HomeKarnatakaSHOCKING : ಮನುಷ್ಯನಲ್ಲ, ಇಲಿಯೇ ಕಳ್ಳ! ತುಮಕೂರಿನ ಜ್ಯುವೆಲ್ಲರಿ ಅಂಗಡಿಯಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ...

SHOCKING : ಮನುಷ್ಯನಲ್ಲ, ಇಲಿಯೇ ಕಳ್ಳ! ತುಮಕೂರಿನ ಜ್ಯುವೆಲ್ಲರಿ ಅಂಗಡಿಯಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು.!

ತುಮಕೂರು: ಸಾಮಾನ್ಯವಾಗಿ ಚಿನ್ನಾಭರಣ ಕಳ್ಳತನ ಎಂದರೆ ಶಟರ್ ಒಡೆದು, ಬೀಗ ಮುರಿದು ಕಳ್ಳರು ಕೈಚಳಕ ತೋರಿರುತ್ತಾರೆ. ಆದರೆ ತುಮಕೂರಿನಲ್ಲಿ ನಡೆದಿರುವ ಘಟನೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಂಗಡಿಯ ಶಟರ್ ಮುರಿದಿಲ್ಲ, ಬೀಗ ಒಡೆದಿಲ್ಲ. ಆದರೂ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಕೊನೆಗೆ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳತನದ ಹಿಂದಿರುವುದು ಮನುಷ್ಯನಲ್ಲ, ಇಲಿ ಎಂಬುದು ಬೆಳಕಿಗೆ ಬಂದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ‘ಇಲಿ ಕಳ್ಳತನ’

ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ಸಿಬ್ಬಂದಿ ಬೆಳಿಗ್ಗೆ ಅಂಗಡಿ ತೆರೆದಾಗ 10 ಚಿನ್ನದ ಉಂಗುರಗಳು ಹಾಗೂ 3 ಚಿನ್ನದ ಸರಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ದೃಶ್ಯಗಳಲ್ಲಿ ಇಲಿಯೊಂದು ಅಂಗಡಿಗೆ ನುಗ್ಗಿ, ಚಿನ್ನಾಭರಣಗಳನ್ನು ಒಂದೊಂದಾಗಿ ಬಾಯಲ್ಲಿ ಕಚ್ಚಿಕೊಂಡು ಎಳೆದುಕೊಂಡು ಹೋಗಿ ಅಂಗಡಿಯೊಳಗಿನ ತನ್ನ ಬಿಲದಲ್ಲಿ ಸಂಗ್ರಹಿಸುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.

ಬಿಲದಿಂದಲೇ ಸಿಕ್ಕ ಚಿನ್ನಾಭರಣಗಳು

ಸಿಬ್ಬಂದಿ ಬಿಲವನ್ನು ಪರಿಶೀಲಿಸಿದಾಗ ಅದರೊಳಗೆ 10 ಚಿನ್ನದ ಉಂಗುರಗಳು ಮತ್ತು 3 ಚಿನ್ನದ ಸರಗಳು ಪತ್ತೆಯಾಗಿವೆ. ಒಟ್ಟು ಸುಮಾರು ₹10 ಲಕ್ಷ ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಇಡೀ ರಾತ್ರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮೊದಲು ಅಂಗಡಿಯೊಳಗೆ ಓಡಾಡುತ್ತಿದ್ದ ಇಲಿ ಕಾಣಿಸಿಕೊಂಡಿದೆ. ಬಳಿಕ ಸಂಪೂರ್ಣ ದೃಶ್ಯಗಳನ್ನು ಪರಿಶೀಲಿಸಿದಾಗ, ಚಿನ್ನಾಭರಣ ಇಟ್ಟಿದ್ದ ಟ್ರೇನಲ್ಲಿದ್ದ ಗಮ್ ಹಾಗೂ ಚಿನ್ನದ ಟ್ಯಾಗ್ ಪ್ರೈಸ್ ಹಾಕುವ ಪೇಪರ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಗಮ್ ಹಾಗೂ ಪೇಪರ್ ಅನ್ನು ಆಹಾರ ಎಂದು ಭಾವಿಸಿದ ಇಲಿ ಅವುಗಳನ್ನು ತಿನ್ನಲು ಬಂದ ವೇಳೆ, ಅದರೊಂದಿಗೆ ಚಿನ್ನಾಭರಣವನ್ನೂ ಎಳೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ನಂತರ ಅಂಗಡಿ ಮಾಲೀಕರಿಗೆ ಪರಿಚಯವಿದ್ದ ಪ್ಲೈವುಡ್ ಕೆಲಸಗಾರನೊಬ್ಬ ಬಂದು ಅಂಗಡಿಯ ಮೂಲೆಮೂಲೆಗಳನ್ನು ಪರಿಶೀಲನೆ ನಡೆಸಿದಾಗ, ಕಳೆದುಹೋಗಿದ್ದ ಎಲ್ಲಾ ಚಿನ್ನಾಭರಣಗಳು ಪತ್ತೆಯಾಗಿವೆ.“ಚಿನ್ನ ರಿಕವರಿ ಆಯ್ತು, ಆದರೆ ಕಳ್ಳ ಮಾತ್ರ ಸಿಗಲಿಲ್ಲ” ಎಂದು ಅಂಗಡಿ ಮಾಲೀಕರು ಘಟನೆ ಕುರಿತು ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ. ಈ ವಿಚಿತ್ರ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ‘ಇಲಿಯ ಕಳ್ಳತನ’ದ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಈ ಅಪರೂಪದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. “ಕಳ್ಳನಲ್ಲ… ಇಲಿ ಕದ್ದ ಚಿನ್ನ!”, “ಇದು ಸಿನಿಮಾದಲ್ಲೂ ನೋಡಿರಲಿಲ್ಲ!” ಎಂಬಂತಹ ಕಾಮೆಂಟ್‌ಗಳು ಹರಿದುಬರುತ್ತಿವೆ. ಸಿಸಿಟಿವಿ ವಿಡಿಯೋ ಕೂಡ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ವಿಚಿತ್ರ ಘಟನೆ ಸಾರ್ವಜನಿಕರ ಕುತೂಹಲ ಕೆರಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular