HomeKarnatakaRamayana Trailer Review : ರಾಮಾಯಣ'ದಲ್ಲಿ ಅದ್ಭುತ VFX, ಭವ್ಯ ದೃಶ್ಯಗಳು ; ಪ್ರೇಕ್ಷಕರಿಗೆ ರೋಮಾಂಚನಕಾರಿ...

Ramayana Trailer Review : ರಾಮಾಯಣ’ದಲ್ಲಿ ಅದ್ಭುತ VFX, ಭವ್ಯ ದೃಶ್ಯಗಳು ; ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ

ಭಾರತೀಯ ಜನಪ್ರಿಯ ತಾರೆಯರಾದ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ಅಮಿತಾಭ್ ಬಚ್ಚನ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಶೋಭನಾ ಸೇರಿದಂತೆ ಹಲವು ಖ್ಯಾತ ಕಲಾವಿದರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’. ಈ ಸಿನಿಮಾಗಾಗಿ ವಿಶ್ವದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಿಂದ ಈವರೆಗೆ ಬಿಡುಗಡೆಯಾದ ಪ್ರತಿಯೊಂದು ಅಪ್‌ಡೇಟ್‌ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಭರ್ಜರಿ ದೃಶ್ಯ ವೈಭವದೊಂದಿಗೆ ಮೂಡಿ ಬರುತ್ತಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.

ದೃಶ್ಯ ವೈಭವಕ್ಕೆ ಬೆರಗಾದ ಪ್ರೇಕ್ಷಕರು

ದೃಶ್ಯ ಅದ್ಭುತವಾಗಿ ಮೂಡಿ ಬರುತ್ತಿರುವ ‘ರಾಮಾಯಣ’ ಚಿತ್ರದ ಟ್ರೈಲರ್ ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯದ್ದಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದುವರೆಗೆ ರಾವಣನ ಪಾತ್ರವನ್ನು ಗುಟ್ಟಾಗಿಟ್ಟಿದ್ದ ಚಿತ್ರತಂಡ ಇದೀಗ ಆ ಪಾತ್ರವನ್ನು ಬಹಿರಂಗಪಡಿಸಿದೆ.ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಮತ್ತು ಅಭಿನಯ ಎಲ್ಲರ ಗಮನ ಸೆಳೆದಿದೆ. ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಅವರ ಶಾಂತ ಹಾಗೂ ಸೌಮ್ಯ ಅಭಿನಯ ಮೆಚ್ಚುಗೆ ಪಡೆಯುತ್ತಿದೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕೂಡ ಗಮನ ಸೆಳೆದಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಯಾವುದೇ ಖರ್ಚಿಗೂ ಹಿಂದೆ ಸರಿಯದೆ ಹಾಲಿವುಡ್ ಮಟ್ಟದ ದೃಶ್ಯ ವೈಭವದೊಂದಿಗೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಟ್ರೈಲರ್ ಆರಂಭದಲ್ಲೇ ರಾವಣನ ಪರಿಚಯದ ದೃಶ್ಯ ಪ್ರೇಕ್ಷಕರನ್ನು ಸೆಳೆಯುತ್ತದೆ. ಈ ಇಂಟ್ರೋ ದೃಶ್ಯವೇ ಸಿನಿಮಾದ ಪ್ರಮುಖ ಹೈಲೈಟ್ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರೈಲರ್‌ನ ಪ್ರಮುಖ ಹೈಲೈಟ್‌ಗಳು

ರಾಮಾಯಣದ ಕಥೆ ಎಲ್ಲರಿಗೂ ಪರಿಚಿತವಾಗಿದ್ದರೂ, ಈ ಸಿನಿಮಾ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭಾವನೆ ಟ್ರೈಲರ್‌ನ ದೃಶ್ಯಗಳಿಂದ ಮೂಡುತ್ತದೆ. ಈ ಹಿಂದೆ ಬಂದ ರಾಮಾಯಣ ಆಧಾರಿತ ಸಿನಿಮಾಗಳಿಗಿಂತ ವಿಭಿನ್ನವಾಗಿ, ಅದ್ಭುತ ದೃಶ್ಯಗಳು ಮತ್ತು ಭರ್ಜರಿ ಗ್ರಾಫಿಕ್ಸ್ ಮೂಲಕ ಚಿತ್ರವನ್ನು ತಯಾರಿಸಲಾಗಿದೆ. ರಾವಣ ಮತ್ತು ಇಂದ್ರನ ನಡುವಿನ ಯುದ್ಧ, ರಾಮನ ಸ್ವಯಂವರ, ಕೈಕೇಯಿಯ ಬೇಡಿಕೆ, ನಂತರದ ವನವಾಸದಂತಹ ಪ್ರಮುಖ ಘಟನೆಗಳನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಕಥೆ ಎಲ್ಲರಿಗೂ ತಿಳಿದಿದ್ದರೂ, ಅದನ್ನು ತೋರಿಸಿರುವ ರೀತಿ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಅನುಭವ ನೀಡಲಿದೆ ಎನ್ನಲಾಗುತ್ತಿದೆ.ಟ್ರೈಲರ್ ನೋಡಿದರೆ ಪ್ರತಿಯೊಂದು ದೃಶ್ಯವೂ ಮೈನವಿರೇಳಿಸುವಂತಿದ್ದು, ಸಿನಿಮಾ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾಗ-1 ಚಿತ್ರವು ಈ ವರ್ಷದ ನವೆಂಬರ್ 6ರಂದು ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಲಿದೆ. ಇದುವರೆಗೆ ಬಿಡುಗಡೆಯಾದ ಎಲ್ಲಾ ಅಪ್‌ಡೇಟ್‌ಗಳು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿವೆ. ಇದೀಗ ಸಿನಿಮಾ ಬಿಡುಗಡೆಯಾದ ಬಳಿಕ ಯಾವ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular