ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಟಿಎಂಸಿಯ 20 ಸಂಸದರು ಕೇಂದ್ರದ ಎನ್ ಡಿಎಗೆ ಬೆಂಬಲ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಂಡಿರುವಾಗಲೇ ಟಿಎಂಸಿ ಸಂಸದರು ಈ ಘೋಷಣೆ ಮಾಡಿದ್ದು, ದೀದಿಗೆ ಶಾಕ್ ನೀಡಿದ್ದಾರೆ.
ಸಂಸದರು ತಮ್ಮ ನಿಲುವನ್ನು ಲೋಕಸಭಾ ಸ್ಪೀಕರ್ ಡಾ.ಓಂ ಬಿರ್ಲಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ತಿಳಿಸಿದ್ದಾರೆ.
ಸದ್ಯ ಟಿಎಂಸಿಯಲ್ಲಿ 28 ಲೋಕಸಭಾ ಸದಸ್ಯರು ಮತ್ತು 12 ರಾಜ್ಯಸಭಾ ಸದಸ್ಯ ಸದಸ್ಯರಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಕೋಲಿ ಘೋಷ್, ನಾನೂ ಸೇರಿದಂತೆ 20 ಸಂಸದರು ಎನ್ ಡಿಎ ಬೆಂಬಲಿಸಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಗೆ ಒಅತ್ರದ ಮೂಲಕ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಮುಖ್ಯಸಚೇತಕರಾಗಿ ಮುಂದುವರೆಯುವುದಾಗಿ ಹೇಳಿದ ಅವರು ಸಂಸದರ ಜೊತೆ ಸಮಾಲೋಚನೆ ನಡೆಸಿಯೇ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

