HomeLatest Newsಕೇಂದ್ರ ಸರ್ಕಾರದ ಅದ್ಭುತ ಯೋಜನೆ : ಮನೆ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸಿದರೆ ಖಾತೆಗೆ ₹78 ಸಾವಿರವರೆಗೆ...

ಕೇಂದ್ರ ಸರ್ಕಾರದ ಅದ್ಭುತ ಯೋಜನೆ : ಮನೆ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸಿದರೆ ಖಾತೆಗೆ ₹78 ಸಾವಿರವರೆಗೆ ಸಬ್ಸಿಡಿ..!

ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳುವವರಿಗೆ ಸರ್ಕಾರದಿಂದ ಭಾರೀ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಬಿಲ್‌ ಭಾರ ಕಡಿಮೆಯಾಗುವುದಲ್ಲದೆ, ಹಲವು ಮನೆಗಳಿಗೆ ಉಚಿತ ವಿದ್ಯುತ್‌ ಸೌಲಭ್ಯವೂ ದೊರೆಯಲಿದೆ.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಎಂದರೇನು?

ಕೇಂದ್ರ ಸರ್ಕಾರವು 2024ರಲ್ಲಿ ಈ ಯೋಜನೆಯನ್ನು ಆರಂಭಿಸಿತು. ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳು ತಮ್ಮ ಮನೆಗಳ ಮೇಲ್ಚಾವಣಿಯಲ್ಲಿ ರೂಫ್‌ಟಾಪ್ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.

2026-27ರ ಆರ್ಥಿಕ ವರ್ಷದ ಅಂತ್ಯದೊಳಗೆ 1 ಕೋಟಿ ಮನೆಗಳಲ್ಲಿ ರೂಫ್‌ಟಾಪ್ ಸೋಲಾರ್ ವ್ಯವಸ್ಥೆ ಅಳವಡಿಸುವ ಗುರಿ ಸರ್ಕಾರ ಹೊಂದಿದೆ. ಯೋಜನೆಯಡಿ ಲಾಭಾರ್ಥಿಗಳು ಗರಿಷ್ಠ 300 ಯೂನಿಟ್‌ಗಳವರೆಗೆ ವಿದ್ಯುತ್ ಉತ್ಪಾದನೆಗೆ ಅರ್ಜಿ ಸಲ್ಲಿಸಬಹುದು. ಸಬ್ಸಿಡಿ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಬ್ಸಿಡಿ ಎಷ್ಟು ಸಿಗುತ್ತದೆ?

  • 1 ಕಿಲೋವಾಟ್ ಸೋಲಾರ್ ವ್ಯವಸ್ಥೆ – ₹30,000 ಸಬ್ಸಿಡಿ
  • 2 ಕಿಲೋವಾಟ್ ಸೋಲಾರ್ ವ್ಯವಸ್ಥೆ – ₹60,000 ಸಬ್ಸಿಡಿ
  • 3 ಕಿಲೋವಾಟ್ ಸೋಲಾರ್ ವ್ಯವಸ್ಥೆ – ಗರಿಷ್ಠ ₹78,000 ಸಬ್ಸಿಡಿ

ಯಾರು ಅರ್ಹರು?

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು
  • ಮಧ್ಯಮ ಅಥವಾ ಕೆಳಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿರಬೇಕು
  • ಸ್ವಂತ ಮನೆ ಹೊಂದಿರಬೇಕು ಹಾಗೂ ಸೋಲಾರ್ ಅಳವಡಿಸಲು ಸೂಕ್ತ ಮೇಲ್ಚಾವಣಿ ಇರಬೇಕು
  • ಮಾನ್ಯವಾದ ವಿದ್ಯುತ್ ಸಂಪರ್ಕ ಕಡ್ಡಾಯ
  • ಇದೇ ಉದ್ದೇಶಕ್ಕೆ ಬೇರೆ ಯಾವುದೇ ಸರ್ಕಾರಿ ಸಬ್ಸಿಡಿ ಪಡೆದಿರಬಾರದು

ಅರ್ಜಿ ಸಲ್ಲಿಸುವ ವಿಧಾನ

  1. pmsuryaghar.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  2. Consumer ಆಯ್ಕೆಯನ್ನು ಕ್ಲಿಕ್ ಮಾಡಿ
  3. Apply Now ಮೇಲೆ ಕ್ಲಿಕ್ ಮಾಡಿ
  4. ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ
  5. OTP ಮೂಲಕ ಲಾಗಿನ್ ಆಗಿ
  6. ಹೆಸರು, ಇಮೇಲ್, ವಿಳಾಸ, ರಾಜ್ಯ, ಜಿಲ್ಲೆ, ಪಿನ್‌ಕೋಡ್ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
  7. ಕೊನೆಯಲ್ಲಿ Save ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅಧಿಕೃತ ಪೋರ್ಟಲ್ pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.ಈ ಯೋಜನೆ 2024ರಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular