ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪ್ರೇಮಾಂಗಣದಲ್ಲಿದ್ದಾರೆಯೇ ಎನ್ನುವ ಕುತೂಹಲ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಪ್ರಸಿದ್ಧ ಕೆಫೆಯೊಂದರಲ್ಲಿ ಇಬ್ಬರೂ ಪ್ರತ್ಯಕ್ಷರಾಗಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಗಾಸಿಪ್‌ಗೆ ಕಾಲು ಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಮೃಣಾಲ್ ಠಾಕೂರ್ ಬಾಂದ್ರಾದ ಬೂಜಿ ಕೆಫೆಯಲ್ಲಿ ಕಾಣಿಸಿಕೊಂಡಿದ್ದರೆ, ಕೆಲವೇ ಕ್ಷಣಗಳ ನಂತರ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅದೇ ಸ್ಥಳದಿಂದ ಹೊರಬರುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದೇ ಸ್ಥಳದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದನ್ನು ಗಮನಿಸಿದ ನೆಟಿಜನ್‌ಗಳು, ಇಬ್ಬರ ನಡುವೆ ವಿಶೇಶ ಬಾಂಧವ್ಯವಿರಬಹುದು ಎಂದು ಚರ್ಚಿಸಲು ಪ್ರಾರಂಭಿಸಿದ್ದಾರೆ.
ಆದಾಗ್ಯೂ, ಈ ಭೇಟಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಅಲ್ಲದೆ, ಹಬ್ಬಿರುವ ಪ್ರೇಮ ವದಂತಿಗಳ ಕುರಿತು ಜೈಸ್ವಾಲ್ ಆಗಲಿ ಅಥವಾ ಮೃಣಾಲ್ ಆಗಲಿ ಯಾವುದೇ ರೀತಿಯ ಸ್ಪಷ್ಟನೆ ಅಥವಾ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಮೈದಾನದಲ್ಲಿ ಸಾಲು ಸಾಲು ಸಾಧನೆಗಳ ಮೂಲಕ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್, ಇತ್ತೀಚೆಗೆ ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು. ಪ್ರಸ್ತುತ ವಿರಾಮದಲ್ಲಿರುವ ಅವರು ಶೀಘ್ರದಲ್ಲೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮರಳಲಿದ್ದಾರೆ. ಇತ್ತ ನಟಿ ಮೃಣಾಲ್ ಠಾಕೂರ್ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಬಳಿಕ ಹಲವು ಹೊಸ ಯೋಜನೆಗಳಲ್ಲಿ ನಿರತರಾಗಿದ್ದಾರೆ. ಸದ್ಯ ಅಭಿಮಾನಿಗಳು ಈ ಇಬ್ಬರು ತಾರೆಗಳಿಂದ ಈ ವದಂತಿಗೆ ಸಂಬಂಧಿಸಿದಂತೆ ನಿಜಾಂಶ ಹೊರಬರುವುದಕ್ಕಾಗಿ ಕಾಯುತ್ತಿದ್ದಾರೆ.
Yashasvi Jaiswal dating Mrunal Thakur?😳 pic.twitter.com/dnr4FNSaEc
— Wickets Hitting (@offpacedelivery) July 26, 2026

