HomeUncategorizedಕಳಪೆ ಕಾಮಗಾರಿ: ಅಧಿಕಾರಿ ಸಸ್ಪೆಂಡ್: ಕಂಪೆನಿ ಬ್ಲಾಕ್ ಲಿಸ್ಟ್ ಗೆ: ಸಚಿವ ಕೃಷ್ಣ ಬೈರೇಗೌಡ ಆದೇಶ

ಕಳಪೆ ಕಾಮಗಾರಿ: ಅಧಿಕಾರಿ ಸಸ್ಪೆಂಡ್: ಕಂಪೆನಿ ಬ್ಲಾಕ್ ಲಿಸ್ಟ್ ಗೆ: ಸಚಿವ ಕೃಷ್ಣ ಬೈರೇಗೌಡ ಆದೇಶ

ಬೆಂಗಳೂರು: ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ಇನ್‌ಫ್ರಾಸ್ಟಕ್ಟರ್‌ ಪ್ರೋಗ್ರಾಮ್ ಅಡಿಯಲ್ಲಿ ಆರ್ಟೀಲಿಯಲ್ ಮತ್ತು ಸಬ್ ಆರ್ಟೀಲಿಯಲ್ ರಸ್ತೆಗಳಲ್ಲಿ ಕೈಗೊಂಡಿರುವ ಆಸ್ಟಾಲಿಂಗ್ ಕಾಮಗಾರಿಗಳಲ್ಲಿ ಕಳಪೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಕಾಮಗಾರಿ ನಿರ್ವವಹಿಸಿರುವ ಸಂದರ್ಭದಲ್ಲಿ ಕ್ರಿಯಾಯೋಜನೆ ಅನುಸಾರ ಸರಿಯಾದ ಪ್ರಮಾಣದ ಹಾಗೂ ದಪ್ಪ ಆಸ್ಪಾಲ್ಡಿಂಗ್ ಮಾಡದೆ ಕಡಿಮೆ ಪ್ರಮಾಣದಲ್ಲಿ ಆಸ್ಪಾಲಿಂಗ್ ಮಾಡಿರುವುದು ಕಂಡುಬಂದಿರುತ್ತದೆ.

ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ವಾರ್ಡ್ ಸಂಖ್ಯೆ 110 ಸಂಪಂಗಿರಾಮನಗರ ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರಾದ ಪೂಜಾರಪ್ಪ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ 1957ರ ಸಿಸಿಎ ನಿಯಮ 10 ರನ್ನಯ ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಕಳಪೆ ಕಾಮಗಾರಿ ಕಾರಣಕ್ಕೆ ಗುತ್ತಿಗೆದಾರರ ಕಂಪೆನಿಯನ್ನೂ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular