HomeLatest NewsBIG NEWS : ಶಾಪಿಂಗ್ ಪ್ರಿಯರಿಗೆ ಬಿಗ್ ಶಾಕ್..! ಇನ್ಮುಂದೆ ಆನ್‌ಲೈನ್-ಆಫ್‌ಲೈನ್‌ನಲ್ಲಿ ಡಿಸ್ಕೌಂಟ್‌, ಆಫರ್‌ಗಳಿಗೆ ಬ್ರೇಕ್...

BIG NEWS : ಶಾಪಿಂಗ್ ಪ್ರಿಯರಿಗೆ ಬಿಗ್ ಶಾಕ್..! ಇನ್ಮುಂದೆ ಆನ್‌ಲೈನ್-ಆಫ್‌ಲೈನ್‌ನಲ್ಲಿ ಡಿಸ್ಕೌಂಟ್‌, ಆಫರ್‌ಗಳಿಗೆ ಬ್ರೇಕ್ ?

ಶಾಪಿಂಗ್ ಮಾಡುವವರಿಗೆ ಆಘಾತಕಾರಿ ಸುದ್ದಿ. ಮುಂದಿನ ದಿನಗಳಲ್ಲಿ ಡಿಸ್ಕೌಂಟ್‌, ಕ್ಯಾಶ್‌ಬ್ಯಾಕ್‌, ಕಾರ್ಡ್‌ ಆಫರ್‌ಗಳು ಹಾಗೂ ವಿಶೇಷ ಪ್ರಚಾರಗಳು ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಕಂಪನಿಗಳ ಮೇಲಿನ ಒತ್ತಡವೂ ಹೆಚ್ಚಿದೆ. ಇದರ ಪರಿಣಾಮವಾಗಿ ಹಲವು ಕಂಪನಿಗಳು ಡಿಸ್ಕೌಂಟ್‌ ಮತ್ತು ಆಫರ್‌ಗಳನ್ನು ಹಂತಹಂತವಾಗಿ ಕಡಿಮೆ ಮಾಡುತ್ತಿವೆ.

ಯಾವುದೇ ವಸ್ತು ಖರೀದಿಸುವಾಗ ಹೆಚ್ಚಿನ ಗ್ರಾಹಕರು ಮೊದಲು ಡಿಸ್ಕೌಂಟ್‌, ಆಫರ್‌, ಕ್ಯಾಶ್‌ಬ್ಯಾಕ್‌ ಅಥವಾ ಬ್ಯಾಂಕ್‌ ಕಾರ್ಡ್‌ ಪ್ರೋಮೋಶನ್‌ಗಳನ್ನೇ ಪರಿಶೀಲಿಸುತ್ತಾರೆ. ಹಬ್ಬ-ಹರಿದಿನಗಳು ಹಾಗೂ ವಿಶೇಷ ಮಾರಾಟದ ಸಂದರ್ಭಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ ಮಳಿಗೆಗಳಲ್ಲಿ ಭರ್ಜರಿ ರಿಯಾಯಿತಿಗಳು ದೊರೆಯುತ್ತವೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಆಫರ್‌ಗಳು ಹಿಂದಿನಂತೆ ಲಭ್ಯವಾಗದಿರಬಹುದು ಎನ್ನಲಾಗುತ್ತಿದೆ.

ಡಿಸ್ಕೌಂಟ್‌ಗಳ ಯುಗ ಅಂತ್ಯವಾಗುತ್ತಿದೆಯೇ?

ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಬಟ್ಟೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಯಾವುದೇ ವಸ್ತು ಖರೀದಿಸುವಾಗ ಗ್ರಾಹಕರು ಹೆಚ್ಚು ರಿಯಾಯಿತಿ ನೀಡುವ ವೇದಿಕೆಗಳನ್ನು ಹುಡುಕುತ್ತಾರೆ. ಮಾರಾಟ ಹೆಚ್ಚಿಸಲು ಕಂಪನಿಗಳು ಡಿಸ್ಕೌಂಟ್‌ಗಳನ್ನು ನೀಡುತ್ತಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಇವುಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷದೊಂದಿಗೆ ಹೋಲಿಸಿದರೆ ಈ ವರ್ಷ ಡಿಸ್ಕೌಂಟ್‌ಗಳು ಸುಮಾರು 5 ರಿಂದ 7 ಶೇಕಡಾವರೆಗೆ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಜಾಗತಿಕ ಬೆಳವಣಿಗೆಗಳು ಹಾಗೂ ಚಿಪ್‌ಗಳ ಕೊರತೆಯಿಂದ ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ 30 ರಿಂದ 40 ಶೇಕಡಾವರೆಗೆ ಏರಿಕೆಯಾಗಿದೆ. ಅದೇ ರೀತಿ ಏರ್‌ ಕಂಡೀಷನರ್‌, ಫ್ರಿಜ್‌, ಸ್ಮಾರ್ಟ್‌ ಟಿವಿಗಳ ಬೆಲೆ 15 ರಿಂದ 20 ಶೇಕಡಾವರೆಗೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅನೇಕ ಬ್ರ್ಯಾಂಡ್‌ಗಳು ತಮ್ಮ ರಿಯಾಯಿತಿಗಳನ್ನು ಕಡಿಮೆ ಮಾಡಿವೆ.

ಕಚ್ಚಾ ವಸ್ತುಗಳ ಬೆಲೆ ಏರಿಕೆ ಪ್ರಮುಖ ಕಾರಣ

ಜಾಗತಿಕ ಮಟ್ಟದಲ್ಲಿ ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ಮೆಮೊರಿ ಚಿಪ್‌ಗಳ ಬೆಲೆಗಳು ಏರಿಕೆಯಾಗಿದೆ. ಇದರಿಂದ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಜೊತೆಗೆ ಹಲವು ದೇಶಗಳ ನಡುವಿನ ಯುದ್ಧಗಳಿಂದ ಸಾಗಾಟ ವೆಚ್ಚವೂ ಏರಿಕೆಯಾಗಿದೆ.

ಇದರಿಂದ ಕಂಪನಿಗಳ ಲಾಭಾಂಶ ಕುಸಿಯುತ್ತಿದ್ದು, ಡಿಸ್ಕೌಂಟ್‌, ಕ್ಯಾಶ್‌ಬ್ಯಾಕ್‌ ಹಾಗೂ ಕಾರ್ಡ್‌ ಆಫರ್‌ಗಳನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಿಯಾಯಿತಿಗಳು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕಂಪನಿಗಳು ಹೇಳುತ್ತಿವೆ.

ಈ ಬೆಳವಣಿಗೆಗಳು ಶಾಪಿಂಗ್‌ ಪ್ರಿಯರಿಗೆ ನಿರಾಸೆ ಉಂಟುಮಾಡಿದ್ದು, ಜಾಗತಿಕ ಪರಿಸ್ಥಿತಿ ಸುಧಾರಿಸದಿದ್ದರೆ ಉತ್ಪನ್ನಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಜೊತೆಗೆ ಡಿಸ್ಕೌಂಟ್‌ ಮತ್ತು ಆಫರ್‌ಗಳು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular