ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಬಳಿ ರೈಲ್ವೇ ಹಳಿ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.
ಗುಂಡಿಯಲ್ಲಿ ಮಳೆ ನೀರು ತುಂಬಿದ್ದು, ಗುಂಡಿಗೆ ಬಿದ್ದು ಎಂಟು ವರ್ಷದ ಬಾಲಕ ಯಶವಂತ್ ಸಾವನ್ನಪ್ಪಿದ್ದಾನೆ. ಬೆಳಗ್ಗೆ ಪೋಷಕರೊಂದಿಗೆ ಜಮೀನಿಗೆ ಹೋಗಿದ್ದ ಬಾಲಕ ಯಶವಂತ್ ಆಟವಾಡುತ್ತ ರೈಲು ಹಳಿ ಕಾಮಗಾರಿ ಪ್ರದೇಶಕ್ಕೆ ತೆರಳಿದ್ದ.
ಗಿಣಿಗೇರಾ- ಮೆಹಬೂಬ್ ನಗರ ರೈಲು ಹಳಿ ಕಾಮಗಾರಿ ಪ್ರದೇಶದಲ್ಲಿ ನಿರ್ಮಾಣಕ್ಕೆ ತೋರಿದ ಗುಂಡಿಯಲ್ಲಿ ನೀರು ತುಂಬಿತ್ತು. ಬಾಲಕ ಯಶವಂತನ ಸಾವಿಗೆ ಗುತ್ತಿಗೆದಾರರೇ ಕಾರಣವೆಂದು ಆರೋಪಿಸಲಾಗಿದೆ. ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

