ್ದು, ರಹಸ್ಯ ಬಯಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಮೂರು ಅಸ್ಥಿಪಂಜರಗಳ ಗುರುತು ಪತ್ತೆಯಾಗಿದ್ದು, ಅವರ ಕುಟಿಂಬ ಸದಸ್ಯರ ಡಿಎನ್ ಎ ಜೊತೆ ಮ್ಯಾಚ್ ಆಗಿದೆ. ವೈಜ್ಞಾನಿಕ ಡಿಎನ್‌ಎ (DNA) ಪರಿಶೀಲನೆಯಲ್ಲಿ ಮೃತರ ಗುರುತು ಪತ್ತೆಯಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ (27 )ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಎಂಬುವವರ ಅಸ್ಥಿಪಂಜರ ಪತ್ತೆಯಾಗಿದೆ. ಡಿಎನ್ ಎ ಮ್ಯಾಚ್ ಆಗಿದೆ. ಈ ಹಿನ್ನೆಲೆಯಲ್ಲಿ ಎಸ್ ಐಟಿಗೆ ಮನವಿ ಮಾಡಿದರೆ ಅಸ್ಥಿಪಂಜರ ಪಡೆಯಲು ಕುಟುಂಬದವರಿಗೆ ಅವಕಾಶವಿದೆ. ಈ ಬಗ್ಗೆ ಎಸ್ ಐಟಿ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular