HomeEntertainmentಯಾರು ಹೆದರುತ್ತಾರೋ ಅವರು ಸತ್ತಂತೆ: ಸಲ್ಮಾನ್ ಖಾನ್‌ನ ನಿಗೂಢ ಪೋಸ್ಟ್ ವೈರಲ್

ಯಾರು ಹೆದರುತ್ತಾರೋ ಅವರು ಸತ್ತಂತೆ: ಸಲ್ಮಾನ್ ಖಾನ್‌ನ ನಿಗೂಢ ಪೋಸ್ಟ್ ವೈರಲ್

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ಹೇಳಿಕೆಗಳು ಬಾಲಿವುಡ್ ಅಂಗಳದಲ್ಲಿ ಯಾವಾಗಲೂ ಭಾರಿ ಸದ್ದು ಮಾಡುತ್ತಿರುತ್ತವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಹೋರಾಟಗಾರ ಸೋನಮ್ ವಾಂಗ್‌ಚುಕ್ ಪರ ಧ್ವನಿ ಎತ್ತಿದ್ದ ಸಲ್ಮಾನ್ ಖಾನ್, ಇದೀಗ ಶನಿವಾರ (ಜುಲೈ 25) ಮುಂಜಾನೆ ಹಂಚಿಕೊಂಡಿರುವ ಹೊಸ ಜಿಮ್ ಸೆಲ್ಫಿ ಹಾಗೂ ನಿಗೂಢ ಶೀರ್ಷಿಕೆ ಮೂಲಕ ಇಂಟರ್‌ನೆಟ್‌ನಲ್ಲಿ ಮತ್ತೆ ಧೂಳೆಬ್ಬಿಸಿದ್ದಾರೆ.

ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಕ್ಕೆ ವಿಮರ್ಶಕರಿಂದ ವ್ಯಕ್ತವಾಗಿದ್ದ ಟೀಕೆಗಳಿಗೆ ಪರೋಕ್ಷವಾಗಿ ಶೋಲೆ ಸಿನಿಮಾದ ಮಾಸ್ ಡೈಲಾಗ್ ಮೂಲಕವೇ ಸಲ್ಲು ಖಡಕ್ ಟಾಂಗ್ ನೀಡಿದ್ದಾರೆ.

ಜೋ ಡರ್ ಗಯಾ, ವೋ ಮರ್ ಗಯಾ: ತಂದೆ ಬರೆದ ಐಕಾನಿಕ್ ಡೈಲಾಗ್ ನೆನೆದ ಸಲ್ಮಾನ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶನಿವಾರ ಮುಂಜಾನೆ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವರ್ಕೌಟ್ ನಂತರದ ಶರ್ಟ್‌ಲೆಸ್ ಫೋಟೋ ಹಂಚಿಕೊಂಡಿರುವ 58ರ ಹರೆಯದ ಸಲ್ಮಾನ್, ತಮ್ಮ ಸಿಕ್ಸ್ ಪ್ಯಾಕ್ ಆ್ಯಬ್ಸ್ ಹಾಗೂ ಬಲಿಷ್ಠ ಬೈಸೆಪ್ಸ್ ಪ್ರದರ್ಶಿಸಿದ್ದಾರೆ.

ಈ ಫಿಟ್ ಲುಕ್ ಫೋಟೋಗೆ ಸಲ್ಮಾನ್ ಖಾನ್ ಹೆದರಿದರು.. ಹೌದು, ಯಾರು ಹೆದರುತ್ತಾರೋ ಅವರು ಸತ್ತಂತೆ” (Salman Khan darrrrr gaya Hmmmm, jo darr gaya vo mar gaya) ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ವಿಶೇಷವೆಂದರೆ, ‘ಜೋ ಡರ್ ಗಯಾ, ವೋ ಮರ್ ಗಯಾ’ ಎಂಬುದು ಬಾಲಿವುಡ್‌ನ ಸೂಪರ್‌ಹಿಟ್ ಸಿನಿಮಾ ‘ಶೋಲೆ’ಯ ಗಬ್ಬರ್ ಸಿಂಗ್‌ನ ಐಕಾನಿಕ್ ಡೈಲಾಗ್ ಆಗಿದ್ದು, ಈ ಐತಿಹಾಸಿಕ ಸಾಲುಗಳನ್ನು ಬರೆದಿದ್ದು ಸ್ವತಃ ಸಲ್ಮಾನ್ ಖಾನ್ ಅವರ ತಂದೆ, ಹಿರಿಯ ಬರಹಗಾರ ಸಲೀಂ ಖಾನ್ ಎಂಬುದು ಗಮನಾರ್ಹ

ಸೋನಮ್ ವಾಂಗ್‌ಚುಕ್‌ಗೆ ಮನವಿ ಹಾಗೂ ನೀಟ್ ವಿದ್ಯಾರ್ಥಿಗಳಿಗೆ ಕಿವಿಮಾತು:

ಇದಕ್ಕೂ ಮುನ್ನ, ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರಿಗೆ ನಿರಶನ ಹಿಂತೆಗೆದುಕೊಳ್ಳುವಂತೆ ಸಲ್ಮಾನ್ ಖಾನ್ ಬಹಿರಂಗ ಮನವಿ ಮಾಡಿದ್ದರು:

ಸೋನಮ್ ವಾಂಗ್‌ಚುಕ್‌ಗೆ ಆಹಾರದ ಆಫರ್: “ಸೋನಮ್, ಇದು ಸಾಕು ಸಹೋದರ, ಇನ್ಮುಂದೆ ನಿರಶನ ಮುಂದುವರಿಸಬೇಡಿ. ಭವಿಷ್ಯದ ಹೋರಾಟಕ್ಕೆ ನಿಮ್ಮ ಶಕ್ತಿಯನ್ನು ಕಾಯ್ದಿರಿಸಿ, ಏನಾದರೂ ಆಹಾರ ಸೇವಿಸಿ. ಬೇಕಿದ್ದರೆ ನನ್ನ ಮನೆಯಿಂದಲೇ ಊಟ ಕಳುಹಿಸಿಕೊಡುತ್ತೇನೆ” ಎಂದು ಪ್ರೀತಿಯಿಂದ ಕೋರಿದ್ದರು.

ರಾಜಕೀಯ ದುರುಪಯೋಗಕ್ಕೆ ಎಚ್ಚರಿಕೆ: ಪ್ರಧಾನಿ ಮೋದಿ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿ ಟ್ವೀಟ್ ಮಾಡಿರುವುದನ್ನು ಉಲ್ಲೇಖಿಸಿದ ಸಲ್ಲು, “ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಭದ್ರತೆ ನಮಗೆ ಮುಖ್ಯ. ಪ್ರಧಾನಿಗಳೇ ಭರವಸೆ ನೀಡಿರುವುದರಿಂದ ಪ್ರತಿಭಟನೆ ಕೈಬಿಟ್ಟು ಮನೆಗೆ ಹಿಂತಿರುಗಿ. ಈ ಹೋರಾಟವನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದುರುಪಯೋಗಪಡಿಸಿಕೊಳ್ಳಬಾರದು” ಎಂದು ಕರೆ ನೀಡಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular