HomeLatest Newsಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಗ್ಯಾರಂಟಿ ಇಲ್ಲದೇ ₹20 ಲಕ್ಷದವರೆಗೆ ಶಿಕ್ಷಣ ಸಾಲ –...

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಗ್ಯಾರಂಟಿ ಇಲ್ಲದೇ ₹20 ಲಕ್ಷದವರೆಗೆ ಶಿಕ್ಷಣ ಸಾಲ – ಇವರಿಗಷ್ಟೇ ಅವಕಾಶ

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ (PM Vidyalaxmi) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯನ್ನು ನವೆಂಬರ್ 2024ರಲ್ಲಿ ಆರಂಭಿಸಲಾಗಿದ್ದು, ಯಾವುದೇ ಜಾಮೀನು (Collateral) ಅಥವಾ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ದೇಶದಾದ್ಯಂತ ಇರುವ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಸರ್ಕಾರದ ಮಾಹಿತಿ ಪ್ರಕಾರ, ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಇವರಲ್ಲಿ ಸುಮಾರು 7 ಲಕ್ಷ ಹೊಸ ವಿದ್ಯಾರ್ಥಿಗಳಿದ್ದಾರೆ. ₹10 ಲಕ್ಷದವರೆಗೆ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ.

ಯಾರಿಗೆ ಅರ್ಹತೆ?

  • ಮೆರಿಟ್ ಅಥವಾ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಅರ್ಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಪದವಿ (Degree) ಮತ್ತು ಡಿಪ್ಲೊಮಾ (Diploma) ಕೋರ್ಸ್‌ಗಳಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
  • ಎಲ್ಲಾ ಆದಾಯ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
  • ಮೆರಿಟ್ ಅಥವಾ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರಬೇಕು.
  • ಮ್ಯಾನೇಜ್‌ಮೆಂಟ್ ಕೋಟಾ ಅಥವಾ ಇತರೆ ಕೋಟಾದ ಮೂಲಕ ಪ್ರವೇಶ ಪಡೆದವರು ಅರ್ಹರಲ್ಲ.
  • ಮಂಜೂರು ಮಾಡುವ ಸಾಲದ ಮೊತ್ತವು ಕೋರ್ಸ್ ಶುಲ್ಕ ಹಾಗೂ ಸಂಬಂಧಿತ ವೆಚ್ಚಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಸಾಲದ ಮೊತ್ತಕ್ಕೆ ಯಾವುದೇ ನಿಗದಿತ ಗರಿಷ್ಠ ಮಿತಿಯನ್ನು ವಿಧಿಸಿಲ್ಲ.

ಯೋಜನೆಯ ಪ್ರಮುಖ ಪ್ರಯೋಜನಗಳು

  • ಶಿಕ್ಷಣ ಸಾಲ ಪಡೆಯಲು ಯಾವುದೇ ಜಾಮೀನು ಅಥವಾ ಗ್ಯಾರಂಟಿ ಅಗತ್ಯವಿಲ್ಲ.
  • ₹7.5 ಲಕ್ಷದವರೆಗೆ ಶಿಕ್ಷಣ ಸಾಲಕ್ಕೆ ಸರ್ಕಾರ ಬ್ಯಾಂಕ್‌ಗಳಿಗೆ 75% ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
  • ವಾರ್ಷಿಕ ಕುಟುಂಬ ಆದಾಯ ₹4.5 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ 100% ಬಡ್ಡಿ ಸಬ್ಸಿಡಿ ದೊರೆಯುತ್ತದೆ.
  • ವಾರ್ಷಿಕ ಕುಟುಂಬ ಆದಾಯ ₹4.5 ಲಕ್ಷದಿಂದ ₹8 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ₹10 ಲಕ್ಷದವರೆಗೆ ಶಿಕ್ಷಣ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಲಭ್ಯ.
  • ಅನುಸೂಚಿತ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಹಾಗೂ ಸಹಕಾರಿ ಬ್ಯಾಂಕ್‌ಗಳ ಮೂಲಕ ಶಿಕ್ಷಣ ಸಾಲ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು PM ವಿದ್ಯಾಲಕ್ಷ್ಮಿ ಯುನಿಫೈಡ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ಸಲ್ಲಿಸಲು:

  • ಹೆಸರು
  • ಆಧಾರ್ ಸಂಖ್ಯೆ
  • ಇ-ಮೇಲ್ ವಿಳಾಸ
  • ಮೊಬೈಲ್ ಸಂಖ್ಯೆ

ಇತ್ಯಾದಿ ಮೂಲಭೂತ ಮಾಹಿತಿಯನ್ನು ನೀಡಿ ನೋಂದಣಿ ಮಾಡಬೇಕು.

ನಂತರ ಲಾಗಿನ್ ಮಾಡಿ:

  • ಕೋರ್ಸ್ ವಿವರ
  • ಶಿಕ್ಷಣ ಸಂಸ್ಥೆಯ ವಿವರ
  • ಸಾಲ ಪಡೆಯಲು ಬಯಸುವ ಬ್ಯಾಂಕ್ ಆಯ್ಕೆ
    • ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಇದೇ ಪೋರ್ಟಲ್ ಮೂಲಕ ಅರ್ಜಿಯ ಸ್ಥಿತಿಯನ್ನು (Application Status) ಕೂಡ ಪರಿಶೀಲಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular