ಮೊರಾದಾಬಾದ್(ಉತ್ತರ ಪ್ರದೇಶ): ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ AIMIM ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ, ಇದು ನ್ಯಾಯಕ್ಕೆ ಸಿಕ್ಕ ಜಯ. ಇದು ಎಲ್ಲಾ ಯುವಜನರಿಗೆ ಸಿಕ್ಕ ಜಯ ಎಂದು ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇನ್ನು ಮುಂದೆ ಸರ್ವಾಧಿಕಾರ ಸಹಿಸಲಾಗುವುದಿಲ್ಲ. ಇದು ಎಲ್ಲಾ ಯುವಜನರ ಹೋರಾಟ ಮತ್ತು ತ್ಯಾಗದ ಫಲಿತಾಂಶವಾಗಿದೆ. ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಮೋದಿ ಸರ್ಕಾರ ಬುಲ್ಡೋಜರ್ ಗಳಿಂದ ಮನೆ ಕೆಡವುವುದು, ನಮಗೆ ಬೇಕಾದುದನ್ನು ಮಾಡಬಹುದೆಂದು ಭಾವಿಸಿದರೆ ನಡೆಯುವುದಿಲ್ಲ. ಈ ಆಂದೋಲನವು ಇಂದು ಸರ್ವಾಧಿಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಯುವ ಪ್ರತಿಭಟನಾಕಾರರ ಹೋರಾಟ ಮತ್ತು ತ್ಯಾಗದ ಫಲಿತಾಂಶ. ಈ ಬೆಳವಣಿಗೆ “ಸರ್ವಾಧಿಕಾರವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ” ಎಂಬ ಸಂದೇಶವನ್ನು ರವಾನಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಚೌಕಟ್ಟಿನೊಳಗೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಬೇಕು ಮತ್ತು ಭವಿಷ್ಯದಲ್ಲಿ ರಾಜ್ಯ ಅಥವಾ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಾರದು ಎಂದು ಓವೈಸಿ ಹೇಳಿದ್ದಾರೆ.

