HomeLatest Newsಕಾಂಗ್ರೆಸ್ ವಿದ್ಯಾರ್ಥಿಗಳ ಹಿತಕ್ಕಾಗಿ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್...

ಕಾಂಗ್ರೆಸ್ ವಿದ್ಯಾರ್ಥಿಗಳ ಹಿತಕ್ಕಾಗಿ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ದೆಹಲಿಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಕುರಿತ ಪ್ರತಿಭಟನೆಗಳ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ತೀವ್ರಗೊಂಡಿದೆ. ಈ ನಡುವೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಅವರು, “ಕಾಂಗ್ರೆಸ್ ವಿದ್ಯಾರ್ಥಿಗಳ ಹಿತ ಕಾಪಾಡುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ತಪ್ಪಿತಸ್ಥರು ಯಾರೇ ಆಗಿರಲಿ, ಯಾವುದೇ ಪಕ್ಷದವರಾಗಿರಲಿ ಅವರನ್ನು ಪ್ರೋತ್ಸಾಹಿಸುವ, ರಕ್ಷಿಸುವ ಹಾಗೂ ಬೆಂಬಲಿಸುವ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್ ಒಪ್ಪುವುದಿಲ್ಲ, ಆ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ, ಪ್ರಕರಣ ದಾಖಲಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

”ತಪ್ಪಿತಸ್ಥರು ಯಾರೇ ಆಗಿರಲಿ, ಯಾವುದೇ ಪಕ್ಷದವರಾಗಿರಲಿ ಅವರನ್ನು ಪ್ರೋತ್ಸಾಹಿಸುವ, ರಕ್ಷಿಸುವ ಹಾಗೂ ಬೆಂಬಲಿಸುವ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್ ಒಪ್ಪುವುದಿಲ್ಲ, ಆ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ, ಪ್ರಕರಣ ದಾಖಲಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಚರ್ಚಿಸಬೇಕಾದ ಮುಖ್ಯ ವಿಷಯ ಬೇರೆಯೇ ಇದೆ. ವಿದ್ಯಾರ್ಥಿಗಳ ಭವಿಷ್ಯದ ಹಿತರಕ್ಷಣೆಯ ಕುರಿತು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಕ್ಕೆ

@BJP4Karnataka ನಾಯಕರು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸುವುದು ಹಾಸ್ಯಾಸ್ಪದ ಮಾತ್ರವಲ್ಲ ಅತ್ಯಂತ ಬಾಲಿಶತನದ್ದು. ಕಾಂಗ್ರೆಸ್ ವಿದ್ಯಾರ್ಥಿಗಳ ಹಿತ ಕಾಯಲು ಪ್ರತಿಭಟಿಸಿದರೆ ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ! ಇದು ವಿದ್ಯಾರ್ಥಿಗಳ ಬಗ್ಗೆ, ಅವರ ಭವಿಷ್ಯದ ಬಗ್ಗೆ ಬಿಜೆಪಿಗಿರುವ ನಿರ್ಲಕ್ಷ್ಯತನವನ್ನು ನಿರೂಪಿಸುತ್ತದೆ. ಬಿಜೆಪಿ ನಾಯಕರೇ, ನೀವು ಪ್ರತಿಭಟಿಸುವುದೇ ಆದರೆ ಕೇಂದ್ರದ ಅಸಮರ್ಥ ಶಿಕ್ಷಣ ಸಚಿವರ ರಾಜಿನಾಮೆಗಾಗಿ ಪ್ರತಿಭಟಿಸಿ, NEET ಅವ್ಯವಸ್ಥೆಯನ್ನು ಸರಿಪಡಿಸಲು ಪ್ರತಿಭಟಿಸಿ, ಯುವಜನರ ಉದ್ಯೋಗ ಭದ್ರತೆ, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಪ್ರತಿಭಟಿಸಿ.. ಹೀಗೆ ಮಾಡಿದಲ್ಲಿ ನೀವು ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಸ್ವಲ್ಪವಾದರೂ ಗಳಿಸಬಹುದು.”ಎಂದು ಅವರು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular