HomeLatest Newsನ್ಯಾಚುರಲ್ ಸ್ಟಾರ್ ನಾನಿ ಜೊತೆಗಿನ ಅಪರೂಪದ ಅನುಬಂಧ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ: ನ್ಯಾಷನಲ್ ಕ್ರಶ್ ಹೇಳಿದ್ದೇನು?

ನ್ಯಾಚುರಲ್ ಸ್ಟಾರ್ ನಾನಿ ಜೊತೆಗಿನ ಅಪರೂಪದ ಅನುಬಂಧ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ: ನ್ಯಾಷನಲ್ ಕ್ರಶ್ ಹೇಳಿದ್ದೇನು?

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸರಣಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಅತ್ಯಂತ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ಟಾಲಿವುಡ್ ನಟರೊಂದಿಗಿನ ತಮ್ಮ ಒಡನಾಟ ಮತ್ತು ಆತ್ಮೀಯತೆಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಪಯಣದ ಜೊತೆಗೆ ಇತ್ತೀಚೆಗಷ್ಟೇ ತೆಲುಗು ನಟ ವಿಜಯ್ ದೇವರಕೊಂಡ ಅವರನ್ನು ವರಿಸಿದ ರಶ್ಮಿಕಾ, ಮದುವೆಯ ನಂತರ ಮತ್ತೆ ತಮ್ಮ ವೃತ್ತಿಜೀವನದಲ್ಲಿ ಬ್ಯಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಹಲವು ಆತ್ಮೀಯ ಸ್ನೇಹಿತರನ್ನು ಹೊಂದಿರುವ ರಶ್ಮಿಕಾ, ಟಾಲಿವುಡ್ ನಟರೊಬ್ಬರನ್ನು ತಮ್ಮ ಸ್ವಂತ ಸಹೋದರನಂತೆ ಭಾವಿಸುತ್ತಾರಂತೆ. ಆ ನಟ ಬೇರಾರೂ ಅಲ್ಲ, ನ್ಯಾಚುರಲ್ ಸ್ಟಾರ್ ನಾನಿ.

2018 ರಲ್ಲಿ ತೆರೆಕಂಡ ‘ದೇವದಾಸ್’ ಸಿನಿಮಾದಲ್ಲಿ ನಾನಿ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಕಾರಣವಾಯಿತು. ರಶ್ಮಿಕಾ ಅವರನ್ನು ನಾನಿ ತಮ್ಮ ಸ್ವಂತ ತಂಗಿಯಂತೆ ಕಾಣುತ್ತಾರೆ. ವಿಶೇಷವೆಂದರೆ, ನಾನಿ ಅವರು ವಿಜಯ್ ದೇವರಕೊಂಡ ಅವರಿಗೂ ಅತ್ಯಂತ ಆಪ್ತ ಸ್ನೇಹಿತರಾಗಿದ್ದಾರೆ. ವಿಜಯ್ ಅವರ ವೃತ್ತಿಜೀವನದ ಆರಂಭದ ‘ಎವಡೆ ಸುಬ್ರಮಣ್ಯಂ’ ಸಿನಿಮಾದಲ್ಲಿ ನಾನಿ ಜೊತೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿ ಗುರುತಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿನಿಮಾಗಳ ವಿಷಯಕ್ಕೆ ಬಂದರೆ, ಮದುವೆಯ ನಂತರ ರಶ್ಮಿಕಾ ಅಭಿನಯದ ‘ಕಾಕ್ ಟೇಲ್ 2’ ಸಿನಿಮಾ ತೆರೆಕಂಡಿತ್ತು. ಪ್ರಸ್ತುತ ಅವರು ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಪತಿ ವಿಜಯ್ ದೇವರಕೊಂಡ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ವಿಜಯ್ ಮತ್ತು ರಾಹುಲ್ ಕಾಂಬಿನೇಶನ್‌ನಲ್ಲಿ ಬಂದಿದ್ದ ‘ಟ್ಯಾಕ್ಸಿವಾಲಾ’ ಸೂಪರ್ ಹಿಟ್ ಆಗಿದ್ದರಿಂದ, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ‘ರಣಬಾಲಿ’ ಚಿತ್ರದ ಮೇಲೆಯೂ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular